ಜಾಗೃತ ಮತದಾರರೇ ನಿಮ್ಮನ್ನು ಮಲಗಿಸಿದ್ದಾರೆ, ನಾವು ಸದಾ ಎಚ್ಚರದಲ್ಲಿದ್ದೇವೆ; ಶಾಸಕ ಅಲ್ಲಂಪ್ರಭು ತಿರುಗೇಟು

0
24
  • ದತ್ತಾತ್ರೇಯ ಪಾಟೀಲ್‌ ರೇವೂರ್‌ ಹೇಳಿಕೆಗೆ ದಕ್ಷಿಣ ಮತಕ್ಷೇತ್ರ ಕಾಂಗ್ರೆಸ್‌ ಶಾಸಕ ಅಲ್ಲಂಪ್ರಭು ತಿರುಗೇಟು

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕರು ನಿದ್ರೆಯಿಂದ ಎದ್ದೇಳಲಿ ಎಂಬ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್‌ ಹೇಳಿಕೆಗೆ ತಿರುಗೇಟು ನೀಡಿರುವ ಹಾಲಿ ಕಾಂಗ್ರೆಸ್‌ ಶಾಸಕರಾದ ಅಲ್ಲಂಪ್ರಭು ಪಾಟೀಲರು ದಕ್ಷಿಣ ಮತಕ್ಷೇತ್ರ ಅಭಿವೃದ್ಧಿ ಕಾಣದೆ ಕಳೆದ 2 ದಶಕದಿಂದ ನಿದ್ರೆಗೆ ಜಾರಿತ್ತು, ಇಲ್ಲಿನ ಜಾಗೃತ ಮತದಾರರು ನಿಮ್ಮನ್ನು ಈ ಬಾರಿ ಮಲಗಿಸಿದ್ದಾರೆ, ನಮಗೆ ಅವಕಾಶ ನೀಡಿದ್ದಾರೆ, ಮತದಾರರ ಯೋಗಕ್ಷೇಮಕ್ಕಾಗಿ ಸದಾಕಾಲ ಎಚ್ಚರದಲ್ಲಿಯೇ ಇದ್ದೇವೆ ಎಂದು ಮಾತಿನಲ್ಲೇ ಕುಟುಕಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕರು ಸುಲ್ತಾನಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಅವರು ಪಯಾಣಿಸುತ್ತಿದ್ದ ವಾಹನ ಅಪಘಾತಕ್ಕಿಡಾದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ತಾವು ತಕ್ಷಣ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸುವಂತೆ ಅಲ್ಲಿದ್ದ ಪಂಚಾಯ್ತಿ ಸಿಬ್ಬಂದಿ, ಪೊಲೀಸರಿಗೆ ಸೂಚನೆ ನೀಡದ್ದಲ್ಲದೆ ಮರುಕ್ಷಣದಲ್ಲೇ , ಗಾಯಾಳು ಕಾರ್ಮಿಕರು ದಾಖಲಾಗಿರುವ ಕಲಬುರಗಿ ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ, ಹಾಲು, ಹಣ್ಣು ಹಂಪಲು ಕೊಟ್ಟು ಬೇಗ ಗುಣಮುಖರಾಗಲು ಹಾರೈಸಿದ್ದಾಗಿ ಹೇಳಿದ್ದಾರೆ.

Contact Your\'s Advertisement; 9902492681

ಜಿಮ್ಸ್‌ ವೈದ್ಯರ ತಂಡವನ್ನೇ ಕರೆಯಿಸಿ ಕಾರ್ಮಿಕರ ಚಿಕಿತ್ಸೆಯಲ್ಲಿ ಯಾವುದೇ ತರಹದ ಲೋಪಗಳು ಆಗದಂತೆ ಎಚ್ಚರಿಕೆ ವಹಿಸುವಂತಯೂ ಖಡಕ್‌ ಸೂಚನೆ ನೀಡಿದ್ದಾಗಿ ಹೇಳಿರುವ ಶಾಸಕರು ಕಾರ್ಮಿಕರ ಅಪಘಾತ, ಅವರ ಬದುಕೇ ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿಯೂ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ನೀಡಿರುವ ರಾಜಕೀಯ ಪ್ರೇರಿತವಾಗಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ.

ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಮಾಜಿ ಶಾಸಕರು ಇಂತಹ ಹೇಳಿಕೆ ಯಾಕೆ ನೀಡಿದರೋ ಗೊತ್ತಿಲ್ಲ. ಮತದಾರರು ಇದನ್ನೆಲ್ಲ ಗಮನಿಸುತ್ತಾರೆ, ಯಾರಿಗೆ ಮಲಗಿಸಬೇಕು, ಯಾರಿಗೆ ಎಬ್ಬಿಸಬೇಕು ಎಲ್ಲವೂ ಮತದಾರರೇ ನಿರ್ಧಾರ ಮಾಡುತ್ತಾರೆಂದು ಅಲ್ಲಂಪ್ರಭು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಕಳೆದ 6 ತಿಂಗಳಲ್ಲಿ ನುಡಿದಂತೆ ನಡೆದಿದೆ. ಬಡವರ ಬದುಕಿಗೆ ನಮ್ಮ ಪಕ್ಷದ ಪಂಚ ಗ್ಯಾರಂಟಿಗಳು ವರವಾಗಿವೆ. ಬರಗಾಲದಲ್ಲಿಯೂ ಜನರಿಗೆ ಕೈತುಂಬ ಉದ್ಯೋಗ ನೀಡುತ್ತಿರುವ ಖಾತ್ರಿ ಯೋಜನೆ ಕಾಂಗ್ರೆಸ್‌ ನೇತೃತ್ವದ ಯೂಪಿಎ ಸರಕಾರದ ಕೊಡುಗೆ. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸದಾಕಾಲ ಸಾಮಾನ್ಯ ಜನರ, ಕಾರ್ಮಿಕರ ಕಲ್ಯಾಣದ್ದೇ ಚಿಂತೆ. ಜನರ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ತಾವು ಸದಾ ಮುಂದಿರೋದಾಗಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ಸ್ಪಷ್ಟಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here