ಕಲಬುರಗಿ: ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ಅಮಾನವೀಯ ಆಕ್ರಮಣ ಯುದ್ಧ ಒಂದು ತಿಂಗಳು ಕಳೆದರು ಜನಸಾಮಾನ್ಯರ ಬದುಕು ಛಿದ್ರ ಗೊಂಡಿರುವ ಕುರಿತು ಶೋಖ ವ್ಯಕ್ತಪಡಿಸಿ ಯುದ್ಧ ನಿಲ್ಲಲಿ – ಶಾಂತಿ ನೆಲೆಸಲಿ ಒತ್ತಾಯಿಸಿ ಕರ್ನಾಟಕ ಜಿಲ್ಲಾ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರಗತಿಪರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಂಯುಕ್ತ ರಾಷ್ಟ್ರಗಳು ಮತ್ತು ವಿಶ್ವ ಸಂಸ್ಥೆಗೆ ಒತ್ತಾಯಿಸಿದರು.
ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ಅಮಾನವೀಯ ಯುದ್ಧದಿಂದ ಎಲ್ಲೆಡೆ ಕುಸಿದ ಮನೆಗಳು. ಶಾಲೆ – ಕಾಲೇಜು ಆಸ್ಪತ್ರೆಯ ಮೇಲೂ ಬಾಂಬುಗಳ. ಮಹಿಳೆಯರ – ಮಕ್ಕಳು – ವೃದ್ದರು – ರೋಗಿಗಳನ್ನು ಒಳಗೊಂಡಂತೆ ಅಪಾರ ಸಾವು ನೋವು ಈ ಮಾರಣ ಹೊಮವನ್ನು ನಿರ್ಲಜ್ಜವಾಗಿ ಬೆಂಬಲಿಸುತ್ತಿರುವ ಜನ ವಿರೋಧಿ ಕೇಂದ್ರ ಸರ್ಕಾರ ಇದನ್ನು ದ್ವೇಷ ರಾಜಕಾರಣದ ನೀತಿಯಾಗಿದೆ ಎಂದು ಆರೋಪಿಸಿದರು.
ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಲಿ ಎಂಬುದು ನಮ್ಮ ಕೇಂದ್ರೀಯ ಒತ್ತಾಯವಾಗಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು. ಶಾಂತಿ ಪಡೆಗಳನ್ನು ಕಳುಹಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಶರಣಬಸಪ್ಪಾ ಮಮಶೆಟ್ಟಿ, ಮೌಲಾ ಮುಲ್ಲಾ, ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬುರು, ಎಂ.ಬಿ ಸಜ್ಜನ, ಬಿಮಶೇಟ್ಟಿ ಯಂಪಳ್ಳಿ, ಮೇಘ ರಾಜ ಕಠಾರೆ, ವೀರಣ್ಣ ಬಿರಾದಾರ್, ಜಾವೀದ್ ಹುಸೇನ್, ನಾಗಯ್ಯಾ ಸ್ವಾಮಿ ಮಹಿಳೆಯರು ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.