ಸುರಪುರ:ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಯಾದಗಿರಿ,ತಾಲೂಕು ಆಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ತೀವ್ರತರ ಅರಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಪೋಷಕರು ಸದಾಕಾಲ ನಿಗಾವಹಿಸುವುದು ತುಂಬಾ ಮುಖ್ಯವಾಗಿದೆ.ಮಕ್ಕಳಲ್ಲಿ ಅತಿಸಾರ ಭೇದಿ ಕಾಣಿಸಿಕೊಳ್ಳುವುದನ್ನು ಗುರತಿಸಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದರು.ಇದೇ ನವೆಂಬರ್ 15 ರಿಂದ 28 ರವೆರೆಗೆ ಈ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬೇಟಿ ನೀಡಿ 0-5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಓ.ಆರ್.ಎಸ್ ನೀಡುತ್ತಾರೆ.
ಅತೀಸಾರಭೇದಿ ಪ್ರಾರಂಭವಾದಾಗಿನಿಂದ ಪ್ರತಿಸಾರಿ ಮಲವಿಸರ್ಜನೆ ಆದಾಗಲೂ, ಭೇದಿ ನಿಲ್ಲುವವರೆಗೆ ಓ.ಆರ್.ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆ ನೀಡುತ್ತಾರೆ.ಜಿಂಕ್ ಮಾತ್ರೆ ನೀಡುವದರಿಂದ ಮಕ್ಕಳಿಗೆ ಭೇದಿಯ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು.ಮೂರು ತಿಂಗಳವರೆಗೆ ಭೇದಿಯಿಂದ ಜಿಂಕ್ ಮಾತ್ರೆ ರಕ್ಷಣೆ ನೀಡುತ್ತದೆ.ಜಿಂಕ್ ಮಾತ್ರೆ ದಿನಕ್ಕೆ ಒಂದರಂತೆ ಹದಿನಾಲ್ಕು ದಿನಗಳವರೆಗೆ ನೀಡುವದು, 2-6 ತಿಂಗಳ ವಯಸ್ಸಿನ ಮಗುವಿಗೆ ಶುದ್ದನೀರು ಅಥವಾ ತಾಯಿಯ ಹಾಲಿನಲ್ಲಿ ಅರ್ಧ ಮಾತ್ರೆ 10ಎಮ್‍ಜಿ ಕುಡಿಸುವದು. ಮತ್ತು 6 ತಿಂಗಳಿಂದ 5 ವರ್ಷದ ಒಳಗಿನ ಮಗುವಿಗೆ ಶುದ್ದನೀರು ಅಥವಾ ತಾಯಿಯ ಹಾಲಿನಲ್ಲಿ ಒಂದು ಮಾತ್ರೆ 20ಎಮ್‍ಜಿ ಕುಡಿಸಬೇಕು.
ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವು ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮೆನೆ ಭೇಟಿ ನೀಡಿ 2 ವಾರಕ್ಕಿಂತ ಹೆಚ್ಚು ಅವಧಿಯ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವದು, ಹಸಿವಾಗದೆ ಇರುವದು, ತೂಕದ ಇಳಿಕೆ , ಕಫದಲ್ಲಿ ರಕ್ತ ಈ ಸಾಮಾನ್ಯ ಲಕ್ಷಣಗಳು ಕಂಡು ಬಂದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಗಳು ಹತ್ತಿರ ಸರಕಾರಿ ಆಸ್ಪತ್ರೆಯಲ್ಲಿ ಕಫ್ ಪರೀಕ್ಷೆ ಮಾಡಿಸಲೂ ಸಲಹೆ ನೀಡುತ್ತಾರೆ. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿರುತ್ತದೆ.ನಿರಂತರ ಚಿಕಿತ್ಸೆಯಿಂದ ರೊಗವನ್ನು ಸಂಪೂರ್ಣವಾಗಿ ಗುಣಪಡಿಸುವದು.ಟಿ.ಬಿ.ಯು ಶಾವಸಕೋಶಗಳಿಗಷ್ಟೆ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು ಎಂದರು.
ರಾಷ್ಟೀಯ ನವಜಾತ ಶಿಶು ಸಪ್ತಾಹವೂ ನಡೆಯಲಿದ್ದು, ರಾಷ್ಟೀಯ ನವಜಾತ ಶಿಶು ಸಪ್ತಾಹವು ಇಂದಿನಿಂದ 21ರ ವೆರೆಗೆ ಕಾರ್ಯಕ್ರಮ ನಡೆಯುತ್ತದೆ.ಕಡಿಮೆ ಜನನ ತೂಕದ ಅಥವಾ ಅನಾರೋಗ್ಯದ ನವಜಾತ ಶಿಶು,ಮನೆಯಲ್ಲೆ ಹೆರಿಗೆಯಾದ ನವಜಾತ ಶಿಶು,ಹೆಣ್ಣು ಮಗುವಿಗೆ ಸಾಕಷ್ಟು ಗಮನ ಮತ್ತು ಆರೈಕೆಯನ್ನು ನೀಡದ ಕುಟುಂಬಗಲಿಗೆ ಸಲಹೆ ನೀಡಲಾಗುವುದು ಎಂದು ತಿಳಿಸಿದರು.
ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಮತ್ತು ಕ್ರೀಯೆ-2023ರ ಮೂಲಕ ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಮತ್ತು ಕ್ರೀಯೆ ಇದೇ 12 ರಿಂದ ಫೆಬ್ರವರಿ 28 ರವೆರೆಗೆ ಕಾರ್ಯಕ್ರಮ ನಡೆಯುತ್ತದೆ.
ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಅಭಿಯಾನವು 1 ರಿಂದ 19 ವರ್ಷದ ಎಲ್ಲಾ ಮಕ್ಕಳ ಹೆಚ್.ಬಿ ರಕ್ತಪರೀಕ್ಷೆ ಮಾಡಲಾಗುವದು.ರಕ್ತಹೀನತೆ ಇರುವ ಮಕ್ಕಳ ನೋಂದಣಿ ಮಾಡಿಕೊಂಡು ಚಿಕಿತ್ಸೆ ನೀಡಲಾಗುವದು.ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಬಸವರಾಜ ಕೊಡೆಕಲ್,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಪದ್ಮಾವತಿ ನಾಯಕ ಮಾತನಾಡಿದರು.ವೇದಿಕೆ ಮೇಲೆ ಉಪ ಪ್ರಾಂಶುಪಾಲ ಗುರುಲಿಂಗಪ್ಪ ಖಾನಾಪುರ,ಆರೋಗ್ಯ ಇಲಾಖೆಯ ರಾಜಶೇಖರ,ಜಯಪ್ಪ,ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಜಯಶ್ರೀ,ಮಲ್ಲಣ್ಣ ಬಿ.ಹೆಚ್.ಸಿ ಇದ್ದರು ಆರೋಗ್ಯ ಇಲಾಖೆಯ ಸಂಗಣ್ಣ ಚೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.