ಸುರಪುರ: ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಜನುಮ ದಿನವನ್ನು ಅಭಿಮಾನಿಗಳು ನಗರದಲ್ಲಿನ ಅನಾಥಾಶ್ರಮದಲ್ಲಿ ಮಕ್ಕಳೊಂದಿಗೆ ಆಚರಿಸಿದರು.
ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸೂಗುರೇಶ ವಾರದ ಅವರ ನೇತೃತ್ವದಲ್ಲಿ ಅನಾಥಾಶ್ರಮದಲ್ಲಿನ ಮಕ್ಕಳು ಕೇಕ್ ಕತ್ತರಿಸಿ ನಂತರ ಸಿಹಿ ಹಂಚಿ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ಅಭಿಮಾನಿಗಳು ಕಾರ್ಯಕರ್ತರು ಅದ್ಧೂರಿ ಆಚರಣೆ ಮಾಡಬೇಡಿ ಎಂದು ತಿಳಿಸಿದ್ದರಿಂದ,ಅನಾಥಾಶ್ರಮದಲ್ಲಿ ಸರಳವಾಗಿ ಜನುಮ ದಿನ ಆಚರಿಸಲಾಗುತ್ತಿದೆ ಎಂದು ಸೂಗುರೇಶ ವಾರದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶರಣು ಅರಕೇರಿ,ನಾಗರಾಜ ಸೇಡಂ,ಶಮ್ಮು ಬಿಸ್ತಿ,ಮಂಜುನಾಥ ಸ್ವಾಮಿ,ಮಮ್ಮು ಬಿಸ್ತಿ,ಅಂಬ್ರೇಶ ಕುಂಬಾರ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.