ಶಹಾಬಾದ: ಕನ್ನಡದ ಇತಿಹಾಸ ಮಹತ್ವ ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ದಿನವೇ ಕರ್ನಾಟಕ ರಾಜ್ಯೋತ್ಸವ ಎಂದು ತಾಪಂ ಇಓ ಮಲ್ಲಿನಾಥ ರಾವೂರ ಹೇಳಿದರು.
ಅವರು ತಾಲೂಕಾಡಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು 1905 ರಲ್ಲಿ ಹೊತ್ತಿಸಿದು.ಅಲ್ಲಿಂದಲೇ ಪ್ರಾರಂಭವಾದ ಕಿಚ್ಚು 1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ರಾಜ್ಯದಲ್ಲಿ ಸುದೀರ್ಘ ಚರ್ಚೆಯ ಬಳಿಕ 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕವೆಂದು ಪುನರ್ ನಾಮಕರಣ ಮಾಡಲಾಯಿತು.
ಅಲ್ಲದೆ ನಾಡಿಗಾಗಿ ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಸ್ಮರಿಸುವ ಮೂಲಕ, ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ.ದೇಶದಲ್ಲಿಯೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೇ ರಾಜ್ಯ ನಮ್ಮದು. ರಾಷ್ಟ್ರಧ್ವಜ ಹಾಗೂ ಚುನಾವಣೆಯಲ್ಲಿ ಬೆರಳಿಗೆ ಹಚ್ಚುವ ಶಾಯಿ ತಯ್ಯಾರಿಸುವ ರಾಜ್ಯವೂ ನಮ್ಮದು ಎಂದು ಹೆಮ್ಮೆಯಿಂದ ಹೇಳಬಹುದು.
ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಮಹತ್ವದ ನಿರ್ಧಾರದಿಂದ 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕವೆಂದು ಪುನರ್ ನಾಮಕರಣ ಮಾಡಲಾಯಿತು. ಇಂದು 50 ವಸಂತಗಳನ್ನು ಪೂರೈಸಿದ ದಿನವಾಗಿದೆ.ಭಾಷೆ ಯಾವುದಾದರೂ ಮಾತನಾಡಿ ಅದರ ಬಗ್ಗೆ ಅಸೂಯೆ,ದ್ವೇಷ ಮಾಡದೇ, ಕನ್ನಡ ಬಳಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಕನ್ನಡಿಗರಾಗಿ ಎಂದು ಹೇಳಿದರು.
ತಹಸೀಲ್ದಾರ ಗುರುರಾಜ ಸಂಗಾವಿ ಮಾತನಾಡಿ, ಕನ್ನಡದಲ್ಲಿ ಅತಿ ಹೆಚ್ಚು ಪಡೆದ ಮಕ್ಕಳನ್ನು ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದೆವೆ.ಅಲ್ಲದೇ ಸಂಘ-ಸಂಸ್ಥೆಗಳು ಕನ್ನಡದಲ್ಲಿ ಓದಿದ ಮಕ್ಕಳಿಗೆ ಹಾಗೂ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ,ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ, ಸಿಡಿಪಿಓ ವಿಜಯಲಕ್ಷ್ಮಿ, ಜೆಸ್ಕಾಂ ಎಇಇ ಯುನೂಸ್,ಎಎಸ್‍ಐ ಶ್ರೀಕಾಂತ ನಾಯಕ್, ಪಶುಸಂಗೋಪನಾ ಇಲಾಖೆಯ ಡಾ.ಯಲ್ಲಪ್ಪ,ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ ಠಾಕೂರ ಇತರರು ಇದ್ದರು.
ಶಿಕ್ಷಕ ಬನ್ನಪ್ಪ ಸೈದಾಪೂರ ನಿರೂಪಿಸಿ, ವಂದಿಸಿದರು. ಉಪನ್ಯಾಸಕ ಜಗನ್ನಾಥ ಹೊಸಮನಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುಂಚೆ ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ತಾಯಿ ಕನ್ನಡಾಂಬೆಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್,ಶರಣಗೌಡ ಗೋಳಾ(ಕೆ),ಶರಣು ಪಗಲಾಪೂರ, ಕನಕಪ್ಪ ದಂಡಗುಲಕರ್,ಶರಣು ವಸ್ತ್ರದ್,ಬಾಬುರಾವ ಪಂಚಾಳ, ಕರವೇ ಅಧ್ಯಕ್ಷರಾದ ವಿಶ್ವರಾಜ ಫಿರೋಜಾಬಾದ, ಯಲ್ಲಾಲಿಳಗ ಹಯ್ಯಾಳಕರ್,ಹೊನಗುಂಟಾ ಕಸಾಪ ಅಧ್ಯಕ್ಷ ಪೂಜಪ್ಪ ಮೇತ್ರೆ, ಬಸವರಾಜ ಮಯೂರ, ದಶರಥ ಕೋಟನೂರ್, ಮರಲಿಂಗ ಯಾದಗಿರಿ ಸೇರಿದಂತೆ ಅನೇಕರು ಇದ್ದರು.