ಬೆಳೆ ಹಾನಿಯ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಲು ಆಗ್ರಹ

0
19

ಶಹಾಬಾದ: ಮೂರು ದಿನಗಳ ಹಿಂದಷ್ಟೇ ಸುರಿದ ಅಕಾಲಿಕ ಮಳೆಯಿಂದ ತೊಗರಿ ಬೆಳೆ ಹಾನಿಯಾಗಿದ್ದು, ಕೂಡಲೇ ಯೂನಿವರ್ಸಲ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಕಂಪನಿ ರೈತರ ದೂರು ಸ್ವೀಕರಿಸಿ, ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಪೀರಪಾಶಾ ಆಗ್ರಹಿಸಿದ್ದಾರೆ.

ಬೆಳೆಗೆ ವಿಮೆ ಮಾಡಿಸಿಕೊಳ್ಳುವ ಕಂಪನಿಯವರು, ರೈತರ ಬೆಳೆ ನಾಶವಾಗಿದೆ ಎಂದು ದೂರು ನೀಡಲು ಹೋದರೆ ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ದೂರು ಸ್ವೀಕರಿಸುತ್ತಿಲ್ಲ.ಈ ಭಾಗದ ವಾಣಿಜ್ಯ ಬೆಳೆಯಾದ ತೊಗರಿಯನ್ನು ತಾಲೂಕಿನಲ್ಲಿ ಸುಮಾರು 19 ಸಾವಿರ ಹೆಕ್ಟೇರ್‍ಗಿಂತಲೂ ಅಧಿಕ ಪ್ರದೇಶದಲ್ಲಿ ರೈತರು ಬೆಳೆದಿದ್ದಾರೆ. ಬೆಳೆಗಾಗಿ ಈಗಾಗಲೇ ಸಾಲ ಸೂಲ ಮಾಡಿ ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಅಲ್ಲದೇ ತೊಗರಿ ಕಾಯಿ ಕೊರಕ ಹಾವಳಿಯಿಂದ ತಪ್ಪಿಸಲು ಎರಡು ಬಾರಿ ಎಣ್ಣೆ ಸಿಂಪರಣೆ ಮಾಡಿದ್ದಾರೆ. ಆದರೆ ಮಳೆಯ ಕೊರತೆಯಿಂದ ಇಳುವರಿ ಕಡಿಮೆಯಾಗುತ್ತದೆ ಎಂದುಕೊಂಡಿದ್ದರು.ಆದರೆ ಮೂರು ದಿನಗಳ ಹಿಂದಷ್ಟೇ ಸುರಿದ ಅಕಾಲಿಕ ಮಳೆಯಿಂದ ತೊಗರಿ ಹೂಗಳು ಉದುರಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾನೆ.

Contact Your\'s Advertisement; 9902492681

ಸುಮಾರು ಎರಡು ತಿಂಗಳಿನಿಂದ ರೈತರು ಮಳೆರಾಯನ ಅವಕೃಪೆಗೆ ಒಳಗಾಗಿ ಬೆಳೆದಂತಹ ಬೆಳೆ ತಮ್ಮ ಮುಂದೆ ಬಾಡುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದರು.ಸದ್ಯದ ಪರಿಸ್ಥಿಯಲ್ಲಿ ಮಳೆ ಬಂದರೆ ಸಾಕು ಉತ್ತಮ ಇಳುವರಿ ಪಡೆಯಬಹುದೆಂದು ಆಶಾಭಾವನೆಯಿಂದ ಕಾಯುತ್ತಿದ್ದರು.ಆದರೆ ಮಳೆಬಾರದನ್ನು ಕಂಡು ಬಂದಷ್ಟು ಬರಲಿ, ಪಾಲಿಗೆ ಬಂದದ್ದೆ ಪಂಚಾಮೃತ ಎಂದು ಕೊಂಡಿದ್ದರು. ಆದರೆ ಮತ್ತೆ ಅಕಾಲಿಕ ಮಳೆ ತಡವಾಗಿ ಬಂದ ಪರಿಣಾಮ ಹೂಗಳು ಉದುರಿ ಹೋಗಿವೆ. ಹೀಗಾಗಿ ಮತ್ತೊಮ್ಮೆ ಈ ಭಾಗದ ರೈತರು ಮಳೆ ಬಾರದಿದ್ದರೂ ಹಾಗೂ ಮಳೆ ಬಂದರೂ ಚಿಂತಾಜನಕರಾಗಿದ್ದಾರೆ.

ಅಲ್ಲದೇ ಬೆಳೆ ಹಾನಿ ತಪ್ಪಿಸಿಕೊಳ್ಳಲು ರೈತರು ತಮ್ಮ ಬೆಳೆಗೆ “ಯೂನಿವರ್ಸಲ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿಸಿದ್ದಾರೆ. ಈಗ ಹೂವು ಉದುರುವ ಮೂಲಕ ಇಳುವರಿಗೆ ಧಕ್ಕೆಯಾಗುತ್ತಿರುವದರಿಂದ ರೈತರು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಲು ಹೋಗಿದ್ದಾರೆ.ಆದರೆ ವಿಮಾ ಕಂಪನಿ ಅಧಿಕಾರಿಗಳು ರೈತರ ದೂರನ್ನೇ ಸ್ವೀಕರಿಸದೇ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವ ಅವರು ಮೂರು ದಿನಗಳ ಹಿಂದಷ್ಟೇ ಸುರಿದ ಅಕಾಲಿಕ ಮಳೆಯಿಂದ ತೊಗರಿ ಬೆಳೆಯ ಹೂವೆಲ್ಲಾ ಉದುರಿ ಹೋಗಿದ್ದನ್ನು ಕಂಡು, ವಿಮಾ ಕಂಪನಿಗೆ ಬೆಳೆ ನಾಶವಾದ ದೂರನ್ನು ಸಲ್ಲಿಸಲು ರೈತರು ಹೋದರೆ ದೂರು ನಿರಾಕರಣೆ ಮಾಡಿದ್ದಾರೆ.ಇದು ಅತ್ಯಂತ ಖಂಡನೀಯವಾದುದು.

ಈ ಬಗ್ಗೆ ಸಚಿವರು ಕೂಡಲೇ ಯೂನಿವರ್ಸಲ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಕಂಪನಿಯವರು ರೈತರ ದೂರು ಸ್ವೀಕರಿಸಲು ನಿರ್ದೇಶನ ನೀಡಿ, ಬೆಳೆ ಹಾನಿಯಾದ ಸಮೀಕ್ಷೆ ಕೈಗೊಳ್ಳಲು ಕ್ರಮಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಪೀರಪಾಶಾ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here