ಆಳಂದ: ಲಾಡ್ಲೆ ಮಶಾಕ್ ದರ್ಗಾದ ಸಂದಲ್ ಮೆರವಣಿಗೆ

0
110

ಆಳಂದ: ಸುಪ್ರಸಿದ್ಧ ಸೂಫಿ ಸಂತ ಹಜರತ್‌ ಲಾಡ್ಲೆ ಮಶಾಕ್‌ ಅನ್ಸಾರಿ ಅವರ 668ನೇ ಉರುಸ್‌ ಹಿನ್ನೆಲೆ ಹಳೆಯ ತಹಶೀಲ್ದಾರ್‌ ಕಚೇರಿಯಿಂದ ಸಂಜೆ 7ಕ್ಕೆ ಸಂದಲ್‌ (ಗಂಧೋತ್ಸವ) ಮೆರವಣಿಗೆ ಆರಂಭವಾಗಿದೆ.

ಪಟ್ಟಣದ ಮುಖ್ಯಬೀದಿಗಳಲ್ಲಿ ವಿವಿಧ ವಾದ್ಯಗಳ ಸಡಗರದೊಂದಿಗೆ ಗುರುವಾರ ನಸುಕಿನ ಜಾವ ದರ್ಗಾಕ್ಕೆ ಸಂದಲ್‌ ಸಮರ್ಪಣೆ ನಡೆಯಲಿದೆ.

Contact Your\'s Advertisement; 9902492681

ತಾಲ್ಲೂಕಿನ ಸಾಮರಸ್ಯದ ಶ್ರದ್ಧಾ ಕೇಂದ್ರವಾದ ಲಾಡ್ಲೆ ಮಶಾಕ್‌ ಸಂದಲ್ ಮೆರವಣಿಗೆಯಲ್ಲಿ ದೂರ ದೂರುಗಳಿಂದ ಆಗಮಿಸುವ ಯಾತ್ರಿಕರ ಸಂಖ್ಯೆ ಕಂಡುಬಂತು.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆದುಕೊಂಡರು.

ಶಾಸಕ ಬಿ.ಆರ್.ಪಾಟೀಲ್ ತಹಶಿಲ್ದಾರ ಯಲ್ಲಪ್ಪ ಸುಬೇದಾರ,ದರ್ಗಾ ಸಮಿತಿ ಅಧ್ಯಕ್ಷ ಮೋಹಿಜ್‌ ಅನ್ಸಾರಿ ಕಾರಬಾರಿ, ಆಸಿಫ್‌ ಅನ್ಸಾರಿ, ಕಾರ್ಯದರ್ಶಿ ಖಲೀಲ್‌ ಅನ್ಸಾರಿ ಖಜಾಂಚಿ ಶಕೀಬ್‌ ಅನ್ಸಾರಿ, ಸದಸ್ಯರಾದ ಫಿರ್ದೋಸಿ ಅನ್ಸಾರಿ, ಫಿರಾಸತ್‌ ಅನ್ಸಾರಿ, ಬಾಷಾ ಅನ್ಸಾರಿ, ಖಲಿಮೋದ್ದಿನ್‌ ಅನ್ಸಾರಿ, ಜಹೀರ್‌ ಅನ್ಸಾರಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here