ಕಲಬುರಗಿ: ನಗರದ ಪ್ರಶಿದ್ದ ಖಾಸಗಿ ಶಿಕ್ಷಣ ಸಂಸ್ಥೆಯಾದ ಸಂತ ಜೋಸೆಫ್ ಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಿಸ್ಟರ್ ಸಜನಾ, ಸಿಸ್ಟರ್ ಫ್ರಾನ್ಸಿನಾ, ಸಿಸ್ಟರ್ ರೀನಿ, ಸಿಸ್ಟರ್ ಹಷೀತಾ, ಸರ್ ನಿಂಗಪ್ಪಾ ಹಾಗೂ ಸರ್ ಸ್ಯಾಮ್‍ವೆಲ ಉಪಸ್ಥಿತಿಯಿಂದರು, ಮುಖ್ಯವಾಗಿ ಮುಖ್ಯ ಅತಿಥಿಗಳಾಗಿ ಫಾದರ್ ಸ್ಟ್ಯಾನಿ ಲೋಬೋ ಧರ್ಮಗುರುಗಳು ಈ ಕಾರ್ಯಕ್ರಮಕ್ಕೆ ಪಾಲ್ಗೋಂಡಿರುವುದರಿಂದÀ ಶಿಕ್ಷಕರ ವೃಂದಕ್ಕೆ ಹಾಗೂ ಮಕ್ಕಳಿಗೆ ವಿಶೇಷ ಉತ್ಸಾಹ ತುಂಬಿತ್ತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ನರ್ತನ, ಅವರ ವೇಷಭೂಷÀಣ ನೋಡುಗರಿಗೆ ಮೆರಗುನೀಡಿತ್ತು, ವಿಶೇಷವಾಗಿ ನಮ್ಮ ಕರ್ನಾಟಕದ ರತ್ನಗಳಾದ ಕುವೆಂಪು, ದ.ರಾ.ಬೇಂದ್ರೆ, ಸರ್ ಎಮ್ ವಿಶ್ವೇಶ್ವರಯ್ಯ, ತಾಯಿ ಭುವನೇಶ್ವÀರಿ, ಕಿತ್ತುರಿರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣ, ಅನಿಲ ಕುಂಬಳೆ, ರಾಹುಲ ಡ್ರಾವಿಡ, ಡಾ. ಜಯದೇವಿತಾಯಿ ಲಿಗಾಡೆ, ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮ್ಮಯ್ಯ ಮತ್ತು ಸುಮಾರ ಹಲವು ಕರ್ನಾಟಕದ ಸಾಧಕರನ್ನು ಮಕ್ಕಳ ರೂಪದಲ್ಲಿ ಪರಿಚಯಿಸಿದ್ದು ಮಕ್ಕಳಿಗೂ ಹಾಗೂ ಪೋಷಕರಿಗೂ ಹೆಮ್ಮೆಯ ವಿಷಯವಾಗಿತ್ತು. ಈ ಸಂಧಬ್ರದಲ್ಲಿ ಸಂತ ಜೋಸೆಫ್ ಕನ್ನಡ ಮತ್ತು ಇಂಗ್ಲಿಷ್ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಪಾಲ್ಲೊಂಡಿದ್ದರು.