ಲಕ್ಷ್ಮೀಪುರ ಗ್ರಾಮದ ಶಾಲಾ ಕೋಣೆ ದುರಸ್ಥಿಗೆ ಗ್ರಾಮಸ್ಥರ ಒತ್ತಾಯ

0
7

ಸುರಪುರ: ತಾಲೂಕಿನ ಅರಕೇರಾ ಕೆ ಗ್ರಾಮ ಪಂಚಾಯಿತಿಯ ಲಕ್ಷ್ಮೀಪುರ ಗ್ರಾಮದಲ್ಲಿನ ಸರಕಾರಿ ಶಾಲಾ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿದ್ದು ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಲಕ್ಷ್ಮೀಪುರ ಗ್ರಾಮ ಕ್ಷೇಮಾಭಿವೃಧ್ಧಿ ಸಂಘದ ಅನೇಕ ಮುಖಂಡರು ಮಾತನಾಡಿ,ಗ್ರಾಮದಲ್ಲಿನ ಶಾಲಾ ಕೋಣೆಗಳು ಸಂಪೂರ್ಣ ಶಿಥಿಲಗೊಂಡು ಕುಸಿದು ಬೀಳುವಂತಾಗಿವೆ,ಮಕ್ಕಳು ನಿತ್ಯವು ಜೀವ ಭಯದಲ್ಲೇ ಕೂಡುವ ಸ್ಥಿತಿ ನಿರ್ಮಾಣವಾಗಿದೆ,ಆದರೆ ಶಿಕ್ಷಣ ಇಲಾಖೆಯಾಗಲಿ,ಜನಪ್ರತಿನಿಧಿಗಳಾಗಲಿ ಶಾಲೆಯತ್ತ ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಮುಂದೆ ನಮ್ಮ ಗ್ರಾಮಕ್ಕೆ ಯಾವುದೇ ಜನಪ್ರತಿನಿಧಿಗಳು ಬಂದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ಗ್ರಾಮದಲ್ಲಿನ ಎಲ್ಲಾ ರಸ್ತೆಗಳು ಹಾಳಾಗಿದ್ದು ಯಾವ ರಸ್ತೆಯಲ್ಲಿ ಹೋದಲು ತಗ್ಗು ಗುಂಡಿಗಳಿವೆ,ಮಳೆಗಾಲದಲ್ಲಿ ಊರಲ್ಲಿ ಓಡಾಡಲು ಸಾಧ್ಯವಾದಂತಾಗಿದೆ.ಆದರೆ ಪಂಚಾಯತಿಯವರಾಗಲಿ ಸ್ಥಳಿಯ ಶಾಸಕರಾಗಲಿ ಗ್ರಾಮದಲ್ಲಿನ ಸಮಸ್ಯೆಗಳ ನಿವಾರಿಸಲು ಮುಂದಾಗುತ್ತಿಲ್ಲ ಇದರಿಂದಾಗಿ ಇಡೀ ಗ್ರಾಮದ ಜನರೇ ಈ ಮುಂದೆ ಹೋರಾಟಕ್ಕೆ ಇಳಿಯಲಿದ್ದೇವೆ,ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ತಿಪ್ಪಣ್ಣ ಶುಕ್ಲಾ,ಅಧ್ಯಕ್ಷ ಶ್ರೀನಿವಾಸ ದೇಶಪಾಂಡೆ,ಉಪಾಧ್ಯಕ್ಷ ಭೀಮಣ್ಣ ಪೀರಬಾವಿ,ಕಾರ್ಯದರ್ಶಿ ಚಂದ್ರಶೇಖರ ಡೊಣೂರ,ಸಹ ಕಾರ್ಯದರ್ಶಿ ಬಸವರಾಜ ಸಜ್ಜನ್,ಖಜಾಂಚಿ ಸಿಂಗೋಟೆಪ್ಪ ಶೀಲಾ ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here