ಸಾವಳಗಿ; 150 ಲಕ್ಷ ವೆಚ್ಚ ನಾಲಾ ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ ಅಡಿಗಲ್ಲು

0
34

ಕಲಬುರಗಿ; ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಸಾವಳಗಿ ಹತ್ತಿರ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಕಾಮಗಾರಿಗೆ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಶುಕ್ರವಾರ ಅಡಿಗಲ್ಲು ಇಟ್ಟರು.

ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಸದರಿ ಅಣೆಕಟ್ಟೆಯಿಂದ ಸ್ಥಳೀಯವಾಗಿ ಅಂತರ್ಜಲ ಹೆಚ್ಚುವುದಲ್ಲದೆ ಸಾಕಷ್ಟು ಅನುಕೂಲ ರೈತರಿಗೆ, ಜನತೆಗೆ ಆಗಲಿದೆ ಎಂದರು.

Contact Your\'s Advertisement; 9902492681

ಫ್ರಾದನ ಮಂತ್ರಿ ಸಿಂಚಾಯಿ ಯೋಜನೆಯಲ್ಲಿ ಸದರಿ ಕಾಮಗಾರಿಗೆ 150 ಲಕ್ಷ ರು ಅನುದಾನ ಮಂಜೂರಾಗಿದೆ. ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯವರು ಸದರಿ ಕಾಮಗಾರಿ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಪಿಎಂಕೆಎಸ್‌ವೈ 2021- 22 ನೇ ಸಾಲಿನ ಯೋಜನೆಯಲ್ಲಿ ಸಾವಳಗಿ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಇಲ್ಲಿಗೆ ಮಂಜೂರಾಗಿದ್ದು ಇದು ಊರವರ ಮೆಚ್ಚುಗೆಗೆ ಕಾರಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here