ಅಂಗದ ದುರ್ಗುಣಗಳನ್ನು ಕಳೆದು ಸದ್ಗುಣಗಳನ್ನು ಅಳವಡಿಸಿಕೊಳ್ಳುವುದೆ ಲಿಂಗಗುಣ

0
47

ಕಲಬುರಗಿ: ಲಿಂಗವೆನ್ನುವುದು ಸ್ಥಾವರವಲ್ಲ, ಅದುಜಂಗಮ. ನಾವು ಮನಸು ಬಿಚ್ಚಿ ಮಾತನಾಡಿದರೆಅಲ್ಲಿ ನಾವು ಬೆಳಕನ್ನು ಕಾಣಬಹುದು.ಅರಿವನ್ನುಕಾಣಲು ಸಾಧ್ಯವಿದೆ.ಈ ಅರಿವಿನ ಬೆಳಕನ್ನು ಬಸವಣ್ಣನವರುಕೂಡಲ ಸಂಗನ ಶರಣರು ಮನದೆಗೆದು ಮಾತನಾಡಿದರೆ ಲಿಂಗವ ಕಾಣಬಹುದು ಎಂದರು.

ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ರವಿವಾರ 28 ರಂದುಲಿಂ. ಶ್ರೀ ರೇವಣಪ್ಪ ಸಂಗಪ್ಪ ಮೀಸೆ ಹಾಗೂ ಲಿಂ.ಡಾ. ಅನಿಲ ರೇವಣಪ್ಪ ಮೀಸೆ ಸ್ಮರಣಾರ್ಥಅರಿವಿನ ಮನೆ ೬೦೭ ನೆಯದತ್ತಿ ಕಾರ್ಯಕ್ರಮದಲ್ಲಿ ಅಂಗವೆಂದರೆ ಅಜ್ಞಾನ ಲಿಂಗವೆಂದಡೆ ಸುಜ್ಞಾನ ಎಂಬ ವಿಷಯದ ಮೇಲೆ ಅನುಭಾವ ನೀಡಿದ ಸರಕಾರಿ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಟಿ. ಆರ್. ಗುರುಬಸಪ್ಪನವರು, ಅಂಗವೆಂದರೆ ಶರೀರ, ಕಾಯ, ದೇಹಎಂದು ಮುಂತಾಗಿಕರೆಯುತ್ತೇವೆ. ಕಾಯಗುಣ, ದೇಹ ಗುಣವೆನಿಸಿಕೊಳ್ಳಬೇಕಾದರೆ ಇದಕ್ಕೆಜೀವ ವಿರಬೇಕಾದುದು ಅಗತ್ಯ. ಭೌತಿಕ ಆಸೆ, ಆಮಿಷಗಳು, ಲೌಕಿಕ ಜಂಜಾಟಗಳು. ಅಧಿಕಾರ ಲಾಲಸೆಗಳನ್ನು ಅಂಗ ಗುಣಗಳೆಂದು ಕರೆಯುತ್ತೇವೆ. ಅದಕ್ಕಾಗಿ ಅರಿಷಡ್ವರ್ಗಗಳನ್ನು ಹೊಂದಿದ ಈ ಕಾಯವನ್ನುಅಂಗವೆಂದು ಹೇಳುತ್ತೇವೆ.

Contact Your\'s Advertisement; 9902492681

ಕೇವಲ ದೇಹಗುಣಕ್ಕಾಗಿ, ಸ್ವಾರ್ಥಪರಅತಿಯಾಸೆಗಾಗಿ ಬದುಕುವುದು ಅಂಗ ಗುಣವಾಗುತ್ತದೆ.ಆದ್ದರಿಂದ ಶರಣರು ದೇಹಗುಣಗಳನ್ನು ಅಳಿದು ಲಿಂಗಗುಣಗಳನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.ಮಾಯಾ ಮೋಹಗಳನ್ನು ಮೀರಿದವನು ಲಿಂಗ ಗುಣದವನು, ಶರಣಎಂದು ಹೇಳಬೇಕಾಗುತ್ತದೆ. ಲಿಂಗವೆಂದರೆ ಪರಶಿವ. ನಮ್ಮಅರಿವಿನ ಪ್ರತೀಕವೇ ಲಿಂಗವೆಂದು ಶರಣರು ಹೇಳುತ್ತಾರೆ. ಅದನ್ನೆ ಬಸವಣ್ಣನವರುಜಗದಗಲ ಮುಗಿಲಗಲ, ಮಿಗೆಯಗಲ ನಿಮ್ಮಗಲ ಎಂದು ಹೇಳುತ್ತಾರೆ.ನಮ್ಮಅರಿವನ್ನು ಚುಳಕಾದ ಚೇತನವನ್ನಾಗಿಸಿ ಅಂಗೈಯಲ್ಲಿಟ್ಟು ಪೂಜಿಸಿವುದು ಲಿಂಗ.ಸುಜ್ಞಾನದಆಚರಣೆಅಜ್ಞಾನವಿಡಿದುಆಚರಿಸಲಾಗದು. ಲಿಂಗವಿಡಿಯುವುದೆಂದರೆಜ್ಞಾನವನ್ನು ಹಿಡಿಯುವುದುಎಂದರ್ಥ. ಲಿಂಗದೇಹಿ ಎಂದ ಮೇಲೆ ಅಲ್ಲಿ ಸುಜ್ಞಾನಿಯಾಗಿರಬೇಕು.ಜ್ಞಾನವಿರಬೇಕು.

ಆದ್ದರಿಂದಚೆನ್ನಬಸವಣ್ಣನವರು ಲಿಂಗದೇಹಿಯುಆತನು ನಡೆದುದೇದಾರಿ, ನುಡಿದುದೇಸಿದ್ಧಿ. ಆತನೇ ಸರ್ವಾಂಗ ಲಿಂಗಿ, ಆತನೇ ನಿರ್ದೇಹಿ.ಆತನುದೇಹಿಯಾಗಿದ್ದರೂ ಆತನೊಳಗಿನ ಲಿಂಗಚೈತನ್ಯ ಮಾತನಾಡುವುದರಿಂದ ಮಹಾಜ್ಞಾನಿ, ಲಿಂಗದೇಹಿ ಎಂದುಹೇಳುತ್ತಾರೆ. ನಾವು ಲಿಂಗವಿಡಿದು ಆಚರಿಸಬೇಕಲ್ಲದೆ ಅಂಗವಿಡಿದುಏನ್ನನ್ನೂಆಚರಿಸಲಾಬಾರದುಎಂದು ಸಿದ್ಧರಾಮೇಶ್ವರರು ಹೇಳುತ್ತಾರೆ.ಕಾಮ ಕ್ರೋಧಾದಿ ಮುಂತಾದ ಅರಿಷಡ್ವರ್ಗಗಳನ್ನು ಬಿಟ್ಟು ಬದುಕುವವನಿಗೆ ಲಿಂಗದೇಹಿ ಎನ್ನುತ್ತಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದಪಿ.ಡಿ.ಎಇಂಜಿನಿಯರಿಂಗಕಾಲೇಜಿನ ಪ್ರಾಂಶುಪಾಲರಾದಡಾ.ಎಸ್. ಎಸ್. ಹೆಬ್ಬಾಳೆಯವರು.ಶರಣರು ರಚಿಸಿದ ವಚನಗಳು ಬೆಳಕಿನ ಕಿಡಿಗಳು.ನಮ್ಮದೈನಂದಿನ ಬದುಕಿಗೆ ಅವು ದಾರಿದೀಪವಾಗಿವೆಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ.ವಿಲಾಸವತಿ ಖೂಬಾ, ಉಪಾಧ್ಯಕರಾದ ಡಾ.ಜಯಶ್ರೀ ದಂಡೆ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ,ಪ್ರಧಾನ ಕಾರ್ಯದರ್ಶಿ ಶ್ರೀ ಎಚ್.ಕೆ.ಉದ್ದಂಡಯ್ಯ ಹಾಗೂ ದತ್ತಿ ದಾಸೋಹಿಗಳಾದ ಶ್ರೀಮತಿ ಸುವರ್ಣಾ ಮೀಸೆ, ಡಾ.ಶಶಿಕಾಂತ ಮೀಸೆ ಉಪಸ್ಥಿತರಿದ್ದರು. ಡಾ.ಆನಂದ ಸಿದ್ಧಾಮಣಿಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here