ಜನಪದರಿಂದ ಕನ್ನಡ ಗಟ್ಟಿಯಾಗಿ ಬೆಳೆದಿದೆ; ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ

0
105

ಕಲಬುರಗಿ: ಇಂಗ್ಲೀಷ್ ಭಾಷೆಯ ಬಗ್ಗೆ ವ್ಯಾಮೋಹ ಬೇಡ. ಬೇರೆ ಭಾಷೆಗಳನ್ನು ಗೌರವಿಸೋಣ. ಆದರೆ ಕನ್ನಡಿಗರಾದ ನಾವು ಕನ್ನಡದಲ್ಲಿ ಮಾತನಾಡುವ, ಓದುವ, ಬರೆಯುವ, ವ್ಯವಹರಿಸುವ ಕನ್ನಡತನ ಪ್ರವೃತ್ತಿ ಎಂದಿಗೂ ಕೂಡಾ ಮರೆಯದಿರೋಣ. ಗ್ರಾಮೀಣ ಪ್ರದೇಶಗಳ ಅನಕ್ಷರಸ್ಥ ನಮ್ಮ ಪೂರ್ವಜರಾದ ಜನಪದರು ತಮ್ಮ ಹಾಡು, ಅಭಿನಯ, ಕಥೆಗಳು, ಕನ್ನಡದಲ್ಲಿಯೇ ಮಾತನಾಡುವ ಸಂಪೂರ್ಣವಾದ ಮಾತೃಭಾಷೆಯ ಪ್ರೀತಿಯ ಕನ್ನಡತನ ಪ್ರವೃತ್ತಿಯ ಮೂಲಕ ನಮ್ಮ ಕನ್ನಡವನ್ನು ಸಾವಿರಾರು ವರ್ಷಗಳಿಂದ ಗಟ್ಟಿಯಾಗಿ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಭಿಮತಪಟ್ಟರು.

ನಗರದ ಸುವರ್ಣ ಕನ್ನಡ ಭವನದಲ್ಲಿ ‘ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ’ಯ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಸಂಜೆ ಜರುಗಿದ ಕರ್ನಾಟಕ ರಾಜ್ಯೋತ್ಸವ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದಲಿತ ಮುಖಂಡ, ಸಮಾಜ ಸೇವಕ ಭೀಮರಾಯ ನಗನೂರ ಮಾತನಾಡಿ, ನಮ್ಮ ಹೆಮ್ಮೆಯ ಕನ್ನಡ ನಾಡಿಗೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ, ಪರಂಪರೆ ಹೊಂದಿದೆ. ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನು ಮಾಡಬೇಕಾಗಿದೆ. ಅನೇಕ ತ್ಯಾಗ,ಹೋರಾಟದ ಫಲವಾಗಿ ಕನ್ನಡ ನಾಡು ಉದಯವಾಗಿದೆ. ನಾಡಿನ ಕೀರ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡೋಣ ಎಂದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಝಾಕೀರ ಶೇಖ್, ರಾಜು ದೊಡ್ಡಮನಿ, ಸುನಿತಾ ಎಂ.ಕಲ್ಲೂರ, ಸವಿತಾ ಸಜ್ಜನ, ಮರೆಪ್ಪ ಎನ್.ಬಡಿಗೇರ, ಗುಂಡಮ್ಮ ದೊಡ್ಡಮನಿ, ಬಸಮ್ಮ ಎಸ್.ಭೀಮನೂರ, ಶಾಹೀದಾ ಬೇಗಂ ಅವರಿಗೆ ಸತ್ಕರಿಸಲಾಯಿತು. ಬಾಲ ಪ್ರತಿಭೆ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಪ್ರೀತಮ್ ಎಸ್.ಗುಡ್ಡಡಗಿ ‘ಗುಲಾಬಿ ಗೂಡು’ ಎಂಬ ಮಕ್ಕಳ ಕವನ ಸಂಕಲನ ಕೃತಿಯನ್ನು ರಚಿಸಿದ್ದು, ಇತ್ತಿಚಿಗೆ ದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ತಂದಿರುವ ಪ್ರಯುಕ್ತ ಬಾಲಕನಿಗೆ ವಿಶೇಷವಾಗಿ ಗೌರವಿಸಿ, ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸೇನೆಯ ಜಿಲ್ಲಾಧ್ಯಕ್ಷೆ ಮಾಯಾ ಎಸ್. ಸುಗೂರ್, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಎಚ್.ಬಿ.ಪಾಟೀಲ, ಎಂ.ಬಿ.ನಿಂಗಪ್ಪ, ಮಲ್ಲಿಕಾರ್ಜುನ ಎಸ್.ಮಾಳಗೆ, ಶಿವಲಿಂಗ ಹಾವನೂರ, ರಜಾಕ್ ಪಟೇಲ್, ನಾಗೇಂದ್ರಪ್ಪ ದಂಡೋತಿಕರ್, ಮೈಲಾರಿ ಶೆಳ್ಳಗಿ, ಗುಂಡಮ್ಮ, ಬಸಮ್ಮ ಎಸ್.ಭೀಮಪುರೆ, ಮಾಳಪ್ಪ ಪೂಜಾರಿ, ಸಂಜುಕುಮಾರ ಗುತ್ತೇದಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ರಾಣೋಜಿ ಸರಡಗಿ ಮತ್ತು ಸಾಬಮ್ಮ ಗೂಪನ್ ಅವರಿಂದ ನೃತ್ಯ ಪದರ್ಶನ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here