ಕಲಬುರಗಿ: ಕರ್ನಾಟಕ ಯುವ ಶಕ್ತಿ ಸಂಘಟನೆ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ನೀಡಲಾಗುವ ಶಕ್ತಿ ಪ್ರಶಸ್ತಿಗೆ ಟಿಪ್ಪು ಸುಲ್ತಾನ ಕಮಿಟಿಯ ಚಿಂಚೋಳಿ ತಾಲೂಕು ಅಧ್ಯಕ್ಷ ಮೋಹಿನ್ ಮೋಮಿನ್ ಅವರು ಆಯ್ಕೆ ಆಗಿದ್ದಾರೆ.
ಭಾನುವಾರ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂಘಟನೆ ವತಿಯಿಂದ ಜರುಗಲಿರುವ 68 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ನಡೆಯಲಿದೆ.