ಗೆಜ್ಜಲಗಟ್ಟಾ ಪಿಹೆಚ್ ಸಿಗೆ ಸಿಬ್ಬಂದಿ ನೇಮಕಕ್ಕೆ ಗ್ರಾಪಂ ಸದಸ್ಯ ರಮೇಶ ವೀರಾಪೂರು ಆಗ್ರಹ

0
12

ರಾಯಚೂರು: ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಗೆಜ್ಜಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೀನಿಯರ್ ವರ್ಕರ್, ಫಾರ್ಮಸಿಸ್ಟ್ ಹುದ್ದೆಗಳ ಸೃಜನೆ ಮತ್ತು ಮೇಲ್ ವರ್ಕರ್ ಅನ್ನು ನೇಮಕ ಮಾಡಬೇಕು ಹಾಗೂ ಬೇರೆಡೆಗೆ ನಿಯೋಜನೆ ಮಾಡಿದ ನೌಕರರನ್ನು ಕೇಂದ್ರ ಸ್ಥಾನಕ್ಕೆ ಮರಳಿ ಬರುಂತೆ ಕ್ರಮ ತೆಗೆದುಕೊಂಡು ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ವೀರಾಪೂರು ಜಿಲ್ಲಾ ವೈದ್ಯಾಧಿಕಾರಿ ಸುರೇಶ್ ಬಾಬು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಇದರಿಂದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಕಾಲ ಕಾಲಕ್ಕೆ ನಡೆಯುತ್ತಿಲ್ಲ. ಈ ಬಗ್ಗೆ ಗ್ರಾಪಂ ನ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆ, ವಿಎಚ್ಎಸ್ಏನ್ ಸಿ ಸಭೆಗಳಲ್ಲಿ ಚರ್ಚೆ ಆಗಿದೆ. ಈ ಕುರಿತು ಈ ಹಿಂದೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದು, ಜನತೆಗೆ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಲಾಯಿತು.

Contact Your\'s Advertisement; 9902492681

ಈ ಕೂಡಲೇ ಸೀನಿಯರ್ ವರ್ಕರ್ ಮತ್ತು ಫಾರ್ಮಸಿಸ್ಟ್ ಹುದ್ದೆಯನ್ನು ಸೃಜನೆ ಮಾಡಬೇಕು. ಆಯೂಷ್ ವೈದ್ಯೆ ಸುರೇಖಾ, ಮತ್ತು ಸ್ಟಾಪ್ ನರ್ಸ್ ನಾಗರತ್ನಾ, ಮತ್ತು ಸಂತೋಷ್ ಇವರನ್ನು ಕೂಡಲೇ ಕೇಂದ್ರ ಸ್ಥಾನಕ್ಕೆ ಮರಳಿ ನಿಯೋಜನೆ ಮಾಡಬೇಕು. ಶಾಸಕರು ಸಚಿವರ ಒತ್ತಡಕ್ಕೆ ಮಣಿದು ಕೇಂದ್ರ ಸ್ಥಾನದಿಂದ ಬೇರೆಡೆಗೆ ನಿಯೋಜನೆ ಮಾಡಬಾರದು. ಜನತೆಯ ಸಮಸ್ಯೆ ಇವರಿಗೆ ಗೊತ್ತಿಲ್ಲ ಎಂದು ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿಯ ಸದಸ್ಯ ರಮೇಶ ವೀರಾಪೂರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here