ರೇವಗ್ಗಿ ಕಮಲಾಪುರಗೆ ಸೇರ್ಪಡೆ ವಿಚಾರ: ಪರಿಶೀಲಿಸಿ ಸೂಕ್ತ ಕ್ರಮ

0
40

ಕಮಲಾಪುರ: ಸಾರ್ವಜನಿಕ ಅಭಿಪ್ರಾಯ, ನ್ಯಾಯಾಲಯದ ಆದೇಶದ ಮೇರೆಗೆ ಅರಣಕಲ ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮ ಹಾಗೂ ತಾಂಡಾಗಳನ್ನು ಸರಕಾರ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಗೊಳಿಸಿದೆ. ಕೆಲವರು ಕಾರಣವಿಲ್ಲದೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಬಾರದು’ ಎಂದು ಅರಣಕಲ, ರೇವಗ್ಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಗೆ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಸರಕಾರದ ವಿವಿಧ ಯೋಜನೆಗಳ ಪರಿಶೀಲನೆ ಹಿನ್ನೆಲೆಯಲ್ಲಿ ಕಮಲಾಪುರ ತಾಲ್ಲೂಕಿಗೆ ಭೇಟಿ ನೀಡಿರುವ ವೇಳೆ ಗ್ರಾಮಸ್ಥರು ಮಾತನಾಡಿ ಅರಣಕಲ ಗ್ರಾಮದಿಂದ ಕಮಲಾಪುರ ತಾಲ್ಲೂಕು ಕೇಂದ್ರ ಕೇವಲ 15 ಕಿ.ಮೀ ಅಂತರದಲ್ಲಿದೆ. ನೇರ ಸಂಪರ್ಕ ವ್ಯವಸ್ಥೆ ಇದೆ. ಶಾಲಾ, ಕಾಲೇಜು, ಸಾರ್ವಜನಿಕ ಕೆಲಸಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಪಂಚಾಯಿತಿಯಿಂದ ಠರಾವು ಹೊರಡಿಸಿದ್ದೇವೆ. ಅನೇಕ ಬಾರಿ ಧರಣಿ ನಡೆಸಿದ್ದೇವೆ. ಕೊನೆಗೆ ನ್ಯಾಯಾಲಯದ ಮೊರೆಹೋಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ, ಅರಣಕಲ ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮ, ತಾಂಡಾಗಳನ್ನು ಕಮಲಾಪುರಕ್ಕೆ ಸೇರಿಸಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸಂಸದರು ಹಾಗೂ ಶಾಸಕರು, ಇದನ್ನು ವಿರೋಧಿಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೆ, ಇದನ್ನು ಕೈಬಿಟ್ಟು ಅರಣಕಲ ಗ್ರಾ.ಪಂ ಅನ್ನು ಕಾಳಗಿ ತಾಲ್ಲೂಕಿಗೆ ಮರು ಸೇರ್ಪಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾರ್ವಜನಿಕರನ್ನು ತೊಂದರೆಗೀಡು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಮಲಾಪುರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವವರ ಮನವಿಯನ್ನು ಪುರಸ್ಕರಿಸಬಾರದು. ನಮ್ಮನ್ನು ಕಮಲಾಪುರ ತಾಲ್ಲೂಕಿನಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನೂಮ್ ಕನ್ಯಾ ಪ್ರೌಢಶಾಲೆಗೆ ಭೇಟಿ ಮತಗಟ್ಟೆ ವೀಕ್ಷಿಸಿ, ಸರ್ಕಾರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ತಹಶೀಲ್ದಾರ್‌ ಮೋಸಿನ್‌ ಅಹಮ್ಮದ್‌, ತಾ.ಪಂ. ಇಒ ಅಂಬ್ರೀಶ ಪಾಟೀಲ, ಪ.ಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಗುರುರಾಜ ಮಾಟೂರ, ಸಂತೋಷ ರಾಂಪುರೆ, ಅರಣಕಲ ಗ್ರಾಮದ ಸಿದ್ದಣಗೌಡ ಗೊಳೆದ, ವೀರೇಶ ಕಂಗೊಂಡ, ಅಮೃತ ಕೋರಿ, ದಶರಥ ವಗ್ಗಿ, ರೇವಗ್ಗಿ ಗ್ರಾಮದ ಗಂಗಾಧರ ಸ್ವಾಮಿ, ಅಜೀಮ ಪಟೇಲ, ಸಿದ್ದು ವೀರನಗುಡಿ, ಸುನೀಲ ಪಾಟೀಲ, ಶರಣು ಮಗಿ, ಶಾಂತಪ್ಪ ನಾಗೂರ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here