ಕಲಬುರಗಿ: ಬುಧವಾರ ಜಿಲ್ಲಾ ನೇಕಾರರ ಒಕ್ಕೂಟದ ಕಚೇರಿಗೆ ಖ್ಯಾತ ನಟ ಪ್ರೇಮ ಅವರು ಭೇಟಿ ನೀಡಿದರು.
ಕಚೇರಿಯಲ್ಲಿ ಮಾತನಾಡಿದ ಅವರು ರಾಜಕೀಯ ನಾಯಕರ ಜನ್ಮ ದಿನದ ನಿಮಿತ್ತ ನಗರಕ್ಕೆ ಆಗಮಿಸಿದ ವೇಳೆ ನೇಕಾರರ ಒಕ್ಕೂಟದ ಕಚೇರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಸಮುದಾಯದ ಪ್ರಧಾನ ಕಾರ್ಯದರ್ಶಿಗಳಾದ ಮ್ಯಾಳಗಿ ಚಂದ್ರಶೇಖರ್ ರವರ ಕೋರಿಕೆ ಮೇರೆಗೆ ಮತ್ತು ಜಿಲ್ಲಾ ನೇಕಾರ ಒಕ್ಕೂಟದ ನೂತನ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಸಂಗಾ ರವರ ಪ್ರೀತಿಗೆ ಮಣಿದು ಬರಲೇ ಬೇಕಾಯಿತು. ಅವಕಾಶ ಕೊಟ್ಟ ಎಲ್ಲಾ ನನ್ನ ಯುವ ಮಿತ್ರರಿಗೆ ಹಾಗೂ ಖರ್ಗೆ ಅಭಿಮಾನಿ ಬಂಧುಗಳಿಗೆ ಅಭಿನಂದನೆ ವ್ಯಕ್ತಪಡಿಸಿದರು.
ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ ಯವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು (ಸಂಗಾ ಮತ್ತು ಸುಲ್ತಾನಪೂರ್) ಜೋಡಿತ್ತು ಗಳಾಗಿ ನಟನನ್ನು ಶಾಲು ಹೊದಿಸಿ, ನೂಲಿನ ಹಾರ ಹಾಕಿ, ಧರ್ಮ ಗುರು ಶ್ರೀ ದಾಸಿಮಯ್ಯ ನವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.
ಸಮುದಾಯದ ಹೆಮ್ಮೆಯ ನಟರಾಗಿ ರಾಜ್ಯಾದ್ಯಂತ ಮಿಂಚ್ಚುತ್ತಿರುವ ನಾಯಕ ನಟರಾಗಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಿ ಪಾಲ್ಗೊಂಡು ಪ್ರೋತ್ಸಾಹ ನೀಡುವ ನಿಮ್ಮ ಬದ್ದತೆ ಇನ್ನೂ ಎತ್ತರಕ್ಕೆ ತಲುಪಿ, ಸಮುದಾಯದ ಪ್ರವರ್ಧಮಾನಕ್ಕೆ ಪೂರಕವಾಗಿಲಿ ಎಂದು ಕೋರಿದರು. ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್ ಸಂಗಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಛಾಯಾಗ್ರಾಹಕ ರಾಜು ಕೋಸ್ಟಿ, ಒಕ್ಕೂಟದ ಖಜಾಂಚಿ ಶ್ರೀನಿವಾಸ ಬಲಪೂರ್, ಕಾನೂನು ಸಲಹೆಗಾರ ಶಿವಲಿಂಗಪ್ಪಾ ಅಷ್ಟಗಿ, ಡಾ. ಬಸವರಾಜ ಚನ್ನಾ, ಅಶೋಕ್ ಬುಳ್ಳಾ ಇತರರು ಉಪಸ್ಥಿತರಿದ್ದರು, ಕೊನೆಯಲ್ಲಿ ನ್ಯಾಯವಾದಿ ಜೇ. ವಿನೋದಕುಮಾರ, ತುರ್ತು ಕರೆಯ ಮೇರೆಗೆ ಆಗಮಿಸಿದ ಎಲ್ಲರಿಗೂ ವಂದಿಸಿದರು.