ಸಂವಿಧಾನ ದಿನದ ಅಂಗವಾಗಿ ಶೋಷಿತರ ಜಾಗೃತಿ ದಿನಾಚರಣೆ; ದಲಿತ ಸಂಘರ್ಷ ಸಮಿತಿ ಸುದ್ದಿಗೋಷ್ಠಿ

0
22

ಸುರಪುರ: ಸಂವಿಧಾನ ದಿನದ ಅಂಗವಾಗಿ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ:ಬಿ.ಕೃಷ್ಣಪ್ಪನವರು ಸ್ಥಾಪಿತ ಸಂಘಟನೆಯಿಂದ ಇದೇ ತಿಂಗಳು 28ನೇ ತಾರಿಖು ಶೋಷಿತರ ಜಾಗೃತಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸಂಘಟನೆ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ,ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ 28ನೇ ತಾರಿಖು ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಸುರಪುರ ಅರಸು ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ,ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಭಾಗವಹಿಸಲಿದ್ದು,ನಮ್ಮ ಸಂಘಟನೆ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ,ಅತಿಥಿಗಳಾಗಿ ಸಂಘದ ರಾಜ್ಯ ಸಂ.ಸಂಚಾಲಕರಾದ ಹನುಮಂತಪ್ಪ ಕಾಕರಗಲ್,ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ಟಿಹೆಚ್‍ಓ ಡಾ:ಆರ್.ವಿ ನಾಯಕ,ಉದ್ಯಮಿ ಧರ್ಮಣ್ಣ ಡಿ.ಎಮ್,ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಬಾಂಬೇಕರ್,ನಾಗಣ್ಣ ಕಲ್ಲದೇವನಹಳ್ಳಿ,ರಾಹುಲ್ ಹುಲಿಮನಿ,ಮಲ್ಲಿಕಾರ್ಜುನ ಕ್ರಾಂತಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳ ಸಾವಿರಾರು ಜನ ನಮ್ಮ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂ.ಸಂಚಾಲಕರುಗಳಾದ ನಾಗರಾಜ ಓಕಳಿ,ಎಚ್.ಆರ್.ಬಡಿಗೇರ,ಧರ್ಮಣ್ಣ ಹೊಸಮನಿ,ತಾಲೂಕು ಸಂಚಾಲಕ ರಮೇಶ ಪೂಜಾರಿ ಹಾಗೂ ಮುಖಂಡರಾದ ಹಣಮಂತ ದೊಡ್ಮನಿ ಶೆಳ್ಳಗಿ,ಬಸವರಾಜ ಮುಷ್ಠಳ್ಳಿ,ಮಾನಪ್ಪ ಶೆಳ್ಳಗಿ,ಚಂದ್ರು ಗುತ್ತೇದಾರ,ಸಾಯಬಣ್ಣ ಎಂಟಮನಿ,ಚಂದ್ರು ದಿವಳಗುಡ್ಡ,ಹುಲಗಪ್ಪ ಶೆಳ್ಳಗಿ,ಅನಿಲಕುಮಾರ ಕಟ್ಟಿಮನಿ,ಭೀಮಣ್ಣ ಅಡ್ಡೊಡಗಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here