ಪ್ರಾಮಾಣಿಕ ಸೇವೆಯೇ ಸಹಕಾರ ಸಂಘದ ಏಳ್ಗೆಗೆ ಅಡಿಪಾಯ: ಹರಸೂರ

0
29

ಶಹಾಬಾದ: ಸಹಕಾರಿ ಸಂಘಗಳಿಗೆ ಗ್ರಾಹಕರು ದೇವರಿದ್ದಂತೆ. ಅವರ ಪ್ರಾಮಾಣಿಕ ಸೇವೆಯೇ ಸಹಕಾರ ಸಂಘದ ಏಳ್ಗೆಗೆ ಅಡಿಪಾಯ ಎಂದು ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಕೇಂದ್ರದ ಪ್ರಾಚಾರ್ಯ ಅರುಣಕುಮಾರ ಹರಸೂರ ಹೇಳಿದರು.

ಅವರು ಗುರುವಾರ ನಗರದ ಓಂ ಪತ್ತಿನ ಸಹಕಾರ ಸಂಘದಲ್ಲಿ ಕಲಬುರಗಿಯ ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಕೇಂದ್ರದ 109 ನೇ ತಂಡದ ಅಭ್ಯರ್ಥಿಗಳ ಪ್ರಾಯೋಗಿಕ ಅಧ್ಯಯನ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಹಕಾರ ಸಂಸ್ಥೆಗಳಿಗೆ ಹಣ ಗಳಿಕೆ ಜತೆ ಗ್ರಾಹಕರ ಆರ್ಥಿಕ ಬಲವರ್ಧನೆ ಗುರಿ ಇರಬೇಕು ಎಂದರು. ಬ್ಯಾಂಕ್ ನಡೆಸುವದೊಂದೇ ಉದ್ಯೋಗವಾಗಬಾರದು. ಬ್ಯಾಂಕಿನಿಂದ ಉದ್ಯೋಗಗಳು ಸೃಷ್ಟಿಯಾಗಬೇಕು. ಅಂದಾಗ ಗ್ರಾಹಕರ ಜತೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಅಲ್ಲದೇ ಓಂ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಬ್ಯಾಂಕ್ ಬಲವರ್ಧನೆಗೆ ಸಾಕಷ್ಟು ಶ್ರಮವಹಿಸಿ ಕಾರ್ಯನಿರತರಾಗಿರುವುದು ಸಂತೋಷ ತಂದಿದೆ. ಸಹಕಾರಿ ಸಂಘಗಳ ಗ್ರಾಹಕರ ಹಾಗೂ ಸದಸ್ಯರ ಏಳ್ಗೆಯೇ ಬ್ಯಾಂಕಿನ ಏಳ್ಗೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು. ಸಹಕಾರಿ ಸಂಘ ಬೆಳವಣಿಗೆಗೆ ಪಾರದರ್ಶಕ ಆಡಳಿತ ಹಾಗೂ ನಿರ್ದೇಶಕರ ಒಗ್ಗಟ್ಟಿನಿಂದ ಕೆಲಸಮಾಡಬೇಕು.ಈ ರೀತಿ ಮಾಡಿದ್ದರಿಂದಲೇ ದೇಶದಲ್ಲಿ ಬಹುತೇಖ ಜನರಿಗೆ ಸಹಕಾರಿ ಸಂಘಗಳು ಉದ್ಯೋಗ ಸೃಷ್ಠಿಸಿದೆ.ಬಡತನದ ನಿರ್ಮೂಲನೆಯಲ್ಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ತನ್ನದೇಯಾದ ಕೊಡುಗೆ ನೀಡಿದೆ ಎಂದರು.

ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿ, ಸಹಕಾರಿ ಸಂಘದ ಬೆಳವಣಿಗೆಗೆ ಪಾರದರ್ಶಕವಾಗಿ ನಡೆಸಿಕೊಂಡು ಬರುತ್ತಿದ್ದೆವೆ.ಸಂಘದ ಗ್ರಾಹಕರೇ ನಮಗೆ ಜೀವಾಳ. ಅಧಿಕಾರಿ ವರ್ಗದವರು ನೀಡಿದ ಸಲಹೆ ಸೂಚನೆ ಪ್ರಕಾರ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿಕೆಲಸ ಮಾಡುತ್ತೆವೆ ಎಂದರು.

ಇದೇ ಸಂದರ್ಭದಲ್ಲಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಘದ ರಚನೆ, ಸಂಘಕ್ಕೆ ಯಾರು ಸದಸ್ಯರಾಗಬಹುದು, ಸಂಘದ ಸದಸ್ಯರನ್ನು ಆಯ್ಕೆ ಮಾಡುವ ವಿಧಾನ,ಖಾತೆ ಪುಸ್ತಕದೊಂದಿಗೆ ನಗದು ಪುಸ್ತಕವನ್ನು ತಾಳೆ ನೋಡುವುದು,ಅವಧಿಗೆ ಅಂತಿಮ ಲೆಕ್ಕಪತ್ರವನ್ನು ತಯ್ಯಾರಿಸುವುದು,ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು.
ಪೆÇ್ರ. ಮಂಜುಳಾ ಬಿರಾದಾರ, ಮುಖ್ಯ ಕಾರ್ಯನಿರ್ವಾಣಧಿಕಾರಿ ರಾಮಣ್ಣ ಇಬ್ರಾಹಿಂಪೂರ, ನಿರ್ದೇಶಕ ವಿಜಕುಮಾರ ಕಂಠೀಕಾರ ಸಿಬ್ಬಂದಿ ವರ್ಗದವರಾದ ರೇμÁ್ಮ, ಮಂಜು ಹಾಗೂ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here