ಹಬ್ಬಗಳ ಇತಿಹಾಸ ಅರಿತರೆ ಮನಸ್ಸು ಬಂಗಾರದಂತಾಗುತ್ತದೆ

0
60

ಚಿಂಚೋಳಿ: ಭಾರತ ದೇಶದಲ್ಲಿ ಬಾವ್ಯಕತೆಯಿಂದ ಆಚರಣೆ ಮಾಡುವ ಪ್ರತಿಯೊಂದು ಹಬ್ಬಗಳ ಇತಿಹಾಸ ಅರಿತರೆ ಮನಸ್ಸು ಬಂಗಾರದಂತಾಗುತ್ತದೆ ಎಂದು ತಾಲೂಕಿನ ನಿಡಗುಂದಾ ಕಂಚಾಳಕುಂಟಿ ನಂದಿಬಸವೇಶ್ವರ ದೇವಸ್ಥಾನದ ಪೂಜ್ಯರಾದ ಕರುಣೇಶ್ವರ ಮಾಹಸ್ವಾಮಿ ಹೇಳಿದರು.

ಮಂಗಳವಾರ ದಸರಾ ಹಬ್ಬದ ಪ್ರಯುಕ್ತ ಬನ್ನಿ ಮುರಿಯುವ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಮುಂದುವರೆದು ಅತ್ಯಂತ ಜನಪ್ರಿಯ ಹಬ್ಬಗಳಲ್ಲೊಂದಾದ ವಿಜಯದಶಮಿಯು ದೇವಿಯ ಶಿವನ ಆರಾಧನೆ ಮಾಡಿ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೋರ ನಾವೆಲ್ಲರೂ ಒಂದೆ ತಾಯಿಯ ಮಕ್ಕಳೆಂದು ಹಿಂದು ಮುಸ್ಲಿಂ ಎನ್ನದೆ ಬನ್ನಿ ಬಂಗಾರ ಪರಸ್ಪರ ವಿನಿಮಯ ಮಾಡಿಕೊಂಡು ಸಮನ್ವಯತೆಯಿಂದ ಬಾಳುವುದೆ ವಿಜಯದಶಮಿ ಹಬ್ಬದ ವಿಶೇಷತೆ ಯಾಗಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಚಂದನಕೇರಾ ರಾಚೋಟೇಶ್ವರ ಶಿವಾಚಾರ್ಯರು, ಡಾ. ನಾಗರಾಜ ಕನಕೇರಿ, ಮಾರುತಿ ಗಂಜಗಿರಿ, ರವಿಂದ್ರಕುಮಾರ್ ಕನಕೇರಿ, ಕಾಶಿನಾಥ್, ಗಣೇಶ, ವಿನಾಯಕ ರಡ್ಡಿ, ಮರೆಪ್ಪ, ಗೌತಮ, ರಾಜೇಂದ್ರಯ್ಯಾ ಸ್ವಾಮಿ, ರಮೇಶ, ವಿಶ್ವನಾಥ್, ರೇವಣಸಿದ್ದಯ್ಯಾ ಮುಂತಾದ ಶರಣರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here