ಮನೆಯಿಂದಲೇ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಿ; ಪಂಕಜಾ

0
25

ಶಹಾಬಾದ:ಕನ್ನಡ ನಾಡು ನುಡಿ ವಿಶ್ವದಲ್ಲಿಯೇ ಅತ್ಯಂತ ಸಾಕಷ್ಟು ಉತ್ತಮ ಸಂಸ್ಕøತಿ ಹೊಂದಿದ್ದರೂ ನಾವಿಂದೂ ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗುತ್ತಿರುವುದು ವಿಷಾಧನೀಯ ಎಂದು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಹೇಳಿದರು.

ಅವರು ಬುಧವಾರ ನಗರಸಭೆಯ ಆವರಣದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ. ಪ್ರತಿಯೊಬ್ಬ ಕನ್ನಡಾಭಿಮಾನಿ ನಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಕಳುಹಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಹೇಳಿದರು.

Contact Your\'s Advertisement; 9902492681

ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ಕನ್ನಡ ಭಾಷೆ, ಕನ್ನಡ ನುಡಿ, ನೆಲ ಹಾಗೂ ಜಲದ ಬಗ್ಗೆ ಕೇವಲ ನವೆಂಬರ್ ತಿಂಗಳಿಗೆ ಹಾಡೊಕೆ, ಆಡೋಕೆ ಸಿಮೀತವಾಗದೇ ಕನ್ನಡವನ್ನು ಬೆಳೆಸುವಲ್ಲಿ ಕಿಂಚಿತ್ತು ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರದಿಂದಾಗಬೇಕೆಂದು ಹೇಳಿದರು.

ನಗರಸಭೆಯ ಪರಿಸರ ಎಇಇ ಅಭಯಕುಮಾರ ಹಾಗೂ ವ್ಯವಸ್ಥಾಪ ಶರಣಗೌಡ ಪಾಟೀಲ ಮಾತನಾಡಿ,ಕನ್ನಡದ ಬಗ್ಗೆ ಅಪಹಾಸ್ಯ ಬೇಡ. ಕನ್ನಡದ ಬಗ್ಗೆ ಆಭಿಮಾನ ಅಗತ್ಯ ಎಂದರು. ಕನ್ನಡ ಭಾಷೆಯ ಬೆಳವಣಿಗೆ ಮನೆಯಿಂದ ಅರಂಭವಾಗಬೇಕು. ಆಂಗ್ಲ ಭಾಷೆ ಕಲಿತರೂ ಕನ್ನಡತನ ಬಿಡಬಾರದು. ಮಾತೃಭಾಷೆಯ ಹೆತ್ತ ತಾಯಿಗೆ ಸಮಾನ. ಕನ್ನಡವನ್ನು ಬಳಸುವ ಮೂಲಕ ಉಳಿಸೋಣ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಎಇಇ ಶರಣು ಪೂಜಾರಿ, ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ವಾಲಿ, ಸಾಬೇರಾ ಬೇಗಂ,ಹಾಷಮ್ ಖಾನ,ಸಿಬ್ಬಂದಿಗಳಾದ ಶಿವಾನಂದ, ನಾರಾಯಣ ರೆಡ್ಡಿ,ಸುರೇಶ, ಸಾಬಣ್ಣ ಸುಂಗಲಕರ್,ಅಮೃತ ತಳವಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here