ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡ ಲಕ್ಷ್ಮಣ ಸವದಿ ಅವರನ್ನು ಜೇವರ್ಗಿ ತಾಲೂಕಿನ ವತಿಯಿಂದ ಬೆಂಗಳೂರಿನ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಅಲ್ಲದೆ ಪಕ್ಷದ ಹೈಕಮಾಂಡ್ ಮತ್ತು ಮುಖ್ಶಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸವದಿ ಅವರನ್ನು ಗುರುತಿಸಿ ಉಪಮುಖ್ಶಮಂತ್ರಿ ಮಾಡಿದ್ದಕ್ಕೆ ಹರ್ಷ ವ್ಶಕ್ತಪಡಿಸಲಾಯಿತು. ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಸವದಿಯವರಿಗೆ ಹುದ್ದೆ ನೀಡಿರುವುದು ಸಂತಸ ತಂದಿದೆ ಎಂದು ತಾಲೂಕಿನ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಶ ರೇವಣಸಿದ್ದಪ್ಪ ಸಂಕಾಲಿˌ ಬಿಜೆಪಿ ಯುವ ಮುಖಂಡರಾದ ಅರುಣರೆಡ್ಡಿ ಶಿವಪುರˌ ಸುರೇಶ ಪಾಟೀಲ್ ನೇದಲಗಿ ಸೇರಿದಂತೆ ಅನೇಕರು ಇದ್ದರು.