ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ ಕಾರ್ಯಕ್ರಮದ ಸಮಾರೋಪ, ಆ.28 ರಂದು

0
85

ಕಲಬುರಗಿ: ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ನಿತ್ಯ ಸತ್ಯವಾಗಿರುವ ಬಸವಾದಿ ಶರಣರ ವಚನ ಸಾಹಿತ್ಯವನ್ನು ಜನರ ಮನೆ-ಮನಕ್ಕೆ ಮುಟ್ಟಿಸುವ ದಿಸೆಯಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ತಿಂಗಳ ಪರ್ಯಂತವಾಗಿ ಹಮ್ಮಿಕೊಂಡು ಬರುತ್ತಿರುವ ‘ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ ಮನಬೆಸೆದು ಮಾಡೋದಿದೆ ಮಾನವೀಕರಣ’ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಆ.28 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಹಾತ್ಮಾ ಬಸವೇಶ್ವರ ಬಡಾವಣೆಯ್ಸ ಎಂ.ಜಿ.ರಸ್ತೆಯಲ್ಲಿರುವ ಶ್ರೀಗುರು ನಾಗಲಿಂಗೇಶ್ವರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಬಸವಾದಿ ಶರಣರ ಬದುಕು ಹಾಗೂ ವಿಚಾರಗಳನ್ನು ಇಂದಿನ ಸಮಾಜದಲ್ಲಿ ಬಿತ್ತುವ ಮೂಲಕ ಶರಣರ ಕನಸು ನನಸು ಮಾಡಲು ಹೊರಟಿದ್ದ ಪತ್ರಕರ್ತರೂ ಆಗಿದ್ದ ಶರಣ ಸಾಹಿತಿಗಳಾಗಿದ್ದ ಲಿಂಗೈಕ್ಯ ಲಿಂಗಣ್ನ ಸತ್ಯಂಪೇಟೆ ಅವರು ವಚನ ಬದುಕು ಬದುಕಿದವರು. ಹಾಗೆಯೇ ಶರಣ ಧರ್ಮ ಹಾಗೂ ಶರಣರಿಗೆ ಅಪಚಾರವೆಸಗುವ ಸಂಗತಿಗಳು ನಡೆದಾಗಲೊಮ್ಮೆ ಕೆಂಡಾಮಂಡಲವಾಗುತ್ತಿದ್ದ ಲಿಂಗೈಕ್ಯ ಸಿದ್ರಾಮಪ್ಪ ಬಾಲಪ್ಪಗೋಳ ಅವರು ಶರಣರ ತತ್ವ-ಸಿದ್ಧಾಂತಗಳಿಗೆ ಕಟಿಬದ್ಧರಾಗಿದ್ದರು.

Contact Your\'s Advertisement; 9902492681

ಹಾಗಾಗಿ, ಇಂಥ ಮಹಾನ್ ವ್ಯಕ್ತಿಗಳ ನೆನಪಿಗೋಸ್ಕರ ಈ ಕಾರ್ಯಕ್ರಮ ಹಮ್ಮಿಕೊಂಡು ಇಂದಿನ ಯುವ ಜನಾಂಗದಲ್ಲಿ ವಚನ ಕಳೆ, ಬಸವ ಕಳೆ ಉಂಟು ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಲಿದೆ ಎಂದು ಅಕಾಡೆಮಿಯ ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ, ಶಿವಾನಂದ ಮಠಪತಿ, ಬಿ.ಎಂ.ಪಾಟೀಲ ಕಲ್ಲೂರ ವಿವರಿಸಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ.ಡಿ ಜಿ ಸಾಗರ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮೂಢನಂಬಿಕೆ ಮೀರಿ-ಮೂಲ ನಂಬಿಕೆ ತೋರಿ ವಿಷಯದ ಕುರಿತು ಹೆಚ್.ಕೆ.ಇ.ಸಂಸ್ಥೆಯ ಬಾಲಕೀಯರ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸುಜಾತಾ ಡಿ.ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಎಸ್.ಜಿ.ಎನ್.ಕಾಲೇಜಿನ ಮುಖ್ಯಸ್ಥ ಶಿವರಾಜ ಶೀಲವಂತ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಉದ್ದಿಮೆದಾರ ಡಾ.ಚಿದಂಬರರಾವ ಪಾಟೀಲ ಮರಗುತ್ತಿ ಸೇರಿದಂತೆ ಇನ್ನಿತರರು ಗಣ್ಯರು ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here