ಕಲಬುರಗಿ; ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಶನಿವಾರ ಕನ್ನಡ ಭವನದಲ್ಲಿ ಸಭೆ ಜರುಗಿತು.
ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೌಲಗಿ ವಹಿಸಿದ್ದರು. ಹನಮಯ್ಯ ಆಲೂರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ವಿಷಯ ಮಂಡನೆ ಯಾಯಿತು.
ಕಾಂತರಾಜ್ ವರದಿ ಸರಕಾರಕ್ಕೆ ಸಲ್ಲಿಸಲು, ಹಿಂದುಳಿದ ಆಯೋಗ ತಯಾರಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸ್ವೀಕರಿಸಲು ಸರ್ಕಾರಕ್ಕೆ ಒತ್ತಾಯ ಒಕ್ಕೂರಿಲಿಂದ ಒತ್ತಾಯಿಸಿ 20 ರಂದು ಎಲ್ಲಾ ಹಿಂದುಳಿದ ಜಾತಿಗಳ ಅಡಿಯಲ್ಲಿ ಹಾಗೂ ಒಕ್ಕೂಟದ ನೈತೃತ್ವದಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ವಿನೋದ ಕುಮಾರ ಜೇನವೆರಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಹಿಂದುಳಿದ ಜಾತಿಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಲ್ಲಿ ದಿವಸದ ಪ್ರತಿಭಟನೆಯಲ್ಲಿ ತಮ್ಮ ಜಾತಿಗಳ ಸಮಾಜದ ನಾಮ ಫಲಕ ಮತ್ತು ಸಂಜ್ಞಾ ಪಟ ಗೋಳೊಂದಿಗೆ ಭಾಗವಹಿಸಲು ಕೋರಿ ವಂದಿಸಿದರು.
ಹಿಂದುಳಿದ ಒಕ್ಕೂಟದ ಸಂಘಟನೆ ಸಭೆಯಲ್ಲಿ ಕೋಲಿ ಸಮಾಜದ ಬಸವರಾಜ ಭುಧಿಹಾಳ, ಮಹಂತೇಶ್ ಯಾದವ, ಮೊಹಮ್ಮದ್ ಶಾ ದರವೇಶಿ, ಪಿಡ್ಡಪ್ಪ ಜಾಲಗಾರ, ಸೈಬಣ್ಣ ಹೆಳವರ, ಶೇಖ ಸಿಂಗ್, ಚಂದು ಪವಾರ, ಜಗತ ಸಿಂಗ್,ಮಲ್ಲಿಕಾರ್ಜುನ ಹೆಳವರ, ರಾಯಪ್ಪ ಮರತುರ, ಶ್ರೀಮತಿ ರೇಣುಕಾ ಸರಡಗಿ ಸಂತೋಷ್ ಗೊಂದಳಿ, ಚಂದ್ರಶೇಖರ್ ಗೊಂದಳಿ ಇತರರು ಉಪಸ್ಥಿತರಿದ್ದರು.