ಶಹಾಬಾದ: ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವಣ್ಣನವರÀ ಭಾವಚಿತ್ರವನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ರವಿವಾರ ತಾಲೂಕಿನ ಭಂಕೂರ ಗ್ರಾಮದ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಂಕೂರ ಗ್ರಾಮದ ಪ್ರಕಾಶ ಪಾಟೀಲ ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಪುತ್ಥಳಿ, ಪ್ರತಿಮೆ, ಭಾವಚಿತ್ರಗಳನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುವ ಘಟನೆಗಳು ಹೆಚ್ಚುತ್ತಿದ್ದು, ಅವುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಜಗತ್ತಿಗೆ ಶಾಂತಿ, ಸೌಹಾರ್ದ, ಜಾತ್ಯತೀತ, ಕಾಯಕ, ದಾಸೋಹದ ಮಹತ್ವವನ್ನು ತಿಳಿಸಿದ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದರೇ ಅದು ಮನುಕುಲಕ್ಕೆ ಅವಮಾನ ಮಾಡಿದಂತಾಗಿದೆ.ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಶರಣಗೌಡ ಪಾಟೀಲ ಪಾಳಾ ಮಾತನಾಡಿ, ಬಸವಣ್ಣನವರÀ ಭಾವಚಿತ್ರವನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಈ ಕೃತ್ಯ ಎಸಗಿದವರನ್ನು ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಂಡು ಎಲ್ಲಾ ಜಾತಿ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು.
ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೋರಿ ಮುತ್ತಗಾ, ಚಿತ್ತಾಪೂರಿನ ನಾಗರಾಜ ಭಂಕಲಗಿ, ರವೀಂದ್ರ ಸಜ್ಜನ ಶೆಟ್ಟಿ ಮಾತನಾಡಿದರು. ಮುಖಂಡರಾದ ಡಾ. ಮಹೇಂದ್ರ ಕೋರಿ, ಆನಂದ ಪಾಟೀಲ ನರಬೋಳಿ, ಮಹೇಶ ಬಾಳಿ ರಾವೂರ, ಮಂಜುನಾಥ ವಾರದ, ಸಾಹೇಬಗೌಡ ಪಾಟೀಲ, ತಿಪ್ಪಣ್ಣ ಮೂಡಬೂಳ, ಬಸವರಾಜ ಕಲಶಟ್ಟಿ ,ಶರಣಗೌಡ ಪಾಟೀಲ , ಶಹಾಬಾದ ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮಾಜಿ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಕಾಂತು ಮಾಚನೂರ , ಮಲ್ಲಿಕಾರ್ಜುನ ಗೊಳೇದ ತೊನಸನಹಳ್ಳಿ(ಎಸ್), ದಯಾನಂದ ಸೇರಿದಂತೆ ನೂರಾರು ಬಸವ ಅಭಿಮಾನಿಗಳು ಇದ್ದರು. ನಂತರ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.