ಕಲಬುರಗಿ: ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕು ರಾಜ್ಯಗಳ ಸಿಬಿಎಸ್‍ಸಿ ವಿದ್ಯಾರ್ಥಿಗಳ ದಕ್ಷಿಣ ವಲಯ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ಅ.19 ರಿಂದ 22 ವರೆಗೆ ನಾಲ್ಕು ದಿನಗಳಲ್ಲಿ ನಡೆದಿರುವ ಕ್ರೀಡಾಕೂಟದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಹಾಗೂ ಕೇರಳದ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಗೊಂಡಿದ್ದರು.
ಭಾನುವಾರ ದಕ್ಷಿಣ ವಲಯ ಮಟ್ಟದ ಸ್ಕೇಟಿಂಗ್ ಸಮಾರೋಪ ಸಮಾರಂಭದಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಶಾಸಕ ಅಲ್ಲಂಪ್ರಭು ಪಾಟೀಲ ಕ್ರೀಡಾಕೂಟದಲ್ಲಿ 300 ಮೀ 500 ಮೀ ಹಾಗೂ 1000 ಮೀ ಸ್ಕೇಟಿಂಗ್ ಓಟಗಳು ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಲೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ವೀರಶೆಟ್ಟಿ ಖೆಣ್ಣಿ, ಕಾರ್ಯದರ್ಶಿ ಸುರೇಶ ಬುಲಬುಲೆ, ಖಜಾಂಚಿ ಡಾ.ಸಂಪತಕುಮಾರ ಲೋಯಾ, ಜಂಟಿಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ, ನಿರ್ದೇಶಕರಾದ ಗಣೇಶ ತಪ್ಪಾಡಿಯಾ, ಎಂ.ಡಿ ಮೋಹಿನೋದ್ದಿನ್, ಸುನೀಲಕುಮಾರ ಪಾಟೀಲ, ಸಂಪತ್ತಕುಮಾರ ಗಿಲಡಾ, ಡಾ. ನಳೀನಿ ಎ, ವಿಶ್ವನಾಥ ಖೂಬಾ, ಕೇಶವರಾವ ನಿಟ್ಟೂರಕರ, ಸಂಗಮೇಶ ಮಹಾಗಾಂವಕರ, ಪ್ರಫುಲ್ ನಮೋಶಿ, ವಿಷ್ಣುದಾಸ ತಪಾಡಿಯಾ, ಲಕ್ಷಣ ಪತಂಗೆ ಇದ್ದರು.