ಪರಿಕರ ಮಾರಾಟಗಾರರಿಗೆ ಕೃಷಿ ಡಿಪ್ಲೋಮಾ ಕೋರ್ಸ ಪ್ರಮಾಣ ಪತ್ರ ವಿತರಣೆ

0
96

ಕಲಬುರಗಿ; ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರ ವ್ಯಾಪ್ತಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ಮ್ಯಾನೇಜ ಹೈದ್ರಬಾದ-ಸಮೇತಿ (ಉತ್ತರ), ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರ, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೋಟನೂರ(ಡಿ), ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ  ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ಡಿಪ್ಲೋಮಾ ಕೋರ್ಸ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಕರಾಗಿ ಆಗಮಿಸಿದ ಡಾ. ಎಂ. ಹನುಮಂತಪ್ಪಾ, ಮಾನ್ಯ ಗೌರವಾನ್ವಿತ ಕುಲಪತಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರ ರವರು ಮಾತನಾಡಿ ಕೃಷಿಯಲ್ಲಿ ಕಡಿಮೆ ರಾಸಾಯನಿಕ ಬಳಕೆ ಹಾಗೂ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಲು ಸಲಹೆ ನೀಡಿದರು.

Contact Your\'s Advertisement; 9902492681

ಅಧ್ಯಕ್ಷತೆಯನ್ನು ವಹಿಸಿದ ಡಾ. ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ರವರು ಮಾತನಾಡಿ ಆಧುನಿಕ ಬೇಸಾಯದ ಕೈಪಿಡಿ ಹಾಗೂ ವೈಜ್ಞಾನಿಕ ಮಾಹಿತಿ ಪಡೆದು ರೈತರಿಗೆ ಸಲಹೆ ನೀಡುವಂತೆ ಹೇಳಿದರು.

ಡಾ. ಎಂ. ಗೋಪಾಲ್, ಪ್ರಾಧ್ಯಾಪಕರು ಮತ್ತು ರಾಜ್ಯ ನೋಡಲ್ ಅಧಿಕಾರಿಗಳು (ದೇಶಿ) ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ ರವರು ಪ್ರಾಸ್ತಾವಿಕ ನುಡಿ ಹಾಗೂ ಪ್ರಮಾಣ ಪತ್ರದ ಮಹತ್ವವನ್ನು ವಿವರಿಸಿದರು. ಡಾ. ಎಸ್. ಎಸ್. ಅಂಗಡಿ, ವಿಸ್ತರಣಾ ನಿರ್ದೇಶಕರು, ಧಾರವಾಡ ರವರು ಮಾತನಾಡಿ ಪ್ರಾಚೀನ ಕೃಷಿ ಹಾಗೂ ಆಧುನಿಕ ಕೃಷಿಯ ವ್ಯತ್ಯಾಸವನ್ನು ತಿಳಿಸಿದರು.

ಮಲ್ಲಿಕಾರ್ಜುನ ಡಿ. ವ್ಯವಸ್ಥಾಪನ ಮಂಡಳಿ ಸದಸ್ಯರು, ಕೃ.ವಿ.ವಿ, ರಾಯಚೂರು ರವರು ಮಾತನಡಿ ಕಲ್ಯಾಣ ಕರ್ನಾಟಕದಲ್ಲಿ ಜೇನು ಕೃಷಿಯ ಅನುಕುಲತೆಗಳನ್ನು ವಿವರಿಸಿದರು. ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ), ಡಾ. ಬಿ.ಎಂ. ದೊಡಮನಿ, ಸಹ ಸಂಶೋಧನಾ ನಿರ್ದೇಶಕರು, ಅನೀಲ್ ರಾಠೋಡ್, ಸಹಾಯಕ ಕೃಷಿ ನಿರ್ದೇಶಕರು, ಕೋಟನೂರ್ (ಡಿ), ಯಾಸ್ಮಿನ್, ಕೃಷಿ ಅಧಿಕಾರಿ, ಡಾ. ಪಾಂಡುರಂಗರಾವ್, ಸಂಚಾಲಕರು (ದೇಶಿ), ಅಶೋಕ್ ಬೆಣ್ಣೂರ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ. ರಾಜು ಜಿ. ತೆಗ್ಗಳ್ಳಿ, ಕೆವಿಕೆ, ಮುಖ್ಯಸ್ಥರು ಸ್ವಾಗತಿಸಿದರು, ಡಾ. ಜಹೀರ್ ಅಹೆಮದ್, (ವಿಜ್ಞಾನಿ-ಸಸ್ಯರೋಗಶಾಸ್ತ್ರ) ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಎಂ.ಸಿ. ಪಾಟಿಲ್, ವಂದಿಸಿದರು. ಕೋಟನೂರ್ ಡಿ ಮತ್ತು ಕೆವಿಕೆ, ಯಲ್ಲಿ ತರಬೇತಿ ಪಡೆದ ಡಿಪ್ಲೋಮಾ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here