ಬೆಳೆ ನಾಶ: ಮಾಜಿ ಶಾಸಕ ನರಿಬೋಳ್ ಸಹೋದರ ಸೇರಿ 15 ಜನರ ವಿರುದ್ಧ ಕ್ರಮಕ್ಕೆ ಆಗ್ರಹ

0
1014

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನರಿಬೋಳ್ ಗ್ರಾಮದ ಸರ್ವೆ ನಂಬರ್ ೨೨೨ರಡಿ ೧೪-೧೮ ಗುಂಟೆ ಜಮೀನಿನಲ್ಲಿ ೮ ಎಕರೆ ಹೊಲದಲ್ಲಿ ಬೆಳೆದಿದ್ದ ಹತ್ತಿಯನ್ನು ನಾಶ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಅವರ ಸಹೋದರ ಬಸುಗೌಡ ತಂದೆ ಶಿವಲಿಂಗಪ್ಪ ಪಾಟೀಲ್ ಸೇರಿ ೧೫ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೊಲದ ರೈತ ಮರೆಣ್ಣ ತಂದೆ ತಿಪ್ಪಣ್ಣ ಅವರು ಇಲ್ಲಿ ಒತ್ತಾಯಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ಬೆಳೆ ನಾಶ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಪೋಲಿಸ್ ಠಾಣೆಗೆ ಹಾಗೂ ಪೋಲಿಸ್ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಳೆದ ೨೦ರಂದು ಬೆಳಂಬೆಳಿಗ್ಗೆ ೭-೩೦ರ ಸುಮಾರಿಗೆ ಶರಣಪ್ಪ ತಂದೆ ಸಾಯಬಣ್ಣ, ಬಸಪ್ಪ ತಂದೆ ಭೀಮರಾಯ್ ದೊಡ್ಡಮನಿ, ಈಶಪ್ಪ ತಂದೆ ಬಸಪ್ಪ ದೊಡ್ಡಮನಿ, ಅಭಿಮನ್ಯು ತಂದೆ ಮೂಕಪ್ಪ ತಳಗೇರಿ, ಮಲ್ಲಿನಾಥ್ ತಂದೆ ಬಸಪ್ಪ ದೊಡ್ಡಮನಿ, ಸಾಯಬಣ್ಣ ತಂದೆ ಬಸಪ್ಪ ದೊಡ್ಡಮನಿ, ನಿಂಗಪ್ಪ ತಂದೆ ದ್ಯಾವಪ್ಪ ದೊಡ್ಡಮನಿ, ಮಹೇಶ್ ತಂದೆ ದ್ಯಾವಪ್ಪ ದೊಡ್ಡಮನಿ, ದೇವಪ್ಪಾ ತಂದೆ ಮರೆಪ್ಪಾ ಹೊಟ್ಟಿ, ಬಸಪ್ಪ ತಂದೆ ಬಾಬುರಾಯ್, ಸಿದ್ದಪ್ಪ ತಂದೆ ಬಸಪ್ಪ ತಳವಾರ್, ದೇವಪ್ಪಾ ತಂದೆ ಬಸಪ್ಪಾ ದೊಡ್ಡಮನಿ, ಅಬ್ಬಾಸ್ ಅಲಿ ತಂದೆ ಮಶಾಕ್ ತೆಲಗಾಣಿ, ಶರಣಪ್ಪ ಮಾರಡಗಿ (ಟ್ರ್ಯಾಕ್ಟರ್ ಚಾಲಕ) ಹಾಗೂ ಬಸುಗೌಡ ತಂದೆ ಶಿವಲಿಂಗಪ್ಪ ಪಾಟೀಲ್ ಅವರ ಕುಮ್ಮಕ್ಕಿನಿಂದ ಬೆಳೆ ನಾಶ ಮಾಡಿದ್ದಾರೆ. ನನಗೆ ಜೀವ ಉಳಿಸಿಕೊಳ್ಳಲು ನಾನು ಊರ ಕಡೆಗೆ ಬಂದೆ. ಜೀವ ಭಯದಿಂದಾಗಿ ದೂರು ದಾಖಲಿಸಲು ಆಗಲಿಲ್ಲ ಎಂದು ಅವರು ಹೇಳಿದರು.

ಈಗ ಹತ್ತಿ ಬೆಳೆ ನಾಶ ಕುರಿತಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಜೇವರ್ಗಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿರುವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತನ ಪತ್ನಿ ಶ್ರೀಮತಿ ಸಿದ್ಧಲಿಂಗಮ್ಮ, ಪುತ್ರರಾದ ಮಲ್ಲಿಕಾರ್ಜುನ್ ಹಾಗೂ ಸುರೇಶ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here