ಕಲಬುರಗಿ; ಅಂತರಾತ್ಮ ಶುದ್ಧಗೊಳಿಸಬೇಕಾದರೆ ಧ್ಯಾನ, ಪ್ರಾರ್ಥನೆಯೊಂದಿಗೆ ಕಾಯಕ ಮಾಡಿದರೆ ಮನಸ್ಸು ಪರಿಶುದ್ಧಗೊಳಿಸಿದಾಗ ಆರೋಗ್ಯವಂತ ಸಮಾಜ ನಿರ್ಮಿಸಬಹುದು ಎಂದು ಹಾರ್ಟ್ ಫುಲ್ ನೆಸ್ ಸಂಸ್ಥೆಯ ಪ್ರಶಿಕ್ಷಕರಾದ ಡಾ. ಶ್ರೀಪಾದ ಕಮಲಾಪುರ ಹೇಳಿದರು.
ನಗರದ ಸಂತೋಷ ಕಾಲನಿಯ ಕೆ ಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಹಾರ್ಟ್ ಫುಲ್ ನೆಸ್ ಸಂಸ್ಥೆ ಹಾಗೂ ಕೆಎಚ್‌ಬಿ ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಮೂರು ದಿನದ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ಮನುಷ್ಯನು ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಲಕ್ಷ ವಹಿಸದೆ, ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ ಅನಾರೋಗ್ಯ ಸಂದರ್ಭದಲ್ಲಿ ಗಳಿಸಿದ ಲಕ್ಷ ಲಕ್ಷ ಹಣ ಆಸ್ಪತ್ರೆಗೆ ಖರ್ಚು ಮಾಡುತ್ತಿರುವುದು ವಿಪರ್ಯಾಸ ಸಂಗತಿ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಲಬುರಗಿ ಕಾರ್ಯನಿರ್ವಾಹಕ ಅಭಿಯಂತರರಾದ ಮುರಳಿಧರ ದೇಶಪಾಂಡೆ ಮಾತನಾಡುತ್ತಾ ರೋಗ ಬಂದಾಗ ಚಿಕಿತ್ಸೆ ಪಡೆದುಕೊಳ್ಳುವ ಬದಲು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ ಜೀವನ ಸಾಗಿಸಬೇಕು. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೆ ಶ್ರೇಷ್ಠ ಎಂದು ಹೇಳಿದರು. ಕಲ್ಯಾಣರಾವ ಮಡಿವಾಳ ಸ್ವಾಗತಿಸಿದರು.
ಮಲ್ಲಿನಾಥ ಮಲ್ಲೆದ ನಿರೂಪಿಸಿದರು. ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ವಂದಿಸಿದರು. ಕಾರ್ಯಕ್ರಮದಲ್ಲಿ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಕ್ಷೇಮಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಬಡಾವಣೆಯ ಅನೇಕ ಜನರು ಭಾಗವಹಿಸಿದರು.