ಕಲಬುರಗಿ; ಅತಿಸಾರಭೇದಿ ಮತ್ತು ನಿಮೋನಿಯಾ ಕಾಯಿಲೆಯಿಂದ ಬಹಳಷ್ಟು ಮಕ್ಕಳು ಸಾವನ್ನಪವುದನ್ನು ತಡೆಗಟ್ಟಬಹುದು ಈ ಪ್ರಾತ್ಯಕ್ಷತೆಯನ್ನು ಮಾಡುವ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ಜಿಮ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ಕವಿತಾ ಪಾಟೀಲ್ ಹೇಳಿದರು.
ನಗರದ ಹಳೆಯ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಜರುಗಿದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಹಾಗೂ ಓ.ಆರ್.ಎಸ್ ಮತ್ತು ಜಿಂಕ್ ಹಾಗೂ ಸಾಂಸ್ ಕಾರ್ಯಕ್ರಮ ಉದ್ಘಾಟನೆ ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಐ ಡಿ ಸಿ ಎಫ್ ಸಾಸ್ ಮತ್ತು ರಾಷ್ಟ್ರೀಯ ನವಜಾತ ಶಿಶು ಸಪ್ತಾಹದ ಅರಿವನ್ನು ಮೂಡಿಸಲು ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಜಿಲ್ಲಾಧ್ಯಂತ ವಿಶೇಷ ಗ್ರಾಮ ಆರೋಗ್ಯ ಪೌಷ್ಟಿಕ ದಿನಾಚರಣೆಯನ್ನು ಆಯೋಜಿಸಿ ಹಾಲುಣಿಸುವಂತಹ ತಾಯಂದಿರಿಗೆ ಹಾಗೂ ಐದು ವರ್ಷದೊಳಗಿನ ಮಕ್ಕಳುಳ್ಳಂತಹ ತಾಯಂದಿರಿಗೆ ಸಭೆಯನ್ನು ಕರೆದು ಮಕ್ಕಳು ಅನಾರೋಗ್ಯಕ್ಕೆ ತುತ್ತಾದಲ್ಲಿ ಮನೆಮಟ್ಟದಲ್ಲಿ ಯಾವ ರೀತಿ ಮಕ್ಕಳಿಗೆ ನಿರ್ವಹಣೆಯನ್ನು ಮಾಡಬೇಕೆನ್ನುವ ಕುರಿತು ಆರೋಗ್ಯ ಸಿಬ್ಬಂದಿಗಳಿಂದ ಅರಿವು ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದು ತಿಳಿಸಿದರು.
ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಡಾ.ಶರಣಬಸಪ್ಪ ಕ್ಯಾತನಾಳ ಅವರು ಮಾತನಾಡಿ ಐ ಡಿ ಸಿ ಎಫ್ ಸಾಸ್ ಮತ್ತು ನವಜಾತ ಶಿಶು ಸಪ್ತಾಹ ಹಮ್ಮಿಕೊಳ್ಳುವ ಮೂಲಕ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಓ ಆರ್ ಎಸ್ ಪೊಟ್ಟಣವನ್ನು ವಿತರಿಸುವುದು ಹಾಗೂ ಸಂಶಯಸ್ಪದ ಅತಿಸಾರ ಭೇ ದಿ ಉಳ್ಳಂತ ಮಕ್ಕಳು ಕಂಡು ಬಂದಲ್ಲಿ 14 ದಿನಗಳವರೆಗೆ ಜಿಂಕ್ ಮಾತ್ರೆಯನ್ನು ವಿತರಿಸುವುದು ಹಾಗೂ ಸಮುದಾಯದ ಜನರಿಗೆ ನಿಮೊನಿಯಾ ಅತಿಸಾರಬೇದಿ ಸಂಪೂರ್ಣ ಹಾಲುಣಿಸುವ ಕುರಿತು ಜಾಗೃತಿ ಮೂಡಿಸುವ ಸಪ್ತಾಹ ಇದಾಗಿದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾತನಾಡಿ ಸರಕಾರಿ ಅರೆ ಸರಕಾರಿ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಕೈ ತೊಳೆಯುವ ವಿಧಾನದ ಬಗ್ಗೆ ಶೌಚಾಲಯದ ಬಳಕೆಯ ಕುರಿತು ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕತೆಯ ಕುರಿತು ಅರಿವು ಮೂಡಿಸಲು ಜಾತಾ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಆರೋಗ್ಯ ಶಿಕ್ಷಣಾಧಿಕಾರಿಗಳಿಂದ ಶಾಲೆಗಳಲ್ಲಿ ಅರಿವು ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರಜ್ಞರು ಜಿಲ್ಲಾ ಆಸ್ಪತ್ರೆ ಕಲಬುರಗಿ ಡಾ.ಅಂಬಾರಾಯ ರುದ್ರವಾಡಿ ಅವರು ಮಾತನಾಡುತ್ತಾ ಮನೆಮಟ್ಟದಲ್ಲಿ ಓ ಆರ್ ಎಸ್ ಯಾವ ರೀತಿ ಬಳಕೆ ಮಾಡಬೇಕೆನ್ನುವುದರ ಬಗ್ಗೆ ತಾಯಂದಿರಿಗೆ ತಿಳಿಸಿಕೊಟ್ಟರು. ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಸಂದೀಪ್ ಹರಸಣಿಗಿಯವರು ಎದೆ ಹಾಲಿನ ಮಹತ್ವದ ಬಗ್ಗೆ ನಿಮೋನಿಯಾದ ಲಕ್ಷಣಗಳ ಬಗ್ಗೆ ಅತಿಸಾರಭೇದಿಯ ಲಕ್ಷಣಗಳು ಕಂಡುಬಂದಲ್ಲಿ ಪಾಲಕರು ಯಾವ ರೀತಿ ಮಗುವನ್ನು ನಿರ್ವಹಣೆ ಮಾಡಬೇಕೆಂದು ತಿಳಿಸಿಕೊಟ್ಟರು .
ಜಿಲ್ಲಾ ಶಿಶು ಮಕ್ಕಳ ತಜ್ಞರು ಡಾ.ಜ್ಯೋತಿ ಅವರು ಪಿ ಪಿ ಟಿ ಪ್ರೆಸೆಂಟೇಷನ್ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಲುಣಿಸುವಂತಹ ತಾಯಂದಿರು ಹಾಗೂ ಐದು ವರ್ಷದ ಒಳಗಿನ ಮಕ್ಕಳ ತಾಯಂದಿರಿಗೆ ಮನೆಮಟ್ಟದಲ್ಲಿ ಶಿಶು ಹಾಗೂ ಮಕ್ಕಳ ಆರೈಕೆಯನ್ನು ಯಾವ ರೀತಿ ಮಾಡಬೇಕೆಂದು ಸುವಿಸ್ತಾರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಡಿ ಹೆಚ್ ಓ, ಡಾ.ರಾಜಶೇಖರ ಮಾಲಿ. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ||ರಾಜಕುಮಾರ್ ಕುಲಕರ್ಣಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರಗೇಶ್ ಗುನಾರಿ, ಜಿಮ್ಸ್ ಹೆಚ್ ಓ ಡಿ ಡಾ.ಸಂದೀಪ್ , ಜಿಮ್ಸ್ ಎಂ ಎಸ್ ಡಾ.ಶಿವಕುಮಾರ್ , ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಕಾಂತ ನರಬೋಳಿ , ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಎನ್ ಆರ್ ಸಿ , ಡಾ.ಅಲ್ಲಮಪ್ರಭು . ಜಿಮ್ಸ್ ಎನ್ ಐ ಸಿ ಯು ಡಾ.ರೇವಣಸಿದ್ದಪ್ಪ.ಇದ್ದರು.
ಜಿಲ್ಲಾ ಅರ್ ಸಿ ಹೆಚ್ ಓ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಜವಳಗೆರಿ , ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಜನಾ ನಂದ್ ಪಾಟೀಲ್,ಜಿಲ್ಲಾ ಕಾರ್ಯಕ್ರಮ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಮೌಲ್ಯಮಾಪನ ವ್ಯವಸ್ಥಾಪಕ ವಿಶ್ವನಾಥ ಸಣ್ಣೂರ, ನಗರ ಯೋಜನಾ ವ್ಯವಸ್ಥಾಪಕರು ಶ್ರೀಕಾಂತ ಸ್ವಾಮಿ,ಅರ್ ಕೆ ಡಿ ಎಫ್ ಸಿ ರೇಖಾ ಚೌಧಾರಿ ಎಸ್ ಕೆ, ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ, ಜಿಲ್ಲಾ ಆಶಾ ಮೇಲ್ವಿಚಾರಕಿ ಬಸಮ್ಮ , ರಾಜೇಶ್ವರಿ ಗುಡ್ಡ. ವೀಣಾ ದೇಸಾಯಿ, ಸಿದ್ದರಾಮಯ್ಯ, ಸಂತೋಷ,ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರೆ ಆರೋಗ್ಯ ಸಿಬ್ಬಂದಿ ವರ್ಗದವರು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.