ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ 81ನೇ ನಾಡಹಬ್ಬ

0
7

ಸುರಪುರ:ರಾಜ್ಯದಲ್ಲಿಯೇ ಅತ್ಯಂತ ಹಳೆಯ ಸಂಘಗಳಲ್ಲಿ ಒಂದಾಗಿರುವ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕಿತ್ತು,ದುರ್ದೈವ ಲಭಿಸಿಲ್ಲ ಈ ವರ್ಷವಾದರು ಲಭಿಸಲಿ ಅದಕ್ಕೆ ನಾನು ಸ್ಥಳಿಯ ಶಾಸಕರಿಗೂ ಮನವಿ ಮಾಡುವುದಾಗಿ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಹಾಸ್ಯ ಕಲಾವಿದೆ ಗಂಗಾವತಿ ಪ್ರಾಣೇಶ ಮಾತನಾಡಿದರು,

ನಗರದ ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘ ದಿಂದ ಹಮ್ಮಿಕೊಂಡಿದ್ದ 81ನೇ ನಾಡಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾನು ಇಲ್ಲಿಗೆ 13ನೇ ಬಾರಿ ಬರುತ್ತಿರುವೆ, ಹಿಂದೆ ನನಗೆ ಕಾರ್ಯಕ್ರಮಕ್ಕೆ ಸ್ವತಃ ಬುದ್ಧಿವಂತ ಶೆಟ್ಟರವರೆ ಬಂದು ಕರೆದಿದ್ದರು,ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಈ ಸಂಘ ಕಾರಣ, ನಾನು ಹೊರಗಡೆ ಭಾಗವಹಿಸಿದ ಮೊದಲ ಕಾರ್ಯಕ್ರಮ ಈ ಸಂಘದ್ದಾಗಿದೆ ಎಂದರು.

Contact Your\'s Advertisement; 9902492681

ರಾಜ್ಯದಲ್ಲಿ 81 ವರ್ಷಗಳ ಕಾಲ ಒಂದು ಸಂಘ ಉಳಿದು ಬೆಳೆದು ಕನ್ನಡ ನಾಡು ನುಡಿ ಸೇವೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ,ಇನ್ನು ಕೆಲವು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಲಿದೆ,ರಾಜ್ಯದಲ್ಲಿ ಇದುವರೆಗೆ ಎಲ್ಲಾ ಹೆಸರಾಂತ ಸಾಹಿತಿಗಳು ಬಂದಿರುವ ಸಂಘ ಎಂದರೆ ಇದು, ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಇಲ್ಲಿ ನಡೆಯಲಿ,ಇಲ್ಲಿಗೆ ನನ್ನ ಗುರು ಬೀಚಿ ಬಂದಿದ್ದು ತುಂಬಾ ಸಂತೋಷವಾಗಿದೆ ನಾನು ಬೀಚಿಯವರು ಬಂದಾಗ 2 ತಿಂಗಳ ಮಗುವಾಗಿದ್ದೆ ಎಂದು ಸ್ಮರಿಸಿಕೊಂಡರು. ಇದು ಶರಣರ ನಾಡು ಶರಣರು ದಾಸರು ಸಂತರು ಇವರು ಯಾರೂ ಬರೀ ಮನುಷ್ಯರಲ್ಲ ಸಾಕ್ಷಾತ್ ದೇವರು, ಬುದ್ಧಿವಂತ ಶೆಟ್ಟರಂತವರು ಪ್ರತಿ ಮನೆಯಲ್ಲೂ ಹುಟ್ಟಬೇಕು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಹಾಸ್ಯ ಕಲಾವಿದೆ ಬಸವರಾಜ ಮಹಾಮನಿ ಮಾತನಾಡಿ,ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆಯಲಿ ಹೆತ್ತ ತಂದೆ ತಾಯಿಯನ್ನು ಮರೆಯಬಾರದು,ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ ಒಳ್ಳೆಯ ವಿದ್ಯಾವಂತರೇ ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ಗಿನಾನು ಕೂಡ ಈ ಸಂಘದ ಕಾರ್ಯಕ್ರಮಕ್ಕೆ ಮೂರನೇ ಬಾರಿ ಬರುತ್ತಿರುವೆ,ಪ್ರತಿಬಾರಿಯೂ ಇಲ್ಲಿಯ ಕನ್ನಡ ಸೇವೆ ಕಾರ್ಯಕ್ರಮ ಆಯೋಜನೆಯಲ್ಲಿ ಸಂಘದ ಎಲ್ಲ ಮುಖಂಡರು ಸದಸ್ಯರ ಆಸಕ್ತಿ ನೋಡಿದರೆ ತುಂಬಾ ಹೆಮ್ಮೆಯಾಗುತ್ತದೆ ಎಂದರು.

ನಂತರ ಇಬ್ಬರು ಹಾಸ್ಯ ಕಲಾವಿದರು ಮನೊರಂಜನೆಗಾಗಿ ಮಾತನಾಡುತ್ತಿದ್ದರೆ ನೆರೆದಿದ್ದ ಸಾವಿರಾರು ಜನರು ಬಿದ್ದು ಬಿದ್ದು ನಕ್ಕರು,ಕೊನೆಯ ದಿನದ ಕಾರ್ಯಕ್ರಮವಾಗಿದ್ದರಿಂದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಸೇವೆಗೈದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ,ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ,ನಬಿಲಾಲ ಮಕಾಂದಾರ ಉಪಸ್ಥಿತರಿದ್ದರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿದರು.ಮುದ್ದಪ್ಪ ಅಪ್ಪಾಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು,ಸಾಹಿತಿ ಶರಣಗೌಡ ಪಾಟೀಲ್ ಪ್ರಕಾಶ ಅಲಬನೂರ ನಿರೂಪಿಸಿ ಸ್ವಾಗಿತಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here