ಸೇಡಮ್ಮಿನ ರಾಜಕಾರಣದಲ್ಲಿ ದಾರಿ ತಪ್ಪಿದ ತೇಲ್ಕೂರ್; ರೇಣುಕಾ ಸಿಂಗೆ

0
907

ಕಲಬುರಗಿ: ಯಾವುದೇ ಪ್ರಜಾಪ್ರಭುತ್ವದಲ್ಲಿ ಜನತೆಯಿಂದ ಬಹುಮತ ಪಡೆದು ಅಧಿಕಾರ ನಡೆಸುವ ಆಳುವ ಪಕ್ಷಕ್ಕೂ ಕೇಳುವ ವಿರೋಧ ಪಕ್ಷಕ್ಕೂ ಅಷ್ಟೇ ಸ್ಥಾನಮಾನಗಳಿರುತ್ತವೆ ಮತ್ತು ಇರಬೇಕು ಆದರೆ ಚುನಾವಣೆಯಲ್ಲಿ ಸೋತು, ವಿರೋಧಪಕ್ಷವಾಗಿ ಗಂಭೀರತೆಯಿಂದ ನಡೆದುಕೊಳ್ಳುವ ಬದಲು, ಜನಬೆಂಬಲದಿಂದ ಚುನಾಯಿತರಾದ ನಾಯಕರ ಬಗ್ಗೆ ದಿನ ಬೆಳಗಾದರೆ ದ್ವೇಷ ಅಸೂಯೆಯ ಮಾತನಾಡುತ್ತಾ ಕುಬ್ಜ ಕುತ್ಸಿತ ಮತಿಗಳಾಗಿ ವರ್ತಿಸುತ್ತಾ ಜನಸಾಮಾನ್ಯರಿಗೆ ದಾರಿ ತಪ್ಪಿಸಲು ಹೆಣಗುವುದು ಅತ್ಯಂತ ಹೇಯವಾದದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕಾ ಸಿಂಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ವಿರುದ್ಧ ಸ್ಪರ್ಧಿಸಿ 43,000 ಮತಗಳ ಅಂತರದಿಂದ ಸೋತಿದ್ದಾರೆ. ಚುನಾವಣೆಯಲ್ಲಿ ಅವರ ಯಾವ ಕರಾಮತ್ತುಗಳೂ ಕೆಲಸ ಮಾಡಲಿಲ್ಲ. ಚುನಾವಣೆಯ ಪರಿಣಾಮ ಡಾ. ಪಾಟೀಲ್ ಅವರ ಪಾಲಿಗೆ ಚರಿತ್ರಾರ್ಹ ಗೆಲುವಾಗಿದ್ದರೆ, ರಾಜಕುಮಾರ್ ತೇಲ್ಕೂರ ಅವರ ಪಾಲಿಗೆ ಅತ್ಯಂತ ದಯನೀಯ ಸೋಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಸೋಲು ನುಂಗಲು ಆಗದ ನುಂಗಿದರೆ ಅರಗಿಸಿಕೊಳ್ಳಲು ಆಗದ ಸಂಗತಿ. ದಿನ ಬೆಳಗಾದರೆ ಹತಾಶೆಯಿಂದ ಚಡಪಡಿಸುತ್ತಿದ್ದಾರೆ. ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲರ ಮುನ್ನಡೆ ಹಾಗೂ ಜನಪ್ರಿಯತೆಯನ್ನು ಸಹಿಸಲಾಗದೆ ಅವರ ವಿರುದ್ಧ ದ್ವೇಷವಾಂತಿಸುತ್ತಾ ಒಂದು ಸಮಸ್ಯೆಗಾಗಿ ಕಾದು ಕುಳಿತಿದ್ದರು. ಯಾವುದೇ ಜನಪರವಾದ ನೈಜ ಸಮಸ್ಯೆ ಸಿಗದೇ ಇದ್ದಾಗ ಹೆಣದ ಮೇಲಿನ ರಾಜಕಾರಣಕ್ಕಾಗಿ ಹವಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಪಕ್ಷದ ಬೆಂಬಲಿಗನಾಗಿದ್ದ ದಿವಂಗತ ಶಿವಕುಮಾರ್ ಪೂಜಾರಿ ಅವರ ಆತ್ಮಹತ್ಯೆಗೆ ನೈಜ ಕಾರಣ ಹುಡುಕಲು ಯತ್ನಿಸದೆ ತನಿಖೆಯ ವರದಿ ಬರುವವರೆಗೂ ಕಾಯದೆ ತಮ್ಮ ಪಕ್ಷದ ಸಂಸದ, ಶಾಸಕರು, ನಾಯಕರೆಲ್ಲ ತೇಲ್ಕೂರ್ ಕಲಿಸಿಕೊಟ್ಟಿದ್ದ ಗಿಳಿ ಪಾಠವನ್ನು ಗಳಪುತ್ತಿದ್ದದ್ದು ಸ್ಪಷ್ಟವಾಗಿ ತೋರುತ್ತಿತ್ತು.

ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ರೇವೂರ್ ಪಾಟೀಲರನ್ನು ಸೋಲಿಸಲು ಯತ್ನಿಸಿ ಯಶಸ್ವಿಯಾಗಿರುವ ತೇಲ್ಕೂರ್ ಅವರಿಗೆ ಸ್ವಪಕ್ಷದವರೇ ನಿಮ್ಮನ್ನು ಸೋಲಿಸಿದ್ದಾರೆ. ನೀವು ಮತ್ತೊಬ್ಬರಿಗೆ ಮಾಡಿದ್ದನ್ನೇ ಪ್ರಜ್ಞಾವಂತ ಜನರು ನಿಮಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ತೇಲ್ಕೂರ ಅವಧಿಯಲ್ಲಿ ರಾಜಕೀಯ ಧೋರಣೆಯ ಅಂತರಂಗ ಬಹಿರಂಗವನ್ನು ಅರಿತ ಸೇಡಂನ ಮಹಾಜನತೆ ನಿಮ್ಮನ್ನು ಧಿಕ್ಕರಿಸಿ ಸೂಕ್ತ ಪಾಠ ಕಲಿಸಿದ್ದಾರೆ. ಅದಕ್ಕಾಗಿ ನಿಮ್ಮ ನಡೆ ನುಡಿ ಸುಧಾರಿಸಿಕೊಂಡು ಶಕ್ತಿ ಸಾಮಥ್ರ್ಯ ವರ್ದಿಸಿಕೊಂಡು ಸಾರ್ವಜನಿಕದಲ್ಲಿ ಸಮುಚಿತವಾಗಿ ಬೆಳೆಯಲು ಯತ್ನಿಸುವುದು ಉಚಿತ. ಅದಕ್ಕೆ ಬದಲಾಗಿ ಎಲ್ಲೆಲ್ಲಿಯೋ ಯಾವುದೋ ಕಾರಣಕ್ಕಾಗಿಯೋ ಅಸೂನಿಗಿದ ವ್ಯಕ್ತಿಗಳ ಹೆಣಗಳನ್ನು ಎಳೆದು ತಂದು ನಿಮ್ಮ ಎದುರಾಳಿಗಳ ಕೊರಳಿಗೆ ನೇತು ಹಾಕುವುದನ್ನು ಬಿಟ್ಟಷ್ಟು ರಾಜಕೀಯ ಬದುಕಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಕಿವಿ ಮಾತು ಆಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here