ಮಹಿಳೆಯಗೆ ಅನುಕಂಪ ಕ್ಕಿಂತ ಅವಕಾಶ ಅಗತ್ಯವಿದೆ: ಸಾಹಿತಿ ಡಾ. ವಿಜಯಲಕ್ಷ್ಮೀ ಕೋಸಗಿ

0
33

ಕಲಬುರಗಿ: ಹೆಣ್ಣು ಮಗಳು ಇಂದು ಎಲ್ಲಾ ರಂಗಗಳಲ್ಲಿ ಹೆಜ್ಜೆ ಇಟ್ಟಿದ್ದಾಳೆ. ಆದರೂ ಪ್ರಮುಖ ವಿಚಾರಗಳ ನಿರ್ಧಾರದಲ್ಲಿ ಮಹಿಳೆಯ ಅಭಿಪ್ರಾಯವನ್ನು ಪರಿಗಣಿಸುತ್ತಿಲ್ಲ. ಅವಳಿಗೂ ವ್ಯಕ್ತಿತ್ವ, ಚಿಂತನೆ ಹಾಗೂ ಕನಸುಗಳಿವೆ. ಅವುಗಳು ಯಾವುದೇ ಕಾರಣಕ್ಕೂ ಮುದುಡದಂತೆ ಕಾಳಜಿ ವಹಿಸಬೇಕಾಗಿದೆ.ಮಹಿಳೆಯ ಬಗ್ಗೆ ಅನುಕಂಪ ತೋರಿಸುವುದಕ್ಕಿಂತ ಅವಕಾಶ ಕೊಡಬೇಕು. ಅಸಹಾಯಕಳಾದ ಹೆಣ್ಣನ್ನು ಸಮಾಜ ಇಂದು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬ ಸನ್ನಿವೇಶವನ್ನು ಎಳೆ ಎಳೆಯಾಗಿ ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ವಿಜಯಲಕ್ಷ್ಮೀ ಕೋಸಗಿ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ ಸಮಾರಂಭದಲ್ಲಿ ಲೇಖಕಿ ಆಶಾ ರಾಕ್ಸ್ ಅವರ ವಿರಚಿತ `ಹೆಣ್ಣು ಮತ್ತು ಅವಳ ಬದುಕು ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಒಂದು ದೇಶವನ್ನು ಬದಲಾವಣೆ ಮಾಡುವ ಶಕ್ತಿ ಅವರಿಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅನೇಕ ರೀತಿಯ ದೌರ್ಜನ್ಯಗಳು, ಅಮಾನವೀಯ ಕೃತ್ಯಗಳು ನಡೆಯುತ್ತಿರುವ ಸನ್ನಿವೇಶಗಳು ಮನಸ್ಸಿಗೆ ಖೇದ ಉಂಟುಮಾಡುತ್ತಿದೆ. ಕೃತ್ಯಗಳಿಗೆ ಕಾರಣರಾಗುತ್ತಿರುವ ಕೆಟ್ಟ ಮನಸ್ಸುಗಳ ವಿರುದ್ಧ ಇಂದು ಎಲ್ಲರೂ ಒಗ್ಗೂಡಿ ಹೋರಾಡಬೇಕಾಗಿದೆ ಎಂದರು.

ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳಿದ್ದರೂ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ. ಇವುಗಳನ್ನು ಎದುರಿಸುವ ಧೈರ್ಯ ಮಹಿಳೆಯರು ಬೆಳೆಸಿಕೊಳ್ಳಬೇಕೆಂದರು.

ಲೇಖಕಿ ಆಶಾ ರಾಕ್ಸ್ ತಮ್ಮ ಅಂತರಾಳದ ನುಡಿಗಳನ್ನು ಬಿಚ್ಚಿಟ್ಟರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಸುಮನ್, ದೇವೇಂದ್ರ ರಾಜಾಪೂರ್, ಬಸ್ವಂತರಾಯ ಕೋಳಕೂರ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ನಾಗನ್ನಾಥ ಯಳಸಂಗಿ, ಶಿವಶರಣ ಹಡಪದ, ಮಲ್ಲಿನಾಥ ಸಂಗಶೆಟ್ಟಿ, ಶ್ರೀಕಾಂತ ಪಾಟೀಲ, ಬಿ.ಎಂ.ಪಾಟೀಲ ಕಲ್ಲೂರ, ಪದ್ಮಾವತಿ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here