ಶಹಾಬಾದ: ಕೋವಿಡ್‍ಕ್ಕಿಂತಲೂ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ನಿಲ್ಲಬೇಕೆಂದು ಆಗ್ರಹಿಸಿ ಮಂಗಳವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಸಂಸದ ಡಾ.ಉಮೇಶ ಜಾಧವ ಅವರಿಗೆ ಮನವಿ ಸಲ್ಲಿಸಿದರು.
ಅವರು ರಾವೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಬೇಟಿ ಮಾಡಿ ಮನವಿ ಸಲ್ಲಿಸಿದರು.
ಮಾತನಾಡಿದ ಪ್ರತಿಭಟನಾಕಾರರು ನಗರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ.ಇಲ್ಲಿನ ಜನರಿಗೆ ಕಲಬುರಗಿಗೆ, ಸೋಲಾಪೂರಗೆ ಹೋಗಲೂ ತೊಂದರೆಯಾಗುತ್ತಿದೆ. ನೌಕರಸ್ಥರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಕೇವಲ ಕಡಿಮೆ ಜನಸಂಖ್ಯೆ ಹೊಂದಿರುವ ಚಿತ್ತಾಪೂರ ರೇಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತಿದೆ.ಅದೇ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ರೈಲು ನಿಲುಗಡೆಯಾಗುತ್ತಿಲ್ಲ.ಕೂಡಲೇ ರೈಲು ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅದಕ್ಕೆ ಸಮಸದ ಡಾ.ಉಮೇಶ ಜಾಧವರು ಈಗಾಗಲೇ ನಾನು ಕೂಡ ಮನವಿ ಮಾಡಿದ್ದೆನೆ.ಆದಷ್ಟು ಬೇಗನೆ ರೈಲು ನಿಲ್ಲಿಸಲು ಪ್ರಯತ್ನ ಪಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ಬಿಎಸ್‍ಪಿಯ ಅಧ್ಯಕ್ಷ ಶಿವಶಾಲಕುಮಾರ ಪಟ್ಟಣಕರ್,ಉಪಾಧ್ಯಕ್ಷ ಆಂಜನೇಯ ಕುಸಾಳೆ, ಕಾರ್ಯದರ್ಶಿ ಪುನೀತ ಹಳ್ಳಿಕರ್, ಶೇಖ ಬಾಬು ಉಸ್ಮಾನ,ಕಿರಣ ಜಡಗಿಕರ್ ಸೇರಿದಂತೆ ಅನೇಕರು ಹಾಜರಿದ್ದರು.