ವಿವಿಧ ಸಂಘಟನೆಗಳಿಂದ ರೈತ ಹೋರಾಟಕ್ಕೆ ಬೆಂಬಲಿಸಿ ಟ್ರ್ಯಾಕ್ಟರ್ , ಬೈಕ್  ರ್ಯಾಲಿ

0
56

ಕಲಬುರಗಿ: 60 ದಿನ ಕಳೆದರು  ದೆಹಲಿಯ  ರೈತರ ಐತಿಹಾಸಿಕ  ಹೋರಾಟಕ್ಕೆ  ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲಾ ಎಂದು ರೈತ ಕೃಷಿ ಕಾರ್ಮಿಕ ಸಂಘನೆ ಆರ್ ಕೆ ಎಸ್ ನ ರಾಜ್ಯ ಕಾರ್ಯದರ್ಶಿಗಳಾದ ಕಾ. ಹೆಚ್ ವಿ ದಿವಾಕರ್ ಆಕ್ರೋಶ ವ್ಯಕ್ತ ಪಡಿಸಿದರು .

ಅವರು ಇಂದು ಎಐಡಿಎಸಒ  ಎಐಡಿವೈಒ ಹಾಗೂ ಎಐಎಮ್‌ಎಸ್‌ಎಸ್ ಸಂಘಟನೆಗಳು ಜಂಟಿಯಾಗಿ ಶಹಾಬಾದ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೈತ ಹೋರಾಟಕ್ಕೆ ಸಮರ್ಪಿತ  ನೇತಾಜಿ ಸುಭಾಷಚಂದ್ರ ಬೋಸ್ ರವರ ೧೨೪ ನೇ ಜನ್ಮ ದಿನಾಚರಣೆಯ ಅಂಗವಾಗಿ ಟ್ರ್ಯಾಕ್ಟರ್ ಮತ್ತು ಬೈಕ್ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮುಂದುವರಿದು ಅವರು ನೇತಾಜಿ ಯವರು ಕಾರ್ಮಿಕ ಮತ್ತು ರೈತ ರ ಸಮಾಜವಾದಿ ಭಾರತದ ಕನಸು ಕಂಡಿದ್ದರು,ಆದರೆ ಇಂದಿನ ಭಾರತದಲ್ಲಿ ಭ್ರಷ್ಟಚಾರ ,ಬಡತನ ನಿರುದ್ಯೋಗವು ,ತಾಂಡವಾಡುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಸುಳ್ಳು ಭರವಸೆಗಳು ನೀಡಿ ಜನಗಳಿಗೆ ಸಮಸ್ಯೆಗಳಿಗೆ ಸ್ಪಂದಿಸದೆ ಹಾಗೂ ದೆಹಲಿಯ ರೈತರ ಹೋರಾಟದಲ್ಲಿ ೫೦ ಕ್ಕು ಹೆಚ್ಚು ರೈತರು ಜೀವ ಕಳೆದುಕೊಂಡರು ಸರಕಾರಗಳು ರೈತರಿಗೆ  ಸ್ಪಂದಿಸದೆ ಬಂಡವಾಳಶಾಹಿ ಪರವಾಗಿ ನಿಂತಿದ್ದು ತಿವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು    ಇಂದು ನೇತಾಜಿ ಅವರ ವಿಚಾರ  ಅವಶ್ಯವಾಗಿದ್ದು ಯುವಜನರು ತಿಳಿದುಕೋಂಡು ಆನ್ಯಾಯ ವಿರುಧ್ದ ಸಂಘಟಿತ ಹೋರಾಟ ಕಟ್ಟಿ ಸಮಾಜವಾದಿ ಭಾರತ ನಿರ್ಮಿಸಲು ಸಜ್ಜಾಗಬೇಂದರು .

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶಹಾಬಾದಿ ಗಣ್ಯವ್ಯಕ್ತಿಗಳಾದ  ಶ್ರೀ ಹಣಮಂತ ಎಸ್ ಮದಕಲ್ ,ರವರು ಕೆಂಪುಧ್ವಜಾ ತೋರಿಸುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಈ ಕಾರ್ಯಕ್ರಮದಲ್ಲಿ ಎಸ್ ಯು ಸಿ ಐ ಕಮೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾ, ರಾಮಣ್ಣಾ ಎಸ ಇಬ್ರಾಹಿಂಪೂರ್ ರವರು ಮಾತನಾಡುತ್ತ ,ನೇತಾಜಿ ಅವರು ಜನಗಳಿಗೆ ಕರೆ ನೀಡುತ್ತ ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೆನೆ ಎಂದು ಹೇಳಿದರು  ಇಂತಹ ಆದsರ್ಶ ವಿಚಾರಗಳು ಇಂದಿನ ವಿದ್ಯಾರ್ಥಿ ಯುವಜನರು ಮೈಗುಡಿಸಿಕೊಂಡು ಪ್ರಸಕ್ತ ದೇಶದ  ಎಲ್ಲಾ ಸಮಸ್ಯೆಗಳ ವಿರುಧ್ದ ಹೊರಾಡಲು ಎಲ್ಲಾ ತ್ಯಾಗಕ್ಕು ಸಿದ್ದರಾಗಭೇಕೆಂದರು.

ಇದೆ ಸಂದರ್ಭದಲ್ಲಿ ಆರ್‌ಕೆಎಸ್. ನ ಜಿಲ್ಲಾ ಅಧ್ಯಕ್ಷರಾದ ಗಣಪತ ರಾವ್ ಕೆ ಮಾನೆ ಎಐಎಮ್‌ಎಸ್‌ಎಸ್. ನ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ , ಎಐಡಿವೈಓ. ಜಿಲ್ಲಾ ಕಾರ್ಯದರ್ಶಿಗಳಾದ  ಜಗನ್ನಾಥ ಎಸ್ ಹೆಚ್  ಮಾತನಾಡಿದರು ,ಕಾರ್ಯಕ್ರಮ ಅಧ್ಯಕ್ಷ ತೆಯನ್ನು ಎಐಡಿಎಸ್‌ಒ ನ ಶಹಾಬಾದ ಅಧ್ಯಕ್ಷರಾದ ತುಳಜಾರಾಮ ಎನ್ ಕೆ ವಹಿಸಿದರು .

ಈ ರ‍್ಯಾಲಿಯನ್ನು ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಶಾಸ್ತ್ರಿ ಚೌಕ ,ನೇಹರು ಚೌಕ ,  ರೈಲ್ವೆ ನಿಲ್ದಾಣ ,ಭಾರತ್ ಚೌಕ, ಸುಭಾಷ ಚೌಕ್ ,ಮುಖಾಂತರು ಶ್ರೀ ಸಿಧ್ದರಾಮೇಶ್ವರ ಶಾಲಾ ಮೈಧಾನದ ಅವರಣದಲ್ಲಿ ಮುಕ್ತಾಯಗೊಳಿಸಲಾಯಿತ್ತು

ಈ ಕಾರ್ಯಕ್ರಮ ದಲ್ಲಿ ರಾಘವೇಂದ್ರ ಎಮ್ ಜಿ , ಸಿದ್ದು ಚೌದ್ರಿ , ರಾಜೇಂದ್ರ ಅತನೂರ್ ,ಮಹಾದೇವಿ ಮಾನೆ ,ರಾಧಿಕಾ ಎಸ್ ಸಿ , ಕಿರಣ್ ಜಿ ಮಾನೆ , ತೇಜಸ್, ಆಕಾಶ ಬೊಮ್ಮನಹಳ್ಳಿ, ಶಂಕರ್ ದಂಡುಲ್ಕರ್ ,ರಂಗು ಮಾನೆ, ಪ್ರವೀಣ್ ಬಣಮಿಕರ್ ತಿಮ್ಮಯ್ಯ ಮಾನೆ ಶರಣು ದೆವಕರ್, ಮಹಾದೇವ ಸ್ವಾಮಿ, ಬಾಬೂ ಪವರ್, ಅಜಯ್ ಎ ಜಿ, ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here