ನಿರಂತರ ನೀರು ಸರಬರಾಜು ಕಾಮಗಾರಿ ಮಂದಗತಿಯಲ್ಲಿ; ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಆಯುಕ್ತರ ಸೂಚನೆ

0
40

ಕಲಬುರಗಿ,ನ.13; ನಿರಂತರ ನೀರು ಸರಬರಾಜು ಯೋಜನಾ ಕಾಮಗಾರಿಗಳ ಪ್ರಗತಿ ತುಂಬಾ ಮಂದಗತಿಯದಾಗಿದೆ. ಪೈಪಲೈನ್ ಅಳವಡಿಕೆ ಹಾಗೂ ಈಗಾಗಲೇ ಹಾಕಿರುವ ಪೈಪುಗಳ ಹೈಡ್ರಾಲಿಕ ತಪಾಸಣೆ ಹೆಚ್ಚಿನ ತಂಡಗಳನ್ನು ನಿಯೋಜಿಸಿ ಡಿಸೆಂಬರ್-2023 ರ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಮೆ|| ಎಲ್ & ಟಿ ಕಂಪನಿಯ ಮುಖ್ಯ ಅಧಿಕಾರಿಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ್, ತಾಕೀತು ಮಾಡಿದರು.

ಇತ್ತೀಚಿಗೆ ಕಲಬುರಗಿಯಲ್ಲಿ ಕಾಮಗಾರಿಗಳ ಪ್ರಗತಿ ಕುರಿತು ತುರ್ತು ಸಭೆ ನಡೆಸಿ ಮಾತನಾಡುತ್ತಾ, ವಿಶ್ವಬ್ಯಾಂಕ ನೆರವಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಕುಸ್ಸೆಂಪ್ ಯೋಜನೆಯ ಅಡಿಯಲ್ಲಿ ಕಲಬುರಗಿ ನಗರದಲ್ಲಿ 24/7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ನಗರದಲ್ಲಿ ಹಾಳು ಮಾಡಿದ್ದ ಎಲ್ಲ ರಸ್ತೆಗಳು ರಿಪೇರಿ ಮಾಡಬೇಕೆಂದು ಹಾಗೂ ಕಳೆದ ಸಭೆಯಲ್ಲಿ ಸೂಚಿಸಿದ 6 ಮೇಲ್ಮಟ್ಟ ನೀರು ಸಂಗ್ರಹಗಾರಗಳಾದ ಹಳೆಯ ಫಿಲ್ಟರ್ ಬೆಡ್ , ಹೆಚ್.ಎಸ್.ಎಂ ಧನಗಾರವಾಡ, ಎಸ್.ಬಿ ಟ್ಯಾಂಕ್, ಶೋರಗುಂಬಜ್-ಮದರಟ್ಯಾಂಕ್ ಹಾಗೂ ಗಣೇಶ ನಗರದಲ್ಲಿ ನಿರ್ಮಿಸುತ್ತಿರುವ ನೀರು ಸಂಗ್ರಹಗಾರಗಳು ಜನವರಿ 2024ರ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಮೆ|| ಎಲ್ & ಟಿ ಕಂಪನಿಯ ಮುಖ್ಯಸ್ಥರುಗಳಿಗೆ ಸೂಚಿಸಿದರು.

ಸಭೆಯಲ್ಲಿ ಕುಸ್ಸೆಂಪ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರರಾದ ಶ್ರೀ ಕೆ. ಕಾಂತರಾಜ್, ಮೆ|| ಸ್ಮೇಕ್ ಯೋಜನಾ ಸಮಾಲೋಕಚರ ತಂಡದ ನಾಯಕರಾದ ಶ್ರೀ ಶಿವಶರಣಪ್ಪ ರಾಯಕೋಟಿ ಕಲಬುರಗಿ, ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಕೆ.ಎಸ್. ಪಾಟೀಲ್ ಹಾಗೂ ಮೆ|| ಎಲ್ & ಟಿ ಕಂಪನಿಯ ಕುಮಾರಸೇನ್ ರವರು ಹಾಗೂ ಯೋಜನಾ ಅನುಷ್ಠಾನ ಘಟಕ, ಗುತ್ತಿಗೆದಾರರು ಹಾಗೂ ಸ್ಮೇಕ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here