ಅಧ್ಯಾತ್ಮ ಚಿಂತನೆಯಿಂದ ಜೀವನ ಸಾರ್ಥಕ; ಭಾಸ್ಕರ್ ರಾವ್

0
41

ಶಹಾಪುರ; ಸಾಂಸಾರಿಕ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಜಾತಿ ಧರ್ಮಕ್ಕಿಂತ ಮನುಷ್ಯತ್ವ ಶ್ರೇಷ್ಠ.ಎಂದು ತೋರಿಸಿಕೊಟ್ಟವರು ಶ್ರೀರಂಗಲಿಂಗೇಶ್ವರ ಅವಧೂತರು. ಅವರ ತತ್ವ ಆದರ್ಶಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸುಂದರ ಹೂದೋಟವಾಗುತ್ತದೆ ಎಂದು ರೈತ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಭಾಸ್ಕರ ರಾವ್ ಮುಡಬೂಳ ತಿಳಿಸಿದರು.

ತಾಲೂಕಿನ ಮುಡುಬೂಳ ಗ್ರಾಮದಲ್ಲಿ ಅವಧೂತ ಶ್ರೀ ರಂಗಲಿಂಗೇಶ್ವರರ ಪುಣ್ಯತಿಥಿ ಅಂಗವಾಗಿ ಆಯೋಜಿಸಲಾದ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು, ಅವದೂತರ ಭಾವಚಿತ್ರಕ್ಕೆ ಪುಸ್ಪರ್ಚನೆ ಮಾಡಿ ಮಾತನಾಡಿದ ಅವರು, ಅವಧೂತ ಶ್ರೀ ರಂಗಲಿಂಗೇಶ್ವರ ಅವರು, ಆಡಂಬರ ಜೀವನ, ಡಾಂಬಿಕ ಬದುಕು ಬದುಕದೆ ಸತ್ಯ ಧರ್ಮ ನ್ಯಾಯದ ಹಾದಿಯಲ್ಲಿ ಬದುಕಿ ತೋರಿಸಿ ದೇವರಾದವರು. ಮನುಷ್ಯನು ದೇವರಾಗಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಬದುಕಿನಲ್ಲಿ ಏನೇ ಕಷ್ಟ ಸುಖಗಳು ಬಂದರೂ ಅರಿವಿನ ಬದುಕಿನಿಂದ ದಾರ್ಶನಿಕರ ವಿಚಾರಧಾರೆಗಳ ಜತೆಗೆ ಆಧ್ಯಾತ್ಮಿಕವಾಗಿ ಲೌಕಿಕ ಜೀವನದಲ್ಲಿ ಪುರಾಣ, ಪುಣ್ಯ ಕಥೆಗಳನ್ನು ಕೇಳುವ, ಓದುವ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರು, ಹೆಚ್ಚು ಹೆಚ್ಚು ಹಣ ಗಳಿಸುವ, ಕೂಡಿಡುವ, ಐಷಾರಾಮಿ ಬದುಕು ನಡೆಸುವ ಪೈಪೋಟಿಯೇ ಭ್ರಷ್ಟಾಚಾರ, ಅಸಮಾನತೆ, ಬಡತನ ಮೊದಲಾದ ಅನಿಷ್ಟಗಳಿಗೆ ಕಾರಣವಾಗಿವೆ. ಮನುಷ್ಯನ ಮೂಲ ಮನಸ್ಸು ಬದಲಾಗದೆ ಇವನ್ನೆಲ್ಲ ನಿವಾರಣೆ ಮಾಡುತ್ತೇನೆ ಎಂದು ಹೊರಟರೆ ಅದೊಂದು ಭ್ರಮೆ ಅಷ್ಟೆ ! ಮನಃ ಪರಿವರ್ತನೆಯೊಂದೇ ಸಾಮಾಜಿಕ ಅನಿಷ್ಟ ನಿವಾರಣೆಗೆ ಇರುವ ದಾರಿಯಾಗಿದ್ದು, ಅದು ನೈತಿಕ, ಆಧ್ಯಾತ್ಮಿಕ ತಳಹದಿ ಯಿಂದ ಮಾತ್ರ ಸಾಧ್ಯ. ನುಡಿದಂತೆ ನಡೆದು ನಡೆದಂತೆ ನುಡಿದವರು ಅವಧೂತ ಶ್ರೀ ರಂಗಲಿಂಗೇಶ್ವರರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ಸಾರ್ಥಕ ಬದುಕಿನ ಅರ್ಥ ತೋರಿಸಿಕೊಟ್ಟ ಸಂತ ಆತನನ್ನು ದಿನಾ ನೆನೆಯುವುದೇ ಪರಮಾನಂದ ಎಂದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ಶರಣಪ್ಪ ಸಲಾದಪೂರ್ ಅವರು ಇಂದು ಜಾತಿ ಜಾತಿಗಳ ನಡುವೆ ಹೊಂದಾಣಿಕೆ ಕೊರತೆ ಇದೆ.ಮುಂದಿನ ಜನಾಂಗವನ್ನು ನೈತಿಕ, ಆಧ್ಯಾತ್ಮಿಕವಾಗಿ ಸಬಲರನ್ನಾಗಿಸಬೇಕಾದ ಮತ್ತು ಅವರಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅನಿವಾರ್ಯ ನಮ್ಮ ಮುಂದಿದೆ. ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು, ಸಂಸ್ಕಾರ ಇತ್ಯಾದಿ ಸಾಂಪ್ರದಾಯಿಕ ತಳಹದಿಯ ಮೇಲೆಯೇ ಭವ್ಯ ಭಾರತದ ಭವಿಷ್ಯ ನೆಲೆನಿಂತಿದೆ. ಹೀಗಾಗಿ, ಯುವ ಪೀಳಿಗೆಗೆ ಸಂಸ್ಕಾರದ ಶಿಕ್ಷಣ ನೀಡಬೇಕಾದ್ದು ಅನಿವಾರ್ಯ. ಜನಹಿತ ಲೋಕಕಲ್ಯಾಣಕ್ಕಾಗಿ ಅವತರಿಸಿದ ಹಲವಾರು ಮಹಾನುಭಾವರು ತಾವು ನೋವು ತಿಂದು ಸಮಾಜಕ್ಕೆ ಒಳಿತನ್ನು ಮಾಡಿದ್ದಾರೆ. ಮೌಲ್ಯಗಳ ಅಳಿವು, ಉಳಿವು ಮನುಷ್ಯನ ಆಚರಣೆಯಲ್ಲಿವೆ. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿಯ ಫಲ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ, ಅತೃಪ್ತಿಗಳಿಗೆ ಕಾರಣವೆಂದರೆ ತಪ್ಪಾಗದು.

ಈ ಕಾರ್ಯಕ್ರಮದಲ್ಲಿ ತ್ರಿಮೂರ್ತಿ ಯುಟ್ಯೂಬ್ ಚಾನೆಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಕಾಂಗ್ರೆಸ ಹಿರಿಯ ಮುಖಂಡ ಗೌಡಪ್ಪ ಗೌಡ ಆಲ್ದಾಳ್ ಅವರು, ಮೌಢ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ದೂರ ಮಾಡಿ ಸಮಾನತೆ ಸಮಾಜ ನಿರ್ಮಾಣ ಮಾಡುವ ಮೂಲಕ ಅವಧೂತ ಶ್ರೀ ರಂಗಲಿಂಗೇಶ್ವರ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ಸುಧಾರಕರಾಗಿದ್ದಾರೆ. ಇಂಥ ಮಹಾತ್ಮರ ಪುಣ್ಯಭೂಮಿಯಲ್ಲಿ ಜನಿಸಿದ ನಾವೇ ಧನ್ಯರು ಎಂದರು.

ಸಾಧಕರಿಗೆ ಸನ್ಮಾನ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಗೋವಿಂದರಾಜ ಆಲ್ದಾಳ, ಮಲ್ಲಯ್ಯ ಪೋಲಂಪಲ್ಲಿ, ಶ್ರೀಧರ ಯಕ್ಷಿಂತಿ, ಪ್ರಭುದೇವ ದೇಸಾಯಿ, ಸಣ್ಣ ನಿಂಗಪ್ಪ ನಾಯ್ಕೋಡಿ, ರಾಘವೇಂದ್ರ, ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅವಧೂತ ಶ್ರೀ ರಂಗಲಿಂಗೇಶ್ವರ ಪೀಠದ ತ್ರಿಶೂಲಪ್ಪ ಶರಣರು, ಗಂಗಾರಾಮ್ ಮಹಾರಾಜ ವಹಿಸಿದ್ದರು, ವೇದಿಕೆ ಮೇಲೆ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಮರೆಪ್ಪ ಪ್ಯಾಟಿ, ಕಾರ್ಯದರ್ಶಿ ಹಣಮಂತ ದೊರೆಟೋಕಾಪುರ್, ಗೌರವಾಧ್ಯಕ್ಷ ರವಿ ಯಾಕ್ಷಿಂತಿ, ಹಿರಿಯ ನ್ಯಾಯವಾದಿ ಆರ್ ಚನ್ನಬಸ್ಸು, ಬಿಜೆಪಿ ಹಿರಿಯ ಮುಖಂಡ ಬಸವರಾಜ್ ವಿಭೂತಿಹಳ್ಳಿ, ಅಪ್ಪು ಗೌಡ ಪಾಟೀಲ್ ಯಾಳಗಿ, ಶಿವಣ್ಣ ಸಾವು ನರಗೋಳಿ, ಶಿವಮಾನಪ್ಪ ಹವಾಲ್ದಾರ್ ಸಂಗನಗೌಡ ಮಾಲಿಪಾಟೀಲ್ ಈರಣ್ಣ ದೇಸಾಯಿ ಮಲ್ಲಿನಾಥ ದ್ಯಾವಗೊಂಡ ಭೀಮನಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು, ಉಪನ್ಯಾಸಕ ವೀರಣ್ಣ ಹವಾಲ್ದಾರ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಭಾಗ್ಯ ಕಾರ್ಯಕ್ರಮ ನಿರೂಪಿಸಿದರು ಬಿಡಪ್ಪ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here