ಹಬ್ಬಗಳ ನಿಜವಾದ ಅರ್ಥ ತಿಳಿದು ಆಚರಿಸುವುದನ್ನು ರೂಡಿಸಿಕೊಳ್ಳಬೇಕು: ಸಿದ್ಧಲಿಂಗ ಶ್ರೀ

0
92

ಶಹಾಬಾದ: ಹಬ್ಬ ಹರಿದಿನಗಳು ನಮ್ಮ ಸಂಸ್ಕøತಿಯ ಪ್ರತೀಕ. ವರ್ಷದಲ್ಲಿ ಬರುವ ಹತ್ತಾರು ಹಬ್ಬಗಳಿಗೆ ಅದರದೇ ಆದ ವಿಶೇಷತೆ ಮತ್ತು ಅರ್ಥವಿರುತ್ತದೆ ಅದನ್ನು ಅರಿತು ಹಬ್ಬಗಳನ್ನು ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಪ್ರತಿಯೊಂದು ವಸ್ತುವಿಗೂ ಎಕ್ಸಪೆಯರಿ ಡೆಟ್ ಇರುವ ಹಾಗೇ ನಮ್ಮ ಜೀವನದಲ್ಲಿ ಬರುವ ದ್ವೇಷ, ಅಸೂಯೇ, ಕ್ರೌರ್ಯ, ಹಿಂಸೆಯಂತಹ ಎಕ್ಸಪೆಯರಿ ಗುಣಗಳನ್ನು ನಮ್ಮ ಬದುಕಿನಿಂದ ತೆಗೆದು ಹಾಕಬೇಕು ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ ಅದುವೇ ಜೀವನ. ನಂಬಿಕೆ ಕಳಕೊಂಡರೆ ಅದನ್ನು ಪಡೆಯುವುದು ಬಹಳ ಕಷ್ಟ. ಯುದ್ದಗಳಿಂದ ಸಾದ್ಯವಾಗದೆ ಇದ್ದದ್ದನ್ನು ಕರುಣೆ,ಪ್ರಿತಿಯಿಂದ ಗಳಿಸಿದ ಉದಾಹರಣೆಯನ್ನು ಇತಿಹಾಸ ನಮಗೆ ತಿಳಿಸಿದೆ. ಹಬ್ಬಗಳು ನಮ್ಮ ಬದುಕನ್ನು ಬದಲಾಯಿಸಬೇಕು ಕೇವಲ ಕಾಟಾಚಾರದ ಹಬ್ಬಗಳಾಗದೇ ಕುಟುಂಬದ ಎಲ್ಲರೂ ಭಕ್ತಿ ಭಾವದಿಂದ ಹಬ್ಬಗಳನ್ನು ಆಚರಿಸಿ ಸಂಬಂಧಗಳನ್ನು ಗಟ್ಟಿಗೊಳಿಸಿ ಎಂದು ಕರೆ ನೀಡಿದರು.

ಕುಂದನೂರು ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಮೌನ ಅನುಷ್ಠಾನವನ್ನು ಮುಕ್ತಾಯಗೊಳಿಸಿದ ನಂತರ ಕುಂದನೂರು ಗ್ರಾಮಸ್ಥರು ಅದ್ದೂರಿ ಮೆರವಣಿಗೆಯ ಮೂಲಕ ಪೂಜ್ಯರನ್ನು ಗ್ರಾಮದಿಂದ ಬೀಳ್ಕೊಟ್ಟರು. ನಂತರ ಲಕ್ಷ್ಮಿಪುತವಾಡಿ ಮತ್ತು ರಾವೂರ ಗ್ರಾಮದ ಯುವಕರು ಬೈಕ್ ರ್ಯಾಲಿಯ ಮೂಲಕ ರಾವೂರ ಶ್ರೀಮಠದ ವರೆಗೆ ಕರೆತಂದರು.

ಶ್ರೀಮಠದಲ್ಲಿ ನಿರ್ಮಾಣವಾಗಿರುವ ನೂತನ ಅಡುಗೆ ಕೋಣೆಯನ್ನು ಉಧ್ಘಾಟನೆ ಮಾಡಿ ನಂತರ ನಡೆದ ಸಾರ್ವಜನಿಕರ ಬಹಿರಂಗ ಸಭೆಯಲ್ಲಿ ತಮ್ಮ ಮೌನ ಮುಕ್ತಾಯಗೊಳಿಸಿ ಆಶಿರ್ವಚನ ನೀಡಿದರು.

ನಂತರ ಸೇರಿದ ಸಾವಿರರು ಭಕ್ತರು ಪೂಜ್ಯರಿಗೆ ಬನ್ನಿ ಬಂಗಾರವನ್ನು ಕಾಣಿಕೆ ಸಮೇತ ನೀಡಿ ಹಬ್ಬ ಆಚರಿಸಿದರು. ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಅರ್ಥಪೂರ್ಣ ಹಬ್ಬವನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಚೆನ್ನಣ್ಣ ಬಾಳಿ,ಗುರುನಾಥ ಗುದಗಲ್,ತಿಪ್ಪಣ್ಣ ವಗ್ಗರ್,ಸೂರ್ಯಕಾಂತ ಕಾಳೇಕರ,ಅಣ್ಣಾರಾವ ಬಾಳಿ, ಈಶ್ವರ ಬಾಳಿ,ಸಾಬಪ್ಪ ತುಮಕೂರ,ಸೂರ್ಯಕಾಂತ ಕಟ್ಟಿಮನಿ, ದೇವಿಂದ್ರ ತಳವಾರ, ಸಿದ್ದಯ್ಯ ನಂದಿಕೋಲ,ಸಾಹೇಬಗೌಡ ತಳವಾರ, ಬಸವರಾಜ ಮಾಕಾ,ಬಸವರಾಜ ಕೆರಳ್ಳಿ, ನಿಂಗಣ್ಣ ಕೊಳ್ಳಿ,ಚಂದ್ರಶೇಖರ ಹಾವೇರಿ, ಮೋಹನ ಸೂರೆ,ಶರಣು ಜ್ಯೋತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಶಿಕ್ಷಕ ಸಿದ್ಧಲಿಂಗ ಬಾಳಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here