ಕಲಬುರಗಿ ಜಿಲ್ಲೆಯಲ್ಲಿ 2.76 ಲಕ್ಷ ಹೆಕ್ಟರ್ ಬೆಳೆ ಹಾನಿ

0
19

ಕಲಬುರಗಿ; ಜಿಲ್ಲೆಯಲ್ಲಿ 11 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ಪೈಕಿ 11 ತಾಲೂಕುಗಳ ಮಾಹಿತಿ ಪ್ರಸ್ತುತ crop loss ground truthing ವೆಬ್ ಅಪ್ಲಿಕೇಷನ್‌ನಲ್ಲಿ ಲಭ್ಯವಿದೆ ಅದರಂತೆ ಒಟ್ಟು 2,76,368 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ‌ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 3,95,751 ರೈತರು ಫ್ರೂಟ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ಬರಗಾಲ ಹಾಗೂ ನೆಟೆರೋಗ ಪರಿಹಾರ ಸೇರಿದಂತೆ ಕೃಷಿ ಇಲಾಖೆಯ ಇತರೆ ಪರಿಹಾರಗಳು ಸಿಗಲಿವೆ.

Contact Your\'s Advertisement; 9902492681

5ನೇ ನವಂಬರ್ 2023 ರವರೆಗಿನ ಕೃಷಿ ಇಲಾಖೆ ವತಿಯಿಂದ ಕೈಗೊಂಡ ಬೆಳೆ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲ್ಲಿ 8,72,701 ಹೆಕ್ಟರ್ ಬಿತ್ತನೆಯಾಗಿದ್ದು 2,76,368 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಹಿಂಗಾರು ಹಂಗಾಮಿನಲ್ಲಿ 91,018 ಹೆಕ್ಟೇರ್ ಬಿತ್ತನೆಯಾಗಿದೆ. ತೋಟಗಾರಿಕೆ ಇಲಾಖೆಯ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲ್ಲಿ 14,350 ಹೆಕ್ಟರ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು ಅದರಲ್ಲಿ 4,797 ( 33.42 %) ಹೆಕ್ಟರ್ ಬಿತ್ತನೆ ಆಗಿದ್ದು ಅದರಲ್ಲಿ ಪೂರ್ವ ಮುಂಗಾರಿನಲ್ಲಿ 100.82 ಹೆಕ್ಟರ್ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಿ 2,630 ಹೆಕ್ಟರ್ ಬಿತ್ತನೆ ಗುರಿ ನಿಗದಿಯಾಗಿತ್ತು ಅದರಲ್ಲಿ 1,133 ಹೆಕ್ಟರ್ ಬಿತ್ತನೆಯಾಗಿದೆ. ಆದ ನಷ್ಟ ಪರಿಹಾರ ಕೋರಿ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

SDRF ಮಾರ್ಗಸೂಚಿಯ ಪ್ರಕಾರ ಶೇ.33 ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ಕೃಷಿ ಪರಿಕರಗಳ ಸಹಾಯಧನ (Input subsidy) ನೀಡಲು ಮಳೆ ಆಶ್ರಿತ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರ್‌ಗೆ ರೂ. 8500/- ಹಾಗೂ ರೂ. 17000 /- ನೀರಾವರಿ ಪ್ರದೇಶದ ರೈತರಿಗೆ ನೀಡಲಾಗುವುದು.

ಬೆಳೆ ವಿಮೆ: 2022ರ ಮುಂಗಾರು ಹಂಗಾಮಿನಲ್ಲಿ 1,88,600 ರೈತರು ಹಾಗೂ 2023ರ ಮುಂಗಾರು ಹಂಗಾಮಿನಲ್ಲಿ 1,62,066 ರೈತರು ಬೆಳೆ ವಿಮೆಗೆ ನೋಂದಾಯಿಸಿರುತ್ತಾರೆ. 2022-23 ರಲ್ಲಿ ರೂ 108.59 ಕೋಟಿ‌ ವಿಮಾ ಹಣ ರೈತರಿಗೆ ಜಮಾ ಮಾಡಲಾಗಿದೆ.

ಈ ವರ್ಷ 2,22,442 ಹೆಕ್ಟೇರ್‌ ಹಿಂಗಾರು (Rabi) ಬಿತ್ತನೆ ಗುರಿ ಇದ್ದು ಈಗಾಗಲೇ 91,018 ಹೆಕ್ಟೇರ್ ಬಿತ್ತನೆ ಆಗಿದೆ. ಈ ವರ್ಷ ಆಯವ್ಯಯದಡಿ ರೂ. 13,900 ಲಕ್ಷ ಹಿಂಗಾರು (Rabi) ಕೃಷಿ ಪರಿಕರಗಳ ಸಹಾಯಧನ (Input subsidy) ಅಡಿಯಲ್ಲಿ ಈಗಾಗಲೇ ಬಿತ್ತನೆ ಬೀಜ, ಲಘು ಪೋಷಕಾಂಶಗಳು, ಸಸ್ಯ ಸಂರಕ್ಷಣೆ, ಹಸಿರೆಲೆ ಬಿತ್ತನೆ ಬೀಜ ವಿತರಣೆ, ಮಿನಿ ಕಿಟ್ ಬಿತ್ತನೆ ಬೀಜ ವಿತರಣೆಗೆ ವೆಚ್ಚವಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಸ್ಪಿಲ್ ಓವರ್ 731 ಕೃಷಿ ಹೊಂಡಗಳ ಪೈಕಿ 635 ಹಾಗೂ 2023-24 ರ ಸಾಲಿನ 458 ಪೈಕಿ 91 ಕೃಷಿ ಹೊಂಡಗಳನ್ನು ನೀಡಲಾಗಿದೆ.

ಜಲಾನಯನ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 36 ಫಲಾನುಭವಿಗಳಿಗೆ ರೂ. 60 ಲಕ್ಷ, ಪಿಎಂಕೆಎಸ್‌ ವೈ -(ಓಐ) ಯೋಜನೆಯಡಿಯಲ್ಲಿ 1,722 ಫಲಾನುಭವಿಗಳಿಗೆ ರೂ.105.71 ಲಕ್ಷ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 3,47,250 ಫಲಾನುಭವಿಗಳಿಗೆ ರೂ. 1,416.01 ಲಕ್ಷ, ರಾಷ್ಟ್ರೀಯ ಸುಸ್ತಿರ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ 120 ಫಲಾನುಭವಿಗಳಿಗೆ ರೂ. 85 ಲಕ್ಷ, ಪಿಎಂಕೆಎಸ್‌ವೈ (WDC) ಯೋಜನೆಯಡಿಯಲ್ಲಿ 3,265 ಫಲಾನುಭವಿಗಳಿಗೆ ರೂ.876.11 ಲಕ್ಷ, ರಿವಾರ್ಡ್ ಯೋಜನೆಯಡಿಯಲ್ಲಿ 1,432 ಫಲಾನುಭವಿಗಳಿಗೆ ರೂ. 530 ಲಕ್ಷ ನೀಡಲಾಗಿದೆ. ಒಟ್ಟಾರೆ ಕಲಬುರಗಿ ಜಿಲ್ಲೆಯಲ್ಲಿ ಜಲಾನಯನ ಇಲಾಖೆಯಿಂದ 3,53,825 ಫಲಾನುಭವಿಗಳಿಗೆ ಸುಮಾರು ರೂ. 3072.83 ಲಕ್ಷ ದಷ್ಟು ಸಹಾಯಧನ ನೀಡಲಾಗಿದೆ.

ಕರ್ನಾಟಕ ನರೇಗಾ ಅಡಿಯಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ 2023 ರವರೆಗೆ 50.03 ಲಕ್ಷ ಮಾನವ ದಿನಗಳ (Person days) ಸೃಜಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here