ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ದಲಿತ್ ಸೇನೆಯ ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮತ್ತು ಬಸವೇಶ್ವರರ ಪುತ್ತಳಿಗೆ ಪೂಜೆಯನ್ನು ಸಲ್ಲಿಸಿ ಪ್ರತಿಮೆಯ ಆವರಣದಲ್ಲಿ ದಲಿತ್ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಎಸ್ ಭಂಡಾರಿ, ನಗರ ಸಮಿತಿ ಅಧ್ಯಕ್ಷ ಗುರು ಎಸ್. ಮಾಳಗೆ, ಕಪಿಲ್ ವಾಲಿ, ಸಲೀಮ್ ಮೀಯಾ, ಗೊಬಿರಿಯಾ, ಅಶ್ರಫ್ ಅಲಿ ಅವರ ನೇತೃತ್ವದಲ್ಲಿ ಭಾನುವಾರ ದಲಿತ್ ಸೇನೆಯ ಸಭೆ ನಡೆಸಿ ಈ ಸಭೆಯಲ್ಲಿ ಕಲಬುರಗಿಯ ವಿವಿಧ ನಗರದ ವಾರ್ಡ ಅಧ್ಯಕ್ಷರನ್ನು ಆಯ್ಕೆ ಮಾಡಿ ಅವರಿಗೆ ದಲಿತ ಸೇನೆಯ ಶಾಲು ಹೊದಿಸಿ ದಲಿತ ಸೇನೆ ಸಂಘಟನೆಗೆ ಬರಮಾಡಿಕೊಂಡರು.
ಮಂಜುನಾಥ್ ಭಂಡಾರಿ ಮಾತನಾಡುತ್ತಾ ದಲಿತ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ ಅವರ ಕಾರ್ಯ ವೈಖರಿಗಳನ್ನು ಶಿಸ್ತನ್ನು ಮೆಚ್ಚಿ 40 ರಿಂದ 50 ಜನ ಸಂಘಟನೆಗೆ ಸೇರ್ಪಡೆಗೊಂಡರು.
ಕಲಬುರಗಿ ನಗರದ ವಾರ್ಡ್ ಅಧ್ಯಕ್ಷ ಈಶ್ವರ್ ಮಾಡಬಿ, ಉಪಾಧ್ಯಕ್ಷ ಪೃಥ್ವಿರಾಜ್, ವಾರ್ಡ್ ಸದಸ್ಯರಾಗಿ ಆಕಾಶ್, ಗಂಗಾಧರ್, ನಿಖಿಲ್, ವಿಶಾಲ್, ರೋಹಿತ್ ಮತ್ತು ಮಲ್ಲಿಕಾರ್ಜುನ್ ಇವರನ್ನು ಆಯ್ಕೆ ಮಾಡಲಾಯಿತು.