ಗೋಮಾಂಸ ಸಾಗಿಸುತ್ತಿದ್ದ ಟ್ರಕ್ ತಡೆದು ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

0
123

ಕಲಬುರಗಿಗೋ ಮಾಂಸ ಸಾಗಿಸಲಾಗುತ್ತಿದ ಎಂಬ ಅನುಮಾನದ ಹಿನ್ನೆಲೆಯಲ್ಲಿ ಟ್ರಕ್ ಅಡ್ಡಗಟ್ಟಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನಿನ್ನೆ ರಾತ್ರಿ ನಗರದ ರಾಮ ಮಂದಿರ ರಿಂಗ್ ರಸ್ತೆಯಲ್ಲಿ ಪ್ರತಿಭಟಿಸಿರುವ ಘಟನೆ ಜರುಗಿತು.

ಶಹಾಪುರದಿಂದ ತೆಲಂಗಾಣದ ಜಹೀರಾಬಾದ್ ಗೆ ಮಾಂಸ ಸಾಗಿಸಲಾಗುತ್ತಿದ್ದ ಎನ್ನಲಾಗುತ್ತಿದ್ದು, ಟ್ರಕ್ನಲ್ಲಿ ರಕ್ತ ಸುರಿಯುವುದನ್ನು ಗಮನಿಸಿದ ಕೆಲವರು ಟ್ರಕ್ ನಿಲ್ಲಿಸಿದ್ದರು. ಅಲ್ಲದೆ ಕೆಲ ಕಿಡಿಗೇಡಿಗಳು ಟ್ರಕ್ ಮೇಲೆ ಕಲ್ಲು ತೂರಾಡಿ, ಟ್ರಕ್ ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಇದರಿಂದ ಕೆಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವಂತೆ ಸಂಘಟನೆ ಕಾರ್ಯಕರ್ತರು ಪಟ್ಟುಹಿಡಿದಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ.

Contact Your\'s Advertisement; 9902492681

ಘಟನೆಯಲ್ಲಿ ದೇವಿದಾಸ್ ನಾಮದೇವ ಹೊಲಗೆ(28) ಎಂಬ ಯುವಕ ವಿವಿ ಪೊಲೀಸರು ವಶಕ್ಕೆ ಪಡೆದಿದ್ದು, ನಾಮದೇವ ಟ್ರಕ್ ಚಾಲಕನಾಗಿದ್ದು, ಕಲಬುರಗಿ ಜಿಲ್ಲೆಯ ಕುಸನೂರ ತಾಂಡದ ನಿವಾಸಿ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಪೊಲೀಸರು ಟ್ರಕ್ ಚಾಲಕ ಹಾಗೂ ಟ್ರಕ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಮಾಂಸದ ಕಚ್ಚಾ ಸಾಮಗ್ರಿಗಳನ್ನು ಟ್ರಕ್ ನಲ್ಲಿ ತುಂಬಿಕೊಂಡು ಶಹಾಪುರದಿಂದ ತೆಲಂಗಾಣದ ಜಹೀರಾಬಾದ್ ಗೆ ಸಾಗಿಸಲಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here