ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

0
48

ಸುರಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಅಜೀಂ ಪ್ರೇಮಜಿ ಪೌಂಡೇಶನ್ ವತಿಯಿಂದ ನಗರದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸರಕಾರಿ ಉರ್ದು ಶಾಲಾ ಮಕ್ಕಳಲ್ಲಿ ಫಿಟ್ ಇಂಡಿಯಾ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಪಿಎಫ್‌ನ ಸಂಯೋಜಕ ಅನ್ವರ ಜಮಾದಾರ್ ಮಾತನಾಡಿ,ಭಾರತ ಸರಕಾರ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಫಿಟ್ ಇಂಡಿಯಾ ಅಭಿಯಾನ ನಡೆಸುತ್ತಿದೆ.ಇದರಿಂದ ಎಲ್ಲರಲ್ಲಿ ಕ್ರೀಡಾಸಕ್ತಿ ಮತ್ತು ಕ್ರೀಡಾಭಿಮಾನ ಮೂಡಲಿದೆ.ಅಲ್ಲದೆ ಎಲ್ಲರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮಾನಸಿಕ ಮತ್ತು ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಪಾಠದೊಂದಿಗೆ ಆಟಕ್ಕು ಮಹತ್ವ ನೀಡಬೇಕು ಮತ್ತು ಜನರುಕೂಡ ಸದಾ ಬದುಕಿನ ಜಂಜಡಗಳಲ್ಲಿ ಕಾಲ ಕಳೆಯುವ ಬದಲು ಕ್ರೀಡಾ ಚಟುವಟಿಕಗಳಿಗೂ ನಿತ್ಯ ಒಂದಿಷ್ಟು ಸಮಯ ನೀಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನ ಕುರಿತಾದ ನೇರ ಪ್ರಸಾರವನ್ನು ಮಕ್ಕಳಿಗೆ ವೀಕ್ಷಿಸಲು ಅವಕಾಶ ಮಾಡಿ ಕೊಡಲಾಗಿತ್ತು.ಉರ್ದು ಶಾಲೆಯ ಮುಖ್ಯಗುರು ಜಾಕೀರ್ ಹುಸೇನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಘನಲಿಂಗಯ್ಯ,ಪರಮಣ್ಣ ತಳಗೇರಿ ವೇದಿಕೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here