ಸೇಡಂನಲ್ಲಿ ನ.26 ರಂದು `ಅಮ್ಮ ಪ್ರಶಸ್ತಿ’ ಪ್ರದಾನ; ಸಚಿವ ಡಾ.ಶರಣಪ್ರಕಾಶ ಪಾಟೀಲ `ಅಧ್ಯಕ್ಷತೆ’

0
69

ಸೇಡಂ; ಇಲ್ಲಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ `ಅಮ್ಮ ಪ್ರಶಸ್ತಿ-23’ ಪ್ರದಾನ ಸಮಾರಂಭವು ಇದೇ ನ. 26 ರಂದು ಸಂಜೆ 5.30 ಕ್ಕೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

23 ನೇ ವರ್ಷದ ಸಂಭ್ರಮದ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೂಜ್ಯ ಡಾ.ಶ್ರೀ ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹರಿಹರ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.

Contact Your\'s Advertisement; 9902492681

ಸಮಾರಂಭವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ವಹಿಸುವರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಸಂಸ್ಕøತಿ ಚಿಂತಕರಾದ ಎಸ್.ಜಿ.ಸಿದ್ಧರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸಂಸ್ಕøತಿ ಮತ್ತು ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿ ಬೆಂಗಳೂರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕರು ಹಾಗು ಲೇಖಕರಾದ ಡಾ.ವಿಕ್ರಮ ವಿಸಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ನಿವೃತ್ತ ಮೇಷ್ಟ್ರು ದಿ.ನಾಗಪ್ಪ ಮಾಸ್ಟರ್ ಅವರ ಸ್ಮರಣಾರ್ಥ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕಿಗಾಗಿ ಎರಡು ಹೊಲಿಗೆ ಮಷಿನ್‍ಗಳನ್ನು ವಿತರಿಸಲಾಗುವುದು. ಈ ಸಂದರ್ಭದಲ್ಲಿ ಕಲಬುರಗಿಯ ಸುಕಿ ಸಾಂಸ್ಕøತಿಕ ತಂಡದಿಂದ ಅಮ್ಮನ ಹಾಡುಗಳ ಗಾಯನ ನಡೆಯಲಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

`ಅಮ್ಮ ಪ್ರಶಸ್ತಿ’ ಪುರಸ್ಕøತರು : ಕೆ.ಪಿ.ಮೃತ್ಯುಂಜಯ (`ಉಳಿದುಬಿಡು ಒಂದು ಬಿಂದುವಾಗಿ’), ಚೈತ್ರಾ ಶಿವಯೋಗಿಮಠ (`ಪೆಟ್ರಿಕೋರ್’), ದಯಾ ಗಂಗನಘಟ್ಟ (`ಉಪ್ಪುಚ್ಚಿ ಮುಳ್ಳು’),: ಕೃಷ್ಣನಾಯಕ (`ಕಾಂತಾಮಣಿಯ ಕನಸುಗಳು’), ಸಂತೋಷಕುಮಾರ ಮೆಹಂದಳೆ (`ವೈಜಯಂತಿಪುರ’), ಡಾ.ಸಿ. ಚಂದ್ರಪ್ಪ (`ಅಶೋಕ’), ಡಾ.ಮಿರ್ಜಾ ಬಷೀರ್ (`ಗಂಗೆ ಬಾರೆ ಗೌರಿ ಬಾರೆ’), ಸುಚಿತ್ರಾ ಹೆಗಡೆ (`ಜಗವ ಸುತ್ತುವ ಮಾಯೆ’), ಡಾ.ಸ್ವಾಮಿರಾವ ಕುಲಕರ್ಣಿ (`ದಾಸ ಸಾಹಿತ್ಯ: ದೃಷ್ಟಿ ಸೃಷ್ಟಿ’), ನಾಗೇಶನಾಯಕ (`ಕಾಡುವ ಕವಿತೆ’)

`ಅಮ್ಮ ಗೌರವ’ ಪುರಸ್ಕಾರ ಪಡೆದವರು : ಡಾ.ಓಂಪ್ರಕಾಶ ಪಾಟೀಲ ಊಡಗಿ (ಆರೋಗ್ಯ ಕ್ಷೇತ್ರ), ನರಸಿಂಗರಾವ ಪಾಟೀಲ ಚಾಂಗಲೇರ (ಆಧ್ಯಾತ್ಮ ಕ್ಷೇತ್ರ), ಎನ್.ಶೇಖರರೆಡ್ಡಿ ಬೆಂಗಳೂರು (ಸಮಾಜ ಸೇವೆ – ಸಂಘಟನೆ), ಶಶಿಕಲಾ ಮಕ್ತಾಲ್ ಯಾದಗಿರಿ (ಶೈಕ್ಷಣಿಕ ಸೇವೆ-ತ್ಯಾಗಮಯಿ), ಶೇಖ್ ಮಹೆಬೂಬ ಸೇಡಂ (ಶೈಕ್ಷಣಿಕ ಸೇವೆ).

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here