ವಿವಿಧ ಬೇಡೆಕೆಗಳ ಈಡೇರಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

0
12

ಸುರಪುರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಯತ ಸಂಘ ಹಸಿರು ಸೇನೆಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ,ರಾಜ್ಯದಲ್ಲಿ ನಿತ್ಯವು ಲೋಡ್ ಸೆಡ್ಡಿಂಗ್‍ನಿಂದ ರೈತರು ತೀವ್ರ ತೊಂದರೆ ಪಡುವಂತಾಗಿದೆ,ಸರಕಾರ 7 ತಾಸು ವಿದ್ಯುತ್ ನೀಡುವುದಾಗಿ ಹೇಳುತ್ತಿದೆ ಆದರೆ ವಿದ್ಯುತ್ ನೀಡುತ್ತಿಲ್ಲ,ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ ಅವುಗಳ ದುರಸ್ತಿ ಮಾಡಿಸಬೇಕು,ಶಿಕ್ಷಕರ ವರ್ಗಾವಣೆಯಿಂದ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ ಕೂಡಲೇ ಶಿಕ್ಷಕರನ್ನು ನೇಮಿಸಬೇಕು.

Contact Your\'s Advertisement; 9902492681

ರೈತರು ಬೆಳೆದ ಹತ್ತಿ ಭತ್ತಕ್ಕೆ ವೈಜ್ಞಾನಿಕ ಬೆಲೆಯೊಂದಿಗೆ ಸರಕಾರ ಖರಿದಿ ಕೇಂದ್ರಗಳನ್ನು ಆರಂಭಿಸಿ ಖರಿದಿಸಬೇಕು,ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕೇವಲ ಎರಡು ತಾಲೂಕುಗಳನ್ನು ಬರಗಾಲ ಎಂದು ಘೋಷಿಸಿರುವ ಸರಕಾರ ನಿಲುವಿಗೆ ವಿರೋಧ ವ್ಯಕ್ತಪಡಿಸಿ ಸಂಪೂರ್ಣ ಜಿಲ್ಲೆ ಬರಪೀಡಿತ ಎಂದು ಘೋಷಿಸಿ ಆರು ತಾಲೂಕುಗಳಿಗೆ ಶೀಘ್ರವೆ ಬರಗಾಲದ ಪರಿಹಾರ ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು,ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಸಚಿವರನ್ನು ಜಿಲ್ಲೆಯಾದ್ಯಂತ ಯಾವುದೇ ಗ್ರಾಮಕ್ಕೆ ಬರಲು ರೈತ ಸಂಘ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ ಮಾತನಾಡಿದರು,ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಕೆ. ವಿಜಯಕುಮಾರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಿವನಗೌಡ ರುಕ್ಮಾಪುರ,ಭೀಮಣ್ಣ ತಿಪ್ಪನಟಗಿ,ವೆಂಕಟೇಶ ಕುಪಗಲ್,ತಿಪ್ಪಣ್ಣ ಜಂಪಾ,ಮಲ್ಲಣ್ಣ ಹಾಲಬಾವಿ,ಮಾನಪ್ಪ ಕೊಂಬಿನ್,ಲೋಹಿತಕುಮಾರ ಮಂಗಿಹಾಳ,ದೇವಣ್ಣ ಎರಕಿಹಾಳ,ನಾಗಪ್ಪ ಕುಪಗಲ್,ಖುದಾಭಕ್ಷ,ರಾಮು ಕರ್ನಾಳ,ರಂಗಯ್ಯ ಬೂದುರ,ಶಿವಲಿಂಗಪ್ಪ ಕುಂಬಾರಪೇಟ,ಬಂದಗಿಸಾಬ ಕರ್ನಾಳ,ಘಾಳೆಪ್ಪ ಕುಪಗಲ್,ಮಾನಯ್ಯ ಕುಪಗಲ್,ಮಾಳಪ್ಪ ಪೂಜಾರಿ,ಭೀಮಣ್ಣ ತಿಪ್ಪನಟಗಿ,ಅಂಬ್ರೇಶ ಯರಕಿಹಾಳ,ಸೋಮನಗೌಡ ಎರಕಿಹಾಳ,ಭೀಮಯ್ಯ ಕುಪಗಲ್,ತಿರುಪತಿ ಕುಪಗಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here