ಕೆ.ಎಂ. ವಸುಂಧರ ಇವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿ: ರಾಜು ಕಟ್ಟಮನಿ ಆಗ್ರಹ

0
32

ಕಲಬುರಗಿ: ಡಾ,ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ವಸುಂಧರ ಇವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕೆಂದು ಡಾ. ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜು ಎಸ್.ಕಟ್ಟಿಮನಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಂಖಾತರ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರಿಗೆ ಮನವಿ ಸಲ್ಲಿಸಿದರು.

ಶ್ರೀಮತಿ ಕೆ.ಎಂ. ಉಪ ನಿರ್ದೇಶಕರು ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ, ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಈ ಹಿಂದೆ ಪ್ರಧಾನ ವ್ಯವಸ್ಥಾಪಕರ ಹುದ್ದೆಗೆ ನಿಯೋಜನೆ ಮಾಡಲಾಗಿರುತ್ತದೆ. ಆದರೆ ಇವರಿಗೆ ನಿಗಮದ ಪರಿಶಿಷ್ಟ ಜಾತಿಯ ಜನಾಂಗದವರ ಕಷ್ಟಗಳಿಗೆ ಸ್ಪಂಧಿಸುವ ಮನೋಭಾವ ಇರುವುದಿಲ್ಲ. ಏಕೆಂದರೆ ಒಕ್ಕಲಗ ಜನಾಂಗದವರಿಗೆ ಸೇರಿದವರಾಗಿರುತ್ತಾರೆ.

Contact Your\'s Advertisement; 9902492681

ಕೃಷಿ ಇಲಾಖೆಯಿಂದ ಪ್ರಭಾರದ ಮೇಲೆ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಪ್ರಧಾನ ವ್ಯವಸ್ಥಾಪಕರ ಸ್ಥಾನಕ್ಕೆ ನೇಮಕಗೊಂಡಿರುವ ಶ್ರೀಮತಿ ಕೆ.ಎಂ. ವಸುಂದರ ರವರು ಸರ್ವಾಧಿಕಾರಿಧೋರಣೆ ತೋರುತ್ತಿದ್ದಾರೆ. ತಮ್ಮ ಕಷ್ಟ ಸುಖಗಳನ್ನು ಅರ್ಜಿಯ ಮೂಲಕ ನಿವೇದನೆ ಮಾಡಿಕೊಳ್ಳಲು ಬರುವ ಅರ್ಜಿದಾರರನ್ನು ಕಂಡು ಹೀನಾಯವಾಗಿ ಕಾಣುತ್ತಾರೆ.

ನಮ್ಮ ಹಕ್ಕನ್ನು ನಾವು ಕೇಳದರೆ ನಮಗೆ ಏರಧ್ವನಿಯಲ್ಲಿ ಮಾತನಾಡುತ್ತಾರೆ. ಎಲ್ಲರೂ ನಾಯಕರೆಂದು ಹೇಳಕೊಂಡು ಬರುತ್ತಾರೆ ಎಂದು ಸುಮ್ಮನೆ ಆರೋಪ ಮಾಡಿ ಪೆÇೀಲಿಸರಿಗೆ ದೂರು ಸಲ್ಲಿಸುತ್ತಾರೆ. ಸಂಘ, ಸಂಸ್ಥೆಗಳು, ದಲಿತ ಮುಖಂಡರು. ದಲತನಾಯಕರು, ಸುಮಾರು 4 ದಶಕಗಳಿಂದ ಹೋರಾಟ ಮಾಡುತ್ತಾ ಬಂದಿರುವ ಹೋರಾಟಗಾರರ ಮನವಿಗೆ ಯಾವುದೇ ಸ್ಪಂದನೆ ಮಾಡುತ್ತಿಲ್ಲ.
ಮನವಿ ಸಲ್ಲಿಸಲು ಬಂದವರನ್ನು ಮಧ್ಯಾಹ್ನ: 3.00 ಗಂಟೆಯ ನಂತರ ಬರಲು ಹೇಳಿ ಕಳುಹಿಸುವಂತೆ ಸೆಕ್ಯೂರಿಟಿ ದುರುಪಯೋಗ ಪಡಿಸಿಕೊಂಡು ಗಾರ್ಡಗೆ ತಿಳಿಸುತ್ತಾರೆ. ಮತ್ತು ತಮ್ಮ ಅಧಿಕಾರ ದೌರ್ಜನ್ಯದಿಂದ ವರ್ತಿಸುತ್ತಾರೆ. ಇದರಿಂದ ನಿಗಮಕ್ಕೆ ಭೇಟಿ ಕೊಡುವವರೆಲ್ಲರಿಗೂ ಬಹಳ ನೋವು ಆಗಿದೆ. ಯಾವುದೇ ಮನವಿಗೆ ಸ್ಪಂಧಿಸುತ್ತಿಲ್ಲ. ಬಡವರನ್ನು, ದೀನದಲಿತರನ್ನು, ಚಮ್ಮಾರರನ್ನು ತುಚ್ಯವಾಗಿ ಕಾಣುತ್ತಾರೆ.

ಆದ್ದರಿಂದ ತಾವುಗಳು ದಯಮಾಡಿ ಇಂತಹ ಅಧಿಕಾರಿಯನ್ನು ಕೂಡಲೇ, ತಕ್ಷಣವೇ ವರ್ಗಾವಣೆ ಮಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಅಧಿಕಾರಿಯವರನ್ನು ನೇಮಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರವಿ ಸಿಂಗೆ, ಸಚಿನ್ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ಸಚೀನ ಕೋಳ್ಳೂರ, ಆನಂದ ಕೋಳ್ಳೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here