ಸುರಪುರ: ಕ್ರೀಡೆ ಮುಕ್ತ ಆಧುನಿಕ ಜೀವನ ಮಾನವನ ಕುಲಕ್ಕೆ ಕಂಟಕವಾಗಿದೆ. ಕಾರಣ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಮನುಷ್ಯನ ಶಾರೀರಕ ವಿನ್ಯಾಸಕ್ಕೆ ತಕ್ಕುದಾದ ದೈಹಿಕ ಚಟುವಟಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುಲು ಸಾಧ್ಯಗುತ್ತದೆ ಎಂದು ಭಾರತ ಸರಕಾರ ನೆಹರು ಯುವ ಕೇಂದ್ರ ಆಯ್ಕೆ ಸಮಿತಿ ಸದಸ್ಯ ಲಕ್ಷ್ಮೀಕಾಂತ ದೇವರಗೋನಾಲ ಹೇಳಿದರು.
ತಾಲೂಕಿನ ಬೋನ್ಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಣವ್ ಸಾಂಸ್ಕೃತಿಕ ಯುವಕ ಸೇವಾ ಸಮಿತಿ ಹಾಗೂ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಯುವಕ ಸಂಘ ಬೋನ್ಹಾಳ ಏರ್ಪಡಿಸಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಅಷ್ಟೇ ಮುಖ್ಯವಲ್ಲ ಅದರ ಜೊತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳೂ ಅಗತ್ಯ ಎಂದು ತಿಳಿಸಿದರು. ಉಪನ್ಯಾಸಕ ಸುರೇಶ ಕುಂಬಾರ ಮಾತನಾಡಿ ದೇಶ ಕಂಡ ಅಪ್ರತಿಮ ಶ್ರೇಷ್ಠ ಕ್ರೀಡಾಪಟು ಮೇಜರ್ ಧ್ಯಾನ್‌ಚಂದ್‌ರವರ ಜನ್ಮದಿನದ ಪ್ರಯುಕ್ತ ನಾವು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ ಎಂದರು. ಕಾರ್ಯಕ್ರದ ಅಧ್ಯಕ್ಷ ಸ್ಥಾನವಹಿಸಿ ಶಾಲೆಯ ಪ್ರಧಾನ ಗುರು ಶರಣು ಪಾಕರಡ್ಡಿ ಹಾಗು ಭಾರತ ಸರಕಾರದ ನೆಹರು ಯುವ ಕೇಂದ್ರದ ಆಯ್ಕೆ ಸಮಿತಿ ಸದಸ್ಯ ಗಂಗಾಧರ ನಾಯಕ ಮಾತನಾಡಿದರು.ನಂತರ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಯುವಕ ಸಂಘದಿಂದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಸಂಗಯ್ಯಸ್ವಾಮಿ ಹಿರೇಮಠ,ಎಸಡಿಎಮ್ ಸದಸ್ಯ ಸಿದ್ರಾಮಪ್ಪ ಕಟ್ಟಿಮನಿ ಶಿಕ್ಷಕರಾದ ಮಾನಪ್ಪ,ಯಮನೂರಪ್ಪ,ಗುರಪ್ಪ ಮೇಘಾ ಗಂಗನಗೌಡರ,ಈರಮ್ಮ ಇದ್ದರು. ಯುವಕ ಸಂಘದ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಪ್ಪ ಸ್ವಾಗತಿಸಿದರು, ಗುರಪ್ಪ ನಿರೂಪಿಸಿದರು, ಮೇಘಾ ವಂದಿಸಿದರು.