ಸಂಶೋಧನಾ ಪ್ರವೃತ್ತಿ ರೂಢಿಸಿಕೊಳ್ಳುವುದು ಹಾಗೂ ಸಂಶೋಧನೆಗೆ ಒತ್ತು ಕೊಡುವುದು ಹಾಗೂ ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಮುಖ್ಯ ಉದ್ಧೇಶವಾಗಿದ್ದು ಆ ನಿಟ್ಟಿನಲ್ಲಿ ಸಕಲ ಕಾರ್ಯಗಳು ನಡೆದಿದ್ದು ಇಂದು ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯು ಕೂಡ ತನ್ನ ಕೈ ಜೋಡಿಸಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಎಸ್. ಮಂಠಾಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಏರ್ಪಡಿಸಿದ ಐಎಸಟಿಇ ವಿದ್ಯಾರ್ಥಿ ಅಧ್ಯಾಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ನವದೆಹಲಿಯ ಪ್ರಮುಖ ಸದಸ್ಯರಾದ ಡಾ. ಶರಣಪ್ಪ ಮಲಶೆಟ್ಟಿ ಮಾತನಾಡಿ ಐಎಸಟಿಇ ವತಿಯಿಂದ ರಾಷ್ಟ್ರದ ಪ್ರತಿಯೊಂದು ತಾಂತ್ರಿಕ ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿ ಅಧ್ಯಾಯದಡಿ ವಿವಿಧ ರೀತಿಯ ಸೌಲಭ್ಯಗಳನ್ನು ದೊರಕಿಸುವ ಗುರಿಯನ್ನು ಹೊಂದಿದ್ದು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಐಎಸಟಿಇ ರಾಷ್ಟ್ರಾದ್ಯಂತ ತನ್ನ ಕಾರ್ಯಸ್ಥಾನಗಳನ್ನು ಹೊಂದಿದ್ದು ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಬಹುದಾಗಿದೆ ಎಂದು ಹೇಳಿದರು.
ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಸರ್ವರಿಗೂ ಸ್ವಾಗತಿಸಿ ತಮ್ಮ ವಿಭಾಗದಲ್ಲಿ ಪ್ರತಿ ವರುಷ ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಸಂಸ್ಥೆಗಳಗೆ ತಮ್ಮ ಪ್ರಬಂಧವನ್ನು ಮಂಡಿಸುವುದು, ಸಂಶೋಧನಾ ವಿಚಾರ ಸಂಕಿರಣದಲ್ಲಿ ಭಾಗವಹಿಸುವುದು ಹಾಗೂ ಸಮಾಜಮುಖಿ ಪ್ರಾಜೆಕ್ಟಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆಂದು ತಿಳಿಸಿದರು. ಐಎಸಟಿಇ ನಮ್ಮ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ಅವರು ಮಾತನಾಡಿ ಐಎಸಟಿಇ ವತಿಯಿಂದ ನಮ್ಮ ಮಹಾವಿದ್ಯಾಲಯಕ್ಕೆ ೨೦೧೮ನೇ ಸಾಲೀನ ರಾಷ್ಟ್ರಮಟ್ಟದ ಪ್ರಶಸ್ತಿ ದೊರಕಿದೆ ಎಂದು ಹೇಳಿದರು. ಮಹಾವಿದ್ಯಾಲಯದ ಸಾಕಷ್ಟ್ರು ಪ್ರೋಜೆಕ್ಟಗಳಿಗೆ ಐಎಸಟಿಇಯು ಪ್ರಾಯೋಜಿಸಲ್ಪಟ್ಟಿದ್ದು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿವೆ ಎಂದು ಹೇಳಿದರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ವಿಚಾರ ಸಂಕಿರಣದ ಸಂಯೋಜಕರಾಗಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಮುಕುಂದ ಹರವಾಳಕರ ಅವರು ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
ಸಮಾರಂಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ನಿತಿನ ಬಿ. ಜವಳಿ ಹಾಗೂ ಟೆಕ್ಯೂಪ – ೩ ರ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿಯವರು ಉಪಸ್ಥಿತರಿದ್ದರು.
ವಿಭಾದ ನಿತಿನ ಕಟ್ಟಶೆಟ್ಟರ, ಅಶೋಕ ಪಾಟೀಲ, ಶರಣಕುಮಾರ ಹುಲಿ, ಗುರಪ್ಪಾ ಕಲ್ಯಾಣಿ, ರಶ್ಮೀ ತಳ್ಳಳಿ, ನಾಗೇಶ ಸಾಲೀಮಠ, ಗಂಗಾ ಧರಕ, ಮಲ್ಲಿಕಾರ್ಜುನ ರೆಡ್ಡಿ, ಶ್ರೀಮತಿ ಕವಿತಾ ಕೆ., ಅಂಬಾರಾಯ ಹಾಗೂ ಇತರರು ಉಪಸ್ಥಿತರಿದ್ದರು.