‘‘ಮಳೆಯಾಶ್ರಿತ ತೊಗರಿ ತೇವಾಂಶ ಕೊರತೆ’’

0
35

ಕಲಬುರಗಿ; ತೊಗರಿ ಹೂ ಕಟ್ಟುವಿಕೆ ಸಂದಿಗ್ದತೆಯಲ್ಲಿ ಭೂಮಿಯಲ್ಲಿ ಹಸಿ ಅಂಶ ಕಡಿಮೆಯಿದ್ದು. ರೈತರು ಚಂಡಮಾರುತ ಪ್ರಭಾವದಿಂದ ಮಳೆಯಾಗುವ ನೀರಿಕ್ಷಯಲ್ಲಿ ಕಾಯುತ್ತಿದ್ದಾರೆ. ಆದರೆ ಬಂಗಾಳಕೊಲ್ಲಿ, ಅರಬ್ಬಿಸಮುದ್ರದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ, ಮಳೆ ಉತ್ತರ ಕರ್ನಾಟಕ ಭಾಗಕ್ಕೆ ಮಳೆಯ ಪರಿಣಾಮ ಬೀರುವುದಿಲ್ಲ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ 30% ಹೂ ಹಂತ ಹೊಂದಿದ್ದು, ತೇವಾಂಶ ಕೊರತೆಯಿಂದ ಎಲೆಗಳು ಹಳದಿಯಾಗಿ ನಂತರ ಒಣಗಿ ಉದುರುತ್ತಿವೆ ಹಾಗೂ ಭೂಮಿಯ ಮೇಲ್ಪದರು ಅಲ್ಲಲ್ಲಿ ಬಿರುಕು ಬಿಡುತ್ತಿದೆ. ಕಡಗಂಚಿ ಸಮೀಪದ ರೈತ ಬಸವಂತರಾಯ ತೊಗರಿ ಕಳೆದ 30 ವರ್ಷದಿಂದ ತೊಗರಿ ಕೃಷಿ ಮಾಡುತ್ತಿದ್ದು, ಈ ರೀತಿಯ 52 ದಿನ ಮಳೆಯ ಆಭಾವ ಹೂ ಹಂತದಲ್ಲಿ ಕಾಣಿಸಿಲ್ಲ ಎಂದರು.

Contact Your\'s Advertisement; 9902492681

ಪ್ರಸ್ತುತ ಮಾರುಟ್ಟೆಯಲ್ಲಿ ತೊಗರಿಗೆ ಉತ್ತಮ ಧಾರಣೆ ಇದ್ದು. ಕಲಬುರಗಿಯ ಮುಖ್ಯ ಮುಂಗಾರು ಬೆಳೆಯಾದ ತೊಗರಿ ಉಳಸಿಕೊಳ್ಳಲು ಹರಸಾಹಾಸ ಪಡುತ್ತಿದ್ದಾರೆ. ಎನ್.ಪಿ.ಕೆ ಪೋಷಕಾಂಶಯುಕ್ತ ದ್ರಾವಣವನ್ನು ಮುಂಜಾನೆ ಆಥವಾ ಸಾಯಂಕಾಲ ಸಿಂಪರಣೆ ಮಾಡಿ ಬೆಳೆ ಉಳಿಸಿಕೊಂಡಿದ್ದೇನೆ ಎನ್ನುತ್ತಾರೆ ರೈತ ಬಸವಂತರಾಯ. ಕೃಷಿ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ಕೆಂಗನಾಳ ಮತ್ತು ಡಾ. ಜಹೀರ್ ಅಹೆಮದ್ ರವರು ಕ್ಷೇತ್ರಕ್ಕೆ ಭೇಟಿ ನೀಡಿ ರೈತರಿಗೆ ಹವಾಮಾನ ವೈಪರೀತ್ಯ ಮತ್ತು ಕೃಷಿ ಸಲಹೆಗಳನ್ನು ನೀಡಿದರು.

ಎಲೆ ಸುರಳಿ ಪುಚಿ ಮತ್ತು ಸಣ್ಣ ಕೀಡೆಗಳು ಕಂಡು ಬಂದರೆ ತತ್ತಿನಾಶಕ ಪ್ರಪೋನಾಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗಗೆ ಬೆರೆಸಿ ಸಿಂಪಡಿಸುವಂತೆ ಕೆವಿಕೆ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ರವರು ತಿಳಿಸಿದರು.

ತೊಗರಿ ಸಾಲುಗಳ ನಡುವೆ ಎಡೆ-ಕುಂಟೆ ಮಾಡುವುದರಿಂದ ಬೆಳೆ ನಿರ್ವಹಣೆ ಮಾಡುವುದು ಸೂಕ್ತ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here