ವಿರೋಧ ಪಕ್ಷದ ನಾಯಕರಿಗೆ ಅಭಿನಂದನೆ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಜಿ. ತಡಕಲ

0
27

ಆಳಂದ; ತಾಲ್ಲೂಕಿನ ರೈತರು ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದು,ಅನೇಕ ಗ್ರಾಮಗಳಲ್ಲಿ ಕುಡಿಯಲು ನೀರು ಸಿಗದೆ ಜನರು ಪರದಾಡುತಿದ್ದು ಜಾನುವಾರುಗಳು ನೀರು ಆಹಾರ ಸಿಗದೆ ಸಾವನ್ನಪ್ಪುತಿದ್ದು ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಶಾಸಕರು ರೈತರ ಕೈಗೆ ಸಿಗುತ್ತಿಲ್ಲ, ಇಂತಹ ಭೀಕರ ಬರಗಾಲ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ತತಕ್ಷಣವೇ ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮಕ್ಕೆಆಗಮಿಸಿ ರೈತರ ಕಷ್ಟದಲ್ಲಿ ಭಾಗಿಯಾಗಿ ತಾಲ್ಲೂಕಿನ ರೈತರಿಗೆ ಮಾನಸಿಕ ಸ್ಥೈರ್ಯ ಕೊಟ್ಟು, ಧೈರ್ಯ ತುಂಬಿರುವಂತಹ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ ಮತ್ತು  ಮಾಜಿ ಶಾಸಕ ಸುಭಾಷ. ಆರ್. ಗುತ್ತೇದಾರ ಅವರಿಗೆ ಸಮಸ್ತ ಕಡಗಂಚಿ ಗ್ರಾಮದ ರೈತರ ಪರವಾಗಿ ಕೆಕೆಆರಟಿಸಿ ಮಾಜಿ ನಿರ್ದೇಶಕ , ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ ಜಿ. ತಡಕಲ ಕಡಗಂಚಿ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here