ಕಲಬುರಗಿ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದ ಖರ್ಗೆ, ಅವರು ಆಶ್ರಯ ಕಾಲನಿಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಕೊಳ್ಳಲಾಗಿತ್ತು. ಹಾಗಾಗಿ, ನೋಟೀಸು ನೀಡಿ ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ. ಆದರೆ, ಸಂಸದ ಸೇರಿದಂತೆ ಬಿಜೆಪಿಯ ನಾಯಕರು ಇದನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಆಶ್ರಯ ಕಾಲನಿಯ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ತಮಗೂ ಕೂಡಾ ಸಿಂಪತಿ ಇದ್ದು ಅಲ್ಲಿನ ನಿವಾಸಿಗಳೊಂದಿಗೆ ಸಭೆ ನಡೆಸಿ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಐತಿಹಾಸಿಕ ಕೋಟೆ ಪ್ರದೇಶದಲ್ಲಿ ಅಕ್ರಮ ತೆರವು ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೋಟೆ ಪ್ರದೇಶದ ಒತ್ತುವರಿ ಕಳೆದ ಎರಡು ನೂರು ವರ್ಷಗಳಿಂದ ಇದೆ. ಈ ಕುರಿತು ನ್ಯಾಯಾಲಯದಲ್ಲಿಯೂ ಕೂಡಾ ವಿಚಾರಣೆ ನಡೆದಿತ್ತು. ಈ ಬಗ್ಗೆ ಪ್ರಶ್ನಿಸುವ ಬಿಜೆಪಿಗರು ತಮ್ಮ ಅಧಿಕಾರವಾಧಿಯಲ್ಲಿ ಏಕೆ ತೆರವುಗೊಳಿಸಲಿಲ್ಲ? ಆದರೂ ಕೂಡಾ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನರೇಗಾ ಬಾಕಿ ಹಣ: ನರೇಗಾ ಕೂಲಿ ಬಾಕಿ ಹಣ ರೂ 540 ಕೋಟಿ ಕೇಂದ್ರದಿಂದ ಬರಬೇಕಾಗಿದ್ದು ಅದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಂಸದ ಉಮೇಶ್ ಜಾಧವ ಕೇಂದ್ರದೊಂದಿಗೆ ಮಾತನಾಡಿ ಬಾಕಿ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲಾಕಿದರು.