ಶರಣಬಸವರು ದೇವರದೇವರಾದವರು

0
75

ಮಹಾದಾಸೋಹಿ ಶರಣಬಸವೇಶ್ವರರು ದಾಸೋಹ, ಕಾಯಕ, ಭಕ್ತಿಗಳಿಂದ ಅನೇಕ ಲೀಲೆಗಳನ್ನು ಮಾಡಿ ದೇವರ ದೇವರಾಗಿದ್ದರು ಎಂದು ಸರಕಾರಿ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಹಾದೇವ ಬಡಿಗೇರ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಶರಣ ಭಕ್ತಳೊಬ್ಬಳು ಪಕ್ಷಿ, ಪ್ರಾಣಿಗಳನ್ನು ಸಾಕುತ್ತಿದ್ದಳು. ಒಂದು ಆ ಪಕ್ಷಿ, ಪ್ರಾಣಿಗಳಿಗೆ ಹಾಕಲು ಏನು ಸಿಗಲಿಲ್ಲ. ತಾನು ಉಪವಾಸವಿದ್ದು ’ ನಾನು ಹೇಗಾದರೂ ಬದುಕಬಹುದು ಆದರೆ ಈ ಪಕ್ಷಿಗಳೇನು ಮಾಡಲಿ ಶರಣರೆ’ ಎಂದು ದುಃಖಿಸುತ್ತಿದ್ದಳು. ಅವಳ ದುಃಖ ಶರಣರಿಗೆ ತಿಳಿದು ಅವರು ಆಕೆಗೆ ಮಹಾಮನೆಯಲ್ಲಿಯ ಕಾಳು ಕಡ್ಡಿಗಳನ್ನು ಕೊಟ್ಟು ಕಳುಹಿಸಿದರು. ಆಗ ಆ ತಾಯಿ ಅವುಗಳನ್ನು ಪಕ್ಷಿಗಳ ಮುಂದೆ ಹಾಕಿ ’ ಅಪ್ಪನ ಹೊಲದ ಬಿಳಿಯ ಜೋಳ ಸಾವಕಾಶ ತಿಂದು ಅಪ್ಪ ಇಟ್ಟ ನೀರು ಕುಡಿ’ ಎಂದು ಹಾಡುತ್ತಾಳೆ. ಅವಳ ಆ ಹಾಡಿನ ವೈಖರಿಗೆ ಒಲಿದ ಶರಣರು ಆಕೆಯನ್ನು ಹರುಸುತ್ತಾರೆ. ಅಂದಿನಿಂದ ಆ ತಾಯಿ ಮನೆ ಏರುತ್ತಾ ಹೋಗಿ ಸಕಲ ಭಾಗ್ಯ ಒಲಿದು ಶ್ರೀಮಂತಳಾಗುತ್ತಾಳೆ.

ಶರಣರ ಅಪ್ಪಟ ಭಕ್ತಳೊಬ್ಬಳು ಸಂಸಾರದಲ್ಲಿ ನಾನಾತರದ ಸಂಕಷ್ಟಕ್ಕೆ ಈಡಾಗಿದ್ದಳು. ಗಂಡ ರೋಗಿಯಾಗಿದ್ದ, ಮಕ್ಕಳು ಕೆಟ್ಟ ಗುಣಕ್ಕೆ ತುತ್ತಾಗಿದ್ದರೂ ಒಬ್ಬಳೇ ದುಡಿದು ಇವರೆಲ್ಲರನ್ನೂ ಸಾಕುತ್ತಿದ್ದಳು. ಹೀಗಾಗಿ ಆಕೆಯೂ ಹಾಸಿಗೆ ಹಿಡಿಯುವ ಪ್ರಸಂಗ ಬಂತು. ಅವಳು ’ ಯಪ್ಪಾ ಈ ಕಷ್ಟವನ್ನು ಕಳೆಯಪ್ಪಾ ತಂದೆ’ ಎಂದು ಬೇಡಿಕೊಳ್ಳುತ್ತಾಳೆ. ಶರಣರು ಅವಳಿಗೆ ಹರಸುತ್ತಾರೆ. ಕೆಲವೇ ದಿನಗಳಲ್ಲಿ ಗಂಡ ರೋಗದಿಂದ ಮುಕ್ತನಾಗುತ್ತಾನೆ. ಮಕ್ಕಳು ತಮ್ಮ ಕೆಟ್ಟ ಗುಣಗಳನ್ನು ಕಳೆದುಕೊಂಡು ದುಡಿಯಲು ಪ್ರಾರಂಭಿಸುತ್ತಾರೆ. ಇದೆಲ್ಲ ಶರಣರ ಕೃಪೆ ಕೊನೆಯವರೆಗೂ ಶರಣರ ಭಕ್ತಳಾಗಿರುತ್ತಾಳೆ.

ಕಲಬುರಗಿ ಸಮೀಪದ ಪಾಳ್ಯ ಹಳ್ಳಿಯಿಂದ ಶರಣರ ಮಹಾಮನೆಗೆ ಹಾಲು ಮೊಸರು ಬರುತ್ತಿತ್ತು. ಭಕ್ತರು ಸಮರ್ಪಣಾ ಭಾವನೆಯಿಂದ ಸಲ್ಲಿಸಿ ಹೋಗುತ್ತಿದ್ದರು. ಲಿಂಗವ್ವ ಎನ್ನುವವಳು ದುಡ್ಡಿಲ್ಲದೆ ಯಾರಿಗೂ ಒಂದು ಹನಿ ಹಾಲು ಕೊಡುತ್ತಿರಲಿಲ್ಲ. ಕೂಸಿಗೆ ಹಾಲು ಬೇಕಾದಾಗ ಸಹ ಅವಳು ಕೊಡಲಿಲ್ಲ. ತಾಯಿ ’ ಯಪ್ಪಾ ಶರಣಾ’ ಎಂದು ಹಲುಬುತ್ತಾಳೆ. ಆ ಕಡೆ ಆ ಲಿಂಗವ್ವಳ ಗಡಿಗಿಗೆ ತೂತು ಬಿದ್ದು ಹಾಳು ಧಾರಿಗಟ್ಟಿ ಆ ಕೂಸಿನ ಬಾಯೊಳಗೆ ಬೀಳು ಪ್ರಾರಂಭಿಸುತ್ತದೆ. ಊರಿನವರೆಲ್ಲ ಈ ದೃಶ್ಯ ನೋಡಿ ಗಾಬರಿಯಾಗುತ್ತಾರೆ. ಶರಣಬಸವರ ದಾಸೋಹಕ್ಕೆ ಒಯ್ದು ಹಾಲು, ಮಜ್ಜಿಗೆ ಕೊಟ್ಟರೆ ನಿನ್ನ ಮನೆಯಲ್ಲಿ ಹೊನ್ನ ಗಂಗೆಯಾಗಿ ಹರಿಯುತ್ತದೆ ಎಂದು ಆ ಕೂಸಿನ ತಾಯಿ ಹೇಳಿದಾಗ ಅವಳು ಶರಣರಲ್ಲಿ ಹೋಗಿ ತನ್ನ ತಪ್ಪನ್ನು ಒಪ್ಪಿಕೊಂಡು ಒಳ್ಳೆಯವಳಾಗುತ್ತಾಳೆ.

ಶರಣಬಸವರ ಈ ಕೀರ್ತಿಯಿಂದ ಕೆಲವು ಡೋಂಗಿ ಬಾಬಾಗಳು ಉರಿದು ಬಿದ್ದರು. ಹೇಗಾದರೂ ಮಾಡಿ ಅವರಿಗಿಂತ ತಾವು ದೊಡ್ಡವರೆನಿಸಿಕೊಳ್ಳಬೇಕೆಂದು ಜನರಲ್ಲಿ ವಿವಿಧ ರೀತಿಯ ಆಶೆ ಆಮಿಷಗಳನ್ನು ಹಾಕತೊಡಗಿದರು. ಒಬ್ಬ ರೈತ ತನ್ನ ಹೊಲದಲ್ಲಿ ಬಾವಿಯನ್ನು ಹೊಡೆಸಿದ. ಆದರೆ ಎಷ್ಟು ಕಡೆ ಹೊಡಿಸಿದರೂ ನೀರು ಬೀಳಲಿಲ್ಲ. ಆಗ ಆ ಊರಿನಲ್ಲಿದ್ದ ಒಬ್ಬ ಡೋಂಗಿಬಾಬಾನ ಹತ್ತಿರ ಹೋಗಿ ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡ, ಆತ ಏನೇನು ಹೇಳಿ ಆ ಬಡರೈತನಿಂದ ಒಂದಿಷ್ಟು ದುಡ್ಡನ್ನು ಪಡೆದುಕೊಂಡು ಏನೇನೂ ಕೊಟ್ಟು ಕಳುಹಿಸಿದ. ಆತ ಹೇಳಿದಂತೆ ರೈತ ಮತ್ತು ಆತನ ಹೆಂಡತಿ ಮಾಡಿದರೂ ಏನು ಆಗಲಿಲ್ಲ. ಕಡೆಗೆ ಶರಣರ ಹತ್ತಿರ ಹೋಗಿ ಎಲ್ಲವನ್ನು ತಿಳಿಸಿದರು. ಶರಣರು ವಿಭೂತಿಯನ್ನು ಕೊಟ್ಟು ಮೊದಲು ಬಾವಿ ಹೊಡೆದ ಸ್ಥಳದೊಳಗೆ ಹಾಕಲು ತಿಳಿಸಿದರು. ಬಹಳ ಭಕ್ತಿಯಿಂದ ಅದನ್ನು ಬಾವಿಯ ಸ್ಥಳದಲ್ಲಿಯೇ ಇಟ್ಟು ಮನೆಗೆ ಹೋದರು. ಮುಂಜಾನೆ ಬಂದು ನೋಡುತ್ತಾರೆ, ಬಾವಿ ತುಂಬಿಕೊಂಡು ನಿಂತಿದೆ. ರೈತ ದಂಪತಿಗಳ ಸಂತೋಷಕ್ಕೆ ಪಾರವೇ ಇಲ್ಲ. ನಿಂತಲ್ಲೇ ’ ಯಪ್ಪಾ ಯಪ್ಪಾ ಶರಣರಪ್ಪ’ ಎಂದು ಕುಣಿದಾಡುತ್ತಾರೆ. ಡೋಂಗಿ ಬಾಬಾಗಳ ಮಾತುಗಳು ಕೇಳದೇ ಶರಣರ ಭಕ್ತರಾಗಿ ಉಳಿಯುತ್ತಾರೆ ಎಂದು ಇನ್ನು ಕೆಲವು ಲೀಲೆಗಳನ್ನು ಹೇಳಿದರು.

ಡಾ.ಮಹಾದೇವ ಬಡಿಗೇರ, ಪ್ರಾಧ್ಯಾಪಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here